
ಮುಂಬೈ: ಬಾಲಿವುಡ್ ನಟಿ ನಿಖಿತಾ ರಾವಲ್ ಅವರಿಗೆ ಮಹಿಳಾ ಅಭಿಮಾನಿಯೊಬ್ಬರು ಅನಿರೀಕ್ಷಿತವಾಗಿ ತುಟಿಗೆ ಮುತ್ತಿಟ್ಟ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖಾಸಗಿ ಕಾರ್ಯಕ್ರಮವೊಂದರ ರೆಡ್ ಕಾರ್ಪೆಟ್ನಲ್ಲಿ ನಿಖಿತಾ ರಾವಲ್ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ನಟಿಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮನವಿ ಮಾಡಿದ್ದಾರೆ. ಅಭಿಮಾನಿಯ ಮನವಿಗೆ ನಟಿ ಸಹ ಒಪ್ಪಿಕೊಂಡು ಆಕೆಯೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ.
ಆದರೆ ಸೆಲ್ಫಿ ತೆಗೆದುಕೊಂಡ ಬಳಿಕ ನಡೆದ ಘಟನೆ ನಟಿಯನ್ನು ಕೆಲ ಕ್ಷಣಗಳ ಕಾಲ ಬೆಚ್ಚಿಬೀಳಿಸಿದೆ ಎನ್ನಲಾಗಿದೆ. ಮೊದಲು ಅಭಿಮಾನಿ ನಟಿಯ ಕೆನ್ನೆಗೆ ಮುತ್ತಿಟ್ಟಿದ್ದು, ಬಳಿಕ ಏಕಾಏಕಿ ಅವರನ್ನು ಹತ್ತಿರಕ್ಕೆ ಎಳೆದುಕೊಂಡು ತುಟಿಗೆ ಮುತ್ತಿಟ್ಟಿದ್ದಾರೆ ಎಂದು ವರದಿಯಾಗಿದೆ.
ಅನಿರೀಕ್ಷಿತವಾಗಿ ನಡೆದ ಈ ಕೃತ್ಯದಿಂದ ನಿಖಿತಾ ರಾವಲ್ ಅಚ್ಚರಿಗೊಂಡಿದ್ದು, ತಕ್ಷಣವೇ ಆಕೆಯಿಂದ ದೂರ ಸರಿಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂಪೂರ್ಣ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಘಟನೆಗೆ ಸಂಬಂಧಿಸಿದಂತೆ ನಟಿಯ ಪ್ರತಿಕ್ರಿಯೆ ಏನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.






