Categories: CrimeLatest

ಮುಂಡಗೋಡದಲ್ಲಿ ಅರಣ್ಯಾಧಿಕಾರಿಗಳ ದಾಳಿ: ಮನೆಯಲ್ಲಿ 35 ಕೆ.ಜಿ ಕಾಡುಹಂದಿ ಮಾಂಸ ಪತ್ತೆ, ಓರ್ವ ಅರೆಸ್ಟ್; ಮತ್ತೊಬ್ಬ ಪರಾರಿ!

ಮುಂಡಗೋಡ: ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಕಾಡುಹಂದಿ ಮಾಂಸವನ್ನು ತುಂಡುಗಳಾಗಿ ವಿಂಗಡಿಸಿ ಅಡುಗೆ ತಯಾರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 35 ಕೆ.ಜಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಬಂಧಿತನನ್ನು ಬೆಂಗಳೂರಿನ ಮೂಲದ ಪ್ರಜ್ವಲ್ ಎಂದು ಗುರುತಿಸಲಾಗಿದ್ದು, ಪರಾರಿಯಾದ ಆರೋಪಿಯನ್ನು ಮುಂಡಗೋಡ ಪಟ್ಟಣದ ಗಾಂಧಿನಗರ ನಿವಾಸಿ ಸುರೇಶ ಕೊರವರ ಎಂದು ತಿಳಿದುಬಂದಿದೆ.

ಗಾಂಧಿನಗರದಲ್ಲಿರುವ ಸುರೇಶ ಕೊರವರ ಅವರ ಬಾಡಿಗೆ ಮನೆಯಲ್ಲಿ ಇಬ್ಬರೂ ಸೇರಿಕೊಂಡು ಕಾಡುಹಂದಿ ಮಾಂಸವನ್ನು ಪಾಲು ಮಾಡಿ ಅಡುಗೆ ತಯಾರಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿದ್ದಾರೆ. ಈ ವೇಳೆ ಅರಣ್ಯಾಧಿಕಾರಿಗಳನ್ನು ಕಂಡು ಓರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಮತ್ತೋರ್ವನನ್ನು ವಶಕ್ಕೆ ಪಡೆಯಲಾಗಿದೆ. ಮನೆಯಲ್ಲಿದ್ದ ಸುಮಾರು 35 ಕೆ.ಜಿ ಕಾಡುಹಂದಿ ಮಾಂಸವನ್ನು ಜಪ್ತಿ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಅರಣ್ಯ ಮೊಕದ್ದಮೆ ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಾರಿಯಾಗಿರುವ ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಮುಂಡಗೋಡ ಆರ್‌ಎಫ್‌ಒ ಅಪ್ಪಾರಾವ್ ಕಲಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿಗಳಾದ ಅರ್ಜುನ ಮೊರಬ, ಸುನಿತಾ ಬಿ.ಎಂ., ಗಸ್ತು ಅರಣ್ಯ ಪಾಲಕರಾದ ಮುಸ್ತಾಕ್ ಅಲಿ ಒಂಟಿ, ಮುತ್ತುರಾಜ ಹಳ್ಳಿ, ಸಂತೋಷ ಜಲ್ಲೇರ, ರಾಘವೇಂದ್ರ ಅಮ್ಮಿನಬಾವಿ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಭ್ರಷ್ಟರ ಬೇಟೆ

Recent Posts

ಬಡವರ ಸ್ವಂತ ಮನೆ ಕನಸು ನನಸಾಗಿಸಲು ಸರ್ಕಾರದ ಮಾಸ್ಟರ್ ಪ್ಲ್ಯಾನ್; ಶೇ.50 ರಿಯಾಯಿತಿಯಲ್ಲಿ 30X40 ಅಡಿ ನಿವೇಶನ!

ಕರ್ನಾಟಕದಲ್ಲಿ ಸ್ವಂತ ಮನೆ ಹಾಗೂ ನಿವೇಶನ ಹೊಂದುವ ಕನಸು ಕಾಣುತ್ತಿರುವ ಬಡ ಮತ್ತು ಶ್ರಮಿಕ ವರ್ಗದ ಜನರಿಗೆ ರಾಜ್ಯ ಸರ್ಕಾರ…

2 days ago

ಡಿವೋರ್ಸ್ ಪೇಪರ್‌ಗೆ ಸಹಿ ಹಾಕುವ ಕೊನೇ ಕ್ಷಣದಲ್ಲಿ ಬದಲಾದ ಪತ್ನಿಯ ಮನಸ್ಸು; ಪತಿಯ ಒಂದು ನಡೆಗೆ ಓಡೋಡಿ ಬಂದು ತಬ್ಬಿಕೊಂಡಳು!

ವಿಚ್ಛೇದನದ ಮೂಲಕ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದ ದಂಪತಿ, ಕೊನೆಯ ಕ್ಷಣದಲ್ಲಿ ಮತ್ತೆ ಒಂದಾದ ಅಪರೂಪದ ಘಟನೆ ಇದೀಗ…

2 days ago

ಗೃಹಲಕ್ಷ್ಮಿ ಹಣದ ಆಸೆಗೆ ಅಜ್ಜಿಯನ್ನೇ ಕೊಂದ ಮೊಮ್ಮಗ: ಶವವನ್ನು ಡ್ಯಾಂಗೆ ಎಸೆದು ನಾಟಕವಾಡಿದ್ದ ಆರೋಪಿ ಬಂಧನ!

ಬೆಳಗಾವಿ: ಹೆತ್ತವರ ಪ್ರೀತಿಯಂತೆ ಮೊಮ್ಮಗನನ್ನು ಸಾಕಿ ಬೆಳೆಸಿದ್ದ ಅಜ್ಜಿಯನ್ನೇ ಹಣದ ಆಸೆಗೆ ಮೊಮ್ಮಗ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ…

2 days ago

ಸಾರಿಗೆ ಸಂಸ್ಥೆಯ ಚಾಲಕನ ಮನೆ ಮೇಲೆ ಲೋಕಾಯುಕ್ತ ದಾಳಿ: ಮೂರು ಮನೆ ಸೇರಿ ಹಲವು ಆಸ್ತಿಗಳ ದಾಖಲೆ ಪರಿಶೀಲನೆ!

ಹುಬ್ಬಳ್ಳಿ: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಕಂ…

2 days ago

ಗೌರಿಬಿದನೂರಿನಲ್ಲಿ ಆಘಾತಕಾರಿ ಘಟನೆ: ಇಬ್ಬರು ಪುಟ್ಟ ಮಕ್ಕಳಿಗೆ ವಿಷ ನೀಡಿ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ; ಮೂವರ ಸ್ಥಿತಿ ಗಂಭೀರ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಶಂಕೆ – ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಗೌರಿಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು…

2 days ago

ಕಾರಿನ ಗಾಜು ಒಡೆದು 12.20 ಲಕ್ಷ ರೂ. ದೋಚಿದ ಕಳ್ಳರು: ಗೌರಿಬಿದನೂರಿನಲ್ಲಿ ಹಾಡಹಗಲೇ ಕೃತ್ಯ

ಗೌರಿಬಿದನೂರು: ನಗರದ ಹೃದಯಭಾಗದಲ್ಲಿರುವ ಬಿ.ಎಚ್. ರಸ್ತೆಯಲ್ಲಿ ಹಾಡಹಗಲೇ ಕಳ್ಳರು ಕಾರಿನ ಗಾಜು ಒಡೆದು 12.20 ಲಕ್ಷ ರೂ. ನಗದು ದೋಚಿ…

3 days ago