Cinema

ಬೆತ್ತಲಾಗಿ ನಟಿಸಲ್ಲ, ಅನುರಾಗ್ ಕಶ್ಯಪ್ ಚಿತ್ರದ ಆಫರ್ ತಿರಸ್ಕರಿಸಿದ್ದೇಕೆ? ದಶಕಗಳ ಬಳಿಕ ಮೌನ ಮುರಿದ ನಟಿ ತೇಜಸ್ವಿನಿ ಕೊಲ್ಹಾಪುರೆ

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಬಹುಚರ್ಚಿತ ‘ಗುಲಾಲ್’ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ತಾವು ಏಕೆ ಕೈಬಿಟ್ಟೆ ಎಂಬುದನ್ನು ನಟಿ ತೇಜಸ್ವಿನಿ ಕೊಲ್ಹಾಪುರೆ ಹಲವು ವರ್ಷಗಳ ಬಳಿಕ ಬಹಿರಂಗಪಡಿಸಿದ್ದಾರೆ. ಸಿದ್ಧಾರ್ಥ್ ಕಣ್ಣನ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ತೇಜಸ್ವಿನಿ ಅವರ ಹೇಳಿಕೆಯಂತೆ, ಅನುರಾಗ್ ಕಶ್ಯಪ್ ಅವರಿಗೆ ಚಿತ್ರದ ಕಥೆ ಓದಲು ನೀಡಿದ್ದರು. ಕಥೆಯನ್ನು ಓದಿದ ಬಳಿಕ ತಾವು ಅಭಿನಯಿಸಬೇಕಿದ್ದ ಮಹಿಳಾ ಪಾತ್ರಕ್ಕೆ ನಿರೀಕ್ಷಿತ ಮಟ್ಟದ ಪ್ರಾಮುಖ್ಯತೆ ಇಲ್ಲವೆಂದು ಅನಿಸಿತು. ಜೊತೆಗೆ ಆ ಪಾತ್ರದಲ್ಲಿ ಬೆತ್ತಲೆ ದೃಶ್ಯಗಳಲ್ಲಿ ಅಭಿನಯಿಸುವ ಅಗತ್ಯವಿದೆ ಎಂದು ತಿಳಿಸಲಾಯಿತು. ಇದಕ್ಕೆ ತಾವು ಒಪ್ಪದ ಕಾರಣ ಚಿತ್ರದಿಂದ ಹೊರಬಂದೆ ಎಂದು ಅವರು ಹೇಳಿದ್ದಾರೆ.

“ಆ ರೀತಿಯ ದೃಶ್ಯದಲ್ಲಿ ನಟಿಸುವುದು ನನಗೆ ಸಾಧ್ಯವಿಲ್ಲ. ನಾನು ಹೀಗೆ ಮಾಡಿದರೆ ಮನೆಯವರೇ ನನ್ನನ್ನು ಒಪ್ಪುವುದಿಲ್ಲ ಎಂದು ಅನುರಾಗ್ ಅವರಿಗೆ ನೇರವಾಗಿ ಹೇಳಿದ್ದೆ. ಆದರೆ ಕಥೆಯ ಅವಶ್ಯಕತೆಯೇ ಅದು ಎಂದು ಅವರು ತಿಳಿಸಿದ್ದರು” ಎಂದು ತೇಜಸ್ವಿನಿ ನೆನಪಿಸಿಕೊಂಡಿದ್ದಾರೆ.

ನಂತರ ಆ ಪಾತ್ರದಲ್ಲಿ ಮಾಡೆಲ್ ಹಾಗೂ ನಟಿ ಜೆಸ್ಸಿ ರಾಂಧವಾ ಅಭಿನಯಿಸಿದರು. ಬಳಿಕ ಜೆಸ್ಸಿ ಆ ದೃಶ್ಯಗಳಲ್ಲಿ ನೇರವಾಗಿ ಅಲ್ಲ, ಬಾಡಿಸೂಟ್ ಧರಿಸಿ ನಟಿಸಿದ್ದರು ಎಂಬುದು ತಿಳಿಯಿತು. ಅದನ್ನು ನೋಡಿದ ನಂತರ, ತಾನೂ ಕೂಡ ಅದೇ ರೀತಿಯಲ್ಲಿ ಆ ಪಾತ್ರವನ್ನು ಮಾಡಬಹುದಿತ್ತು ಎಂಬ ಭಾವನೆ ಮೂಡಿತ್ತು ಎಂದು ತೇಜಸ್ವಿನಿ ಹೇಳಿದ್ದಾರೆ.

ವಿಶೇಷವೆಂದರೆ, ತೇಜಸ್ವಿನಿ ಅವರು ಅನುರಾಗ್ ಕಶ್ಯಪ್ ನಿರ್ದೇಶನದ ‘ಪಾಂಚ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಬೇಕಿತ್ತು. ಆದರೆ ಆ ಸಿನಿಮಾ ಬಿಡುಗಡೆಯಾಗದೇ ಉಳಿಯಿತು. ನಂತರ ಹಲವು ವರ್ಷಗಳ ಬಳಿಕ 2013ರಲ್ಲಿ ಬಿಡುಗಡೆಯಾದ ‘ಅಗ್ಲಿ’ ಚಿತ್ರದ ಮೂಲಕ ಅನುರಾಗ್ ಕಶ್ಯಪ್ ಹಾಗೂ ತೇಜಸ್ವಿನಿ ಮತ್ತೆ ಒಟ್ಟಾಗಿ ಕೆಲಸ ಮಾಡಿದರು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ತೇಜಸ್ವಿನಿ ಅವರಿಗೆ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಪ್ರಶಸ್ತಿ ನಾಮನಿರ್ದೇಶನವೂ ದೊರೆತಿತ್ತು.

ತೇಜಸ್ವಿನಿ ಕೊಲ್ಹಾಪುರೆ ತಮ್ಮ ನಟನಾ ಪಯಣವನ್ನು ‘ಮುಜೆ ಚಾಂದ್ ಚಾಹಿಯೇ’ ಧಾರಾವಾಹಿಯ ಮೂಲಕ ಆರಂಭಿಸಿದ್ದರು. ಬಳಿಕ ‘ರಾವಣನ್’, ‘ದಾಡಿ ಕಿ ಶಾದಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ಪತಿಯನ್ನೇ ಕೊಲ್ಲಲು ಪತ್ನಿಯ ಸ್ಕೆಚ್‌! ಪ್ರಿಯಕರನ ಮೊಬೈಲ್‌ನಲ್ಲಿ ಸಿಕ್ತು ಶಾಕಿಂಗ್ ಸಾಕ್ಷಿ..!

ಸೂರ್ಯಾಪೇಟೆ: ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತಿಯನ್ನೇ ಕೊಲೆ ಮಾಡಲು ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಸಂಚು…

8 hours ago

ಗಂಡ ನೈಟ್ ಡ್ಯೂಟಿಗೆ ಹೋದಾಗ ಮಕ್ಕಳಿಗೆ ನಿದ್ರೆ ಗುಳಿಗೆ; ಲವ್ವರ್ ಜೊತೆ ಪತ್ನಿಯ ಚಕ್ಕಂದ.. ಮಧ್ಯರಾತ್ರಿ ಮನೆಗೆ ಬಂದ ಗಂಡನಿಗೆ ಕಾದಿತ್ತು ಘೋರ ದುರಂತ!

ಸೋನ್‌ಭದ್ರ: ಗಂಡ ನೈಟ್ ಡ್ಯೂಟಿಗೆ ಹೋದ ಬಳಿಕ ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ, ಪ್ರಿಯಕರನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ ಪತ್ನಿ, ಕೊನೆಗೆ…

8 hours ago

ರೈಲ್ವೆ ಕಾಮಗಾರಿ ಕಾರ್ಮಿಕರಿದ್ದ ಬೊಲೆರೋ ಪಲ್ಟಿ: ಎಂಟು ಮಂದಿಗೆ ಗಂಭೀರ ಗಾಯ

ಗೌರಿಬಿದನೂರು: ರೈಲ್ವೆ ಇಲಾಖೆಯ ಕಾಮಗಾರಿ ಕೆಲಸಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕರಿದ್ದ ಬೊಲೆರೋ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ…

8 hours ago

ಹುಬ್ಬಳ್ಳಿ–ಧಾರವಾಡದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ: 1,339 ಮಂದಿ ವಿರುದ್ಧ ಪ್ರಕರಣ

ಹುಬ್ಬಳ್ಳಿ–ಧಾರವಾಡ: ಅವಳಿ ನಗರದಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತುಹಾಕಲು ಹುಬ್ಬಳ್ಳಿ–ಧಾರವಾಡ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ಮೂರು…

1 day ago

ವಿದ್ಯುತ್ ತಂತಿ ಅಳವಡಿಸಿ ಎರಡು ಜಿಂಕೆಗಳ ಬಲಿ: ಜಮೀನಿನಲ್ಲೇ ಮಾಂಸ ಬೇಯಿಸುತ್ತಿದ್ದ ಆರೋಪಿಗಳು!

ಸಾಗರ: ಜಮೀನಿಗೆ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿ ಎರಡು ಗಂಡು ಜಿಂಕೆಗಳನ್ನು ವಿದ್ಯುತ್ ಸ್ಪರ್ಶದಿಂದ ಸಾಯಿಸಿ, ಅವುಗಳ ಮಾಂಸವನ್ನು ಜಮೀನಿನಲ್ಲೇ…

1 day ago

ಅರ್ಚಕ ವಿಶ್ವೇಶ್ವರ ಭಟ್ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಕುಮಟಾ: ನಗರದ ಪ್ರಸಿದ್ಧ ಕುಂಭೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಜಿಲ್ಲಾ ಮತ್ತು…

1 day ago