ಒಡಿಶಾ: ರಾಜ್ಯದ ಗ್ರಾಮೀಣ ಬ್ಯಾಂಕ್ನಲ್ಲಿ ನಡೆದ ವಿಚಿತ್ರ ಹಾಗೂ ಹೃದಯವಿದ್ರಾವಕ ಘಟನೆ ದೇಶದ ಬಡತನದ ವಾಸ್ತವಿಕತೆಯನ್ನು ಮತ್ತೆ ಬೆಳಕಿಗೆ ತಂದಿದೆ. ಸಹೋದರನೊಬ್ಬ ತನ್ನ ಸಹೋದರಿಯ ಖಾತೆಯಲ್ಲಿದ್ದ ₹19,300 ಹಣವನ್ನು ಪಡೆಯಲು, ಆಕೆಯ ಶವವನ್ನೇ ಸಮಾಧಿಯಿಂದ ತೆಗೆದು ಬ್ಯಾಂಕ್ಗೆ ತಂದುಹಾಕಿದ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಜಿತು ಮುಂಡ ಎಂಬಾತ ಈ ಕೃತ್ಯ ಎಸಗಿರುವ ವ್ಯಕ್ತಿ. ಎರಡು ತಿಂಗಳ ಹಿಂದೆ ಮೃತಪಟ್ಟಿದ್ದ ಅವನ ಸಹೋದರಿ ಕಲ್ರ ಮುಂಡ, ಸಾಯುವ ಮುನ್ನ ತನ್ನ ಬ್ಯಾಂಕ್ ಖಾತೆಯಲ್ಲಿ ₹19,300 ಇದ್ದು, ಅದನ್ನು ಪಡೆದುಕೊಳ್ಳುವಂತೆ ಸಹೋದರನಿಗೆ ತಿಳಿಸಿದ್ದರು.
ಅದರಂತೆ ಜಿತು ಬ್ಯಾಂಕ್ಗೆ ತೆರಳಿದಾಗ, ಖಾತಾದಾರರನ್ನು ಸ್ವತಃ ಕರೆತರಬೇಕು ಅಥವಾ ಅವರು ಮೃತಪಟ್ಟಿದ್ದರೆ ಮರಣ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಆದರೆ ತೀವ್ರ ಬಡತನದಲ್ಲಿದ್ದ ಜಿತುಗೆ ಮರಣ ಪ್ರಮಾಣಪತ್ರ ಪಡೆಯುವುದು ಸಾಧ್ಯವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಆತ ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ಬ್ಯಾಂಕ್ನಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿದ್ದ ಸಮಾಧಿಯಿಂದ ತನ್ನ ಸಹೋದರಿಯ ಶವವನ್ನು ಹೊರತೆಗೆದು, ಪ್ಲಾಸ್ಟಿಕ್ ಚೀಲದಲ್ಲಿ ಅರ್ಧ ಮುಚ್ಚಿ ಹೆಗಲ ಮೇಲೆ ಹೊತ್ತು ಬ್ಯಾಂಕ್ಗೆ ತಂದುಕೊಂಡು ಬಂದಿದ್ದಾನೆ.
ये जीतू मुंडा हैं. इनके कंधे पर इनकी बहन कालरा मुंडा का कंकाल है.
— Ranvijay Singh (@ranvijaylive) April 28, 2026
दरअसल, जीतू की बहन कालरा की 2 महीने पहले मौत हो गई.
कालरा जीतू को बता गईं कि उनके बैंक खाते में 19,300 रुपए हैं, जिसे जीतू निकाल लें.
जीतू ओडिशा ग्रामीण बैंक पहुंचे. बैंक के कर्मचारियों न कहा- जिसका खाता है उसे… pic.twitter.com/UoJi8NQMtp
ಈ ದೃಶ್ಯವನ್ನು ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕೇವಲ ₹19,300 ಹಣಕ್ಕಾಗಿ ಇಂತಹ ಕೃತ್ಯಕ್ಕೆ ಮುಂದಾಗಬೇಕಾದ ಪರಿಸ್ಥಿತಿ ದೇಶದ ಬಡತನದ ಗಂಭೀರತೆಯನ್ನು ತೋರಿಸುತ್ತದೆ ಎಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ.
ಈ ಘಟನೆ ಮಾನವೀಯತೆ, ವ್ಯವಸ್ಥೆಯ ಅಸಮರ್ಥತೆ ಹಾಗೂ ಬಡತನದ ಕಠಿಣ ಸತ್ಯವನ್ನು ಮತ್ತೊಮ್ಮೆ ಪ್ರಶ್ನೆಯಾಗಿ ಎತ್ತಿದೆ.
