Categories: CorruptionLatest

ಸಾರಿಗೆ ಸಂಸ್ಥೆಯ ಚಾಲಕನ ಮನೆ ಮೇಲೆ ಲೋಕಾಯುಕ್ತ ದಾಳಿ: ಮೂರು ಮನೆ ಸೇರಿ ಹಲವು ಆಸ್ತಿಗಳ ದಾಖಲೆ ಪರಿಶೀಲನೆ!

ಹುಬ್ಬಳ್ಳಿ: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಕಂ ನಿರ್ವಾಹಕ ಷಡಕ್ಷರಯ್ಯ ಹತ್ತಿಕಟ್ಟಿಮಠ ಅವರ ಮನೆಗಳ ಮೇಲೆ ಬುಧವಾರ ಮುಂಜಾನೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ ನಗರ ಸಾರಿಗೆ 1ನೇ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಷಡಕ್ಷರಯ್ಯ ಅವರಿಗೆ ಸೇರಿದ ಗೋಕುಲ ರಸ್ತೆಯ ಡಾ.ಆರ್.ಎಂ. ಲೋಹಿಯಾ ನಗರದಲ್ಲಿರುವ ಮೂರು ಮನೆಗಳು ಹಾಗೂ ಅವರ ಸ್ವಂತ ಊರಾದ ಹಾವೇರಿ ಜಿಲ್ಲೆಯ ಹಿರೇಬೂದಿಹಾಳದಲ್ಲಿರುವ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಐದು ಗಂಟೆಗೂ ಅಧಿಕ ಕಾಲ ದಾಖಲೆಗಳನ್ನು ಪರಿಶೀಲಿಸಿದೆ.

ದಾಳಿಯ ವೇಳೆ ಆದಾಯಕ್ಕೂ ಮೀರಿ ಆಸ್ತಿ ಗಳಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚರ ಮತ್ತು ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿರುವ ಅಧಿಕಾರಿಗಳು, ಆಸ್ತಿಗಳ ಮೂಲ ಹಾಗೂ ಆದಾಯದ ವಿವರಗಳನ್ನು ಒದಗಿಸುವಂತೆ ಷಡಕ್ಷರಯ್ಯ ಅವರಿಗೆ ನೋಟಿಸ್ ನೀಡಿದ್ದಾರೆ.

ಸಾರಿಗೆ ಸಂಸ್ಥೆಯಲ್ಲಿ ಚಾಲಕ ಕಂ ನಿರ್ವಾಹಕರಂತಹ ಸಾಮಾನ್ಯ ಹುದ್ದೆಯಲ್ಲಿದ್ದು, ಪೂರ್ವಜರಿಂದಲೂ ಯಾವುದೇ ಆಸ್ತಿ ಬಂದಿಲ್ಲ ಎನ್ನಲಾಗುತ್ತಿರುವ ಹಿನ್ನೆಲೆಯಲ್ಲಿ ಇಷ್ಟೊಂದು ಪ್ರಮಾಣದ ಆಸ್ತಿ ಹೇಗೆ ಸಂಪಾದಿಸಿದ್ದಾರೆ ಎಂಬುದರ ಕುರಿತು ಲೋಕಾಯುಕ್ತ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಮೂರು ಸ್ವಂತ ಮನೆಗಳ ಖರೀದಿ, ವಿವಿಧೆಡೆ ಭೂಮಿ ಸಂಪಾದನೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಿಂದ ಆದಾಯ ಗಳಿಸಿರುವ ಸಾಧ್ಯತೆ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿದ್ದರೆ ಅದಕ್ಕೆ ಸಂಬಂಧಿಸಿದ ಆದಾಯ ತೆರಿಗೆ ಪಾವತಿಯಾಗಿದೆಯೇ ಮತ್ತು ಸರ್ಕಾರಿ ನೌಕರರಾಗಿರುವ ಅವರು ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಷಡಕ್ಷರಯ್ಯ ಅವರ ಆಸ್ತಿಗಳ ಮೂಲ, ಆದಾಯದ ವಿವರ ಹಾಗೂ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಮುಂದುವರಿದಿದೆ.

ಭ್ರಷ್ಟರ ಬೇಟೆ

Recent Posts

ಬಡವರ ಸ್ವಂತ ಮನೆ ಕನಸು ನನಸಾಗಿಸಲು ಸರ್ಕಾರದ ಮಾಸ್ಟರ್ ಪ್ಲ್ಯಾನ್; ಶೇ.50 ರಿಯಾಯಿತಿಯಲ್ಲಿ 30X40 ಅಡಿ ನಿವೇಶನ!

ಕರ್ನಾಟಕದಲ್ಲಿ ಸ್ವಂತ ಮನೆ ಹಾಗೂ ನಿವೇಶನ ಹೊಂದುವ ಕನಸು ಕಾಣುತ್ತಿರುವ ಬಡ ಮತ್ತು ಶ್ರಮಿಕ ವರ್ಗದ ಜನರಿಗೆ ರಾಜ್ಯ ಸರ್ಕಾರ…

6 hours ago

ಡಿವೋರ್ಸ್ ಪೇಪರ್‌ಗೆ ಸಹಿ ಹಾಕುವ ಕೊನೇ ಕ್ಷಣದಲ್ಲಿ ಬದಲಾದ ಪತ್ನಿಯ ಮನಸ್ಸು; ಪತಿಯ ಒಂದು ನಡೆಗೆ ಓಡೋಡಿ ಬಂದು ತಬ್ಬಿಕೊಂಡಳು!

ವಿಚ್ಛೇದನದ ಮೂಲಕ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದ ದಂಪತಿ, ಕೊನೆಯ ಕ್ಷಣದಲ್ಲಿ ಮತ್ತೆ ಒಂದಾದ ಅಪರೂಪದ ಘಟನೆ ಇದೀಗ…

6 hours ago

ಗೃಹಲಕ್ಷ್ಮಿ ಹಣದ ಆಸೆಗೆ ಅಜ್ಜಿಯನ್ನೇ ಕೊಂದ ಮೊಮ್ಮಗ: ಶವವನ್ನು ಡ್ಯಾಂಗೆ ಎಸೆದು ನಾಟಕವಾಡಿದ್ದ ಆರೋಪಿ ಬಂಧನ!

ಬೆಳಗಾವಿ: ಹೆತ್ತವರ ಪ್ರೀತಿಯಂತೆ ಮೊಮ್ಮಗನನ್ನು ಸಾಕಿ ಬೆಳೆಸಿದ್ದ ಅಜ್ಜಿಯನ್ನೇ ಹಣದ ಆಸೆಗೆ ಮೊಮ್ಮಗ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ…

6 hours ago

ಗೌರಿಬಿದನೂರಿನಲ್ಲಿ ಆಘಾತಕಾರಿ ಘಟನೆ: ಇಬ್ಬರು ಪುಟ್ಟ ಮಕ್ಕಳಿಗೆ ವಿಷ ನೀಡಿ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ; ಮೂವರ ಸ್ಥಿತಿ ಗಂಭೀರ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಶಂಕೆ – ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಗೌರಿಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು…

15 hours ago

ಕಾರಿನ ಗಾಜು ಒಡೆದು 12.20 ಲಕ್ಷ ರೂ. ದೋಚಿದ ಕಳ್ಳರು: ಗೌರಿಬಿದನೂರಿನಲ್ಲಿ ಹಾಡಹಗಲೇ ಕೃತ್ಯ

ಗೌರಿಬಿದನೂರು: ನಗರದ ಹೃದಯಭಾಗದಲ್ಲಿರುವ ಬಿ.ಎಚ್. ರಸ್ತೆಯಲ್ಲಿ ಹಾಡಹಗಲೇ ಕಳ್ಳರು ಕಾರಿನ ಗಾಜು ಒಡೆದು 12.20 ಲಕ್ಷ ರೂ. ನಗದು ದೋಚಿ…

1 day ago

ಸಕಲೇಶಪುರ RFO ಮನೆ ಮೇಲೆ ಲೋಕಾಯುಕ್ತ ದಾಳಿ: ಐದು ಕಡೆ ಏಕಕಾಲಕ್ಕೆ ಶೋಧ, ಬಾಲಕನ ಬಳಿ ₹500 ನೋಟುಗಳ ಕಂತೆ ಪತ್ತೆ!

ಹಾಸನ: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿ (RFO) ಹೇಮಂತ್‌ಕುಮಾರ್ ಅವರಿಗೆ ಸಂಬಂಧಿಸಿದ…

1 day ago