Categories: CrimeLatest

ಕಾರಿನ ಗಾಜು ಒಡೆದು 12.20 ಲಕ್ಷ ರೂ. ದೋಚಿದ ಕಳ್ಳರು: ಗೌರಿಬಿದನೂರಿನಲ್ಲಿ ಹಾಡಹಗಲೇ ಕೃತ್ಯ

ಗೌರಿಬಿದನೂರು: ನಗರದ ಹೃದಯಭಾಗದಲ್ಲಿರುವ ಬಿ.ಎಚ್. ರಸ್ತೆಯಲ್ಲಿ ಹಾಡಹಗಲೇ ಕಳ್ಳರು ಕಾರಿನ ಗಾಜು ಒಡೆದು 12.20 ಲಕ್ಷ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಮಂಚೇನಹಳ್ಳಿ ತಾಲೂಕಿನ ನೂತನ್ ಎಂಬುವವರು ಯೂನಿಯನ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್‌ನಿಂದ ಹಣವನ್ನು ಡ್ರಾ ಮಾಡಿಕೊಂಡು ತಮ್ಮ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಇಟ್ಟುಕೊಂಡಿದ್ದರು. ಬಳಿಕ ಗೌರಿಬಿದನೂರು ನಗರದ ಬಿ.ಎಚ್. ರಸ್ತೆಯಲ್ಲಿರುವ ಫ್ರೆಶ್ ವರ್ಲ್ಡ್ ಮುಂಭಾಗ ಕಾರು ನಿಲ್ಲಿಸಿ, ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅಂಗಡಿಗೆ ತೆರಳಿದ್ದರು.

ಈ ವೇಳೆ ನೂತನ್ ಅವರನ್ನು ಕೆನರಾ ಬ್ಯಾಂಕ್‌ನಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ಕಳ್ಳರು, ಕಾರಿನ ಗಾಜನ್ನು ಒಡೆದು ಒಳಗಿದ್ದ 12.20 ಲಕ್ಷ ರೂ. ನಗದನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವೃತ್ತ ನಿರೀಕ್ಷಕ ಅಂಜನ್ ಕುಮಾರ್ ಹಾಗೂ ನಗರ ಠಾಣೆಯ ಪಿಎಸ್‌ಐ ವರಲಕ್ಷ್ಮಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ವರದಿ: ಅವಿನಾಶ್

ಭ್ರಷ್ಟರ ಬೇಟೆ

Recent Posts

ಸಕಲೇಶಪುರ RFO ಮನೆ ಮೇಲೆ ಲೋಕಾಯುಕ್ತ ದಾಳಿ: ಐದು ಕಡೆ ಏಕಕಾಲಕ್ಕೆ ಶೋಧ, ಬಾಲಕನ ಬಳಿ ₹500 ನೋಟುಗಳ ಕಂತೆ ಪತ್ತೆ!

ಹಾಸನ: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿ (RFO) ಹೇಮಂತ್‌ಕುಮಾರ್ ಅವರಿಗೆ ಸಂಬಂಧಿಸಿದ…

17 minutes ago

75 ವರ್ಷದ ವೃದ್ಧೆಯ ಕೊಲೆ ಪ್ರಕರಣ ಭೇದಿಸಿದ ಮುಂಡಗೋಡ ಪೊಲೀಸರು; ಆರೋಪಿ ಬಂಧನ

ಚಿನ್ನಾಭರಣ ದೋಚಿ ವೃದ್ಧೆಯ ಹತ್ಯೆ; ಕೃತ್ಯಕ್ಕೆ ಬಳಸಿದ ಬೈಕ್ ಸೇರಿದಂತೆ ಚಿನ್ನಾಭರಣ ವಶ ಮುಂಡಗೋಡ: ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…

2 days ago

₹30 ಲಕ್ಷಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಹತ್ಯೆಗೆ ಸುಪಾರಿ! ಪತ್ನಿಯ ಕಣ್ಣೆದುರೇ ನಡೆದ ಕೊಲೆಯ ಹಿಂದಿನ ಭಯಾನಕ ಸಂಚು ಬಯಲು

ವ್ಯವಹಾರದ ವೈಮನಸ್ಸಿಗೆ ಸುಪಾರಿ ಹತ್ಯೆಯ ರೂಪ; ಮುಂಗಡವಾಗಿ ₹15 ಲಕ್ಷ ಪಾವತಿ – ಧರ್ಮಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳ ಬಂಧನ…

2 days ago

ಮುಳ್ಳಯ್ಯನಗಿರಿ ಮಾರ್ಗದಲ್ಲಿ ಗೂಡಂಗಡಿಗಳದ್ದೇ ಕಾರುಬಾರು; ಮಸುಕಾಗುತ್ತಿದೆ ಪ್ರಕೃತಿ ಸೌಂದರ್ಯ!

ವ್ಯೂವ್ ಪಾಯಿಂಟ್‌ಗಳನ್ನೇ ಆಕ್ರಮಿಸಿದ ಅಂಗಡಿಗಳು – ಪ್ರವಾಸಿಗರಿಗೆ ವಾಹನ ನಿಲುಗಡೆ ಸಮಸ್ಯೆ, ಪರಿಸರ ಮಾಲಿನ್ಯದ ಆತಂಕ ಚಿಕ್ಕಮಗಳೂರು: ರಾಜ್ಯದ ಅತ್ಯಂತ…

2 days ago

ಕುಡಿದ ಮತ್ತಿನಲ್ಲಿ ಸಂಚಾರಿ ಪೊಲೀಸ್ ಎಸ್‌ಐಗೆ ಕಪಾಳಮೋಕ್ಷ: ಕಾರು ಬ್ರೋಕರ್ ಸಚಿನ್ ಬಂಧನ

ಬೆಂಗಳೂರು: ಮದ್ಯಪಾನ ಮಾಡಿ ಕಾರು ಚಲಾಯಿಸುವಾಗ ಮನೆಯೊಂದರ ಗೋಡೆಗೆ ಡಿಕ್ಕಿ ಹೊಡೆದು, ಸ್ಥಳಕ್ಕೆ ಬಂದ ಸಂಚಾರಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗೇ ಕಪಾಳಮೋಕ್ಷ…

2 days ago

ಜೈಲಿನಲ್ಲೇ ಮಹಿಳಾ ಕೈದಿ ಗರ್ಭಿಣಿ! ಹೋಟ್‌ವಾರ್ ಜೈಲಿನಲ್ಲಿ ಭಾರೀ ಸಂಚಲನ; ಭದ್ರತಾ ಲೋಪದ ಬಗ್ಗೆ ತನಿಖೆ

ರಾಂಚಿ: ಜೈಲಿನೊಳಗೆ ಮಹಿಳಾ ಕೈದಿಯೊಬ್ಬರು ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ಹೋಟ್‌ವಾರ್ ಕೇಂದ್ರ ಕಾರಾಗೃಹದಲ್ಲಿ ಬೆಳಕಿಗೆ ಬಂದಿದೆ. ಶಿಕ್ಷೆ ಅನುಭವಿಸುತ್ತಿದ್ದ…

6 days ago