ಪಾರ್ಕ್ನಲ್ಲಿ ಪ್ರೇಯಸಿಯೊಂದಿಗೆ ಏಕಾಂತವಾಗಿ ಸಮಯ ಕಳೆಯುತ್ತಿದ್ದ ಪತಿಯೊಬ್ಬನು, ಪತ್ನಿಯ ಕೈಗೆ ಸಿಕ್ಕಿಬಿದ್ದ ರೋಚಕ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ, ಯುವಕ ಮತ್ತು ಯುವತಿ ಪಾರ್ಕ್ ಸಮೀಪದ ಖಾಲಿ ಜಾಗದಲ್ಲಿ ನಿರಾಳವಾಗಿ ಮಾತನಾಡುತ್ತಿರುತ್ತಾರೆ. ಈ ವೇಳೆ ಆಕಸ್ಮಿಕವಾಗಿ ಅಲ್ಲಿಗೆ ಬಂದ ಮಹಿಳೆ ಇಬ್ಬರನ್ನು ಜೊತೆಯಲ್ಲಿ ನೋಡಿ ಕೋಪದಿಂದ ಉರಿದು ಬೀಳುತ್ತಾಳೆ. ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಗಂಭೀರವಾಗಿ ತಿರುಗಿ, ಜಗಳದ ರೂಪ ಪಡೆಯುತ್ತದೆ.
ಕೋಪಗೊಂಡ ಮಹಿಳೆ ತನ್ನ ಪಾದರಕ್ಷೆಯನ್ನು ತೆಗೆದು ಯುವತಿಯ ಮೇಲೆ ಹಿಗ್ಗಾಮುಗ್ಗಾ ದಾಳಿ ನಡೆಸುತ್ತಾಳೆ. ಪ್ರೇಯಸಿಯನ್ನು ರಕ್ಷಿಸಲು ಯುವಕ ಪ್ರಯತ್ನಿಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ, ಆತನಿಗೂ ಹೊಡೆತ ಬೀಳುತ್ತದೆ.
ವಿಡಿಯೋದಲ್ಲಿರುವ ಮಾಹಿತಿ ಪ್ರಕಾರ, ಯುವಕ ವಿವಾಹಿತನಾಗಿದ್ದು, ಜೊತೆಗಿದ್ದ ಯುವತಿ ಆತನ ಪ್ರೇಯಸಿ. ದಾಳಿ ನಡೆಸಿದ ಮಹಿಳೆ ಆತನ ಪತ್ನಿಯಾಗಿದ್ದು, ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದು ಈ ರೀತಿ ಆಕ್ರೋಶ ಹೊರಹಾಕಿದ್ದಾಳೆ ಎನ್ನಲಾಗಿದೆ. ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ವಿಡಿಯೋವನ್ನು ‘ಘರ್ ಕೆ ಕಲೇಶ್’ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸಾವಿರಾರು ಜನರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ವಿಭಿನ್ನ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇಂತಹ ಅಕ್ರಮ ಸಂಬಂಧಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಘಟನೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
