ಜಲ್ಪೈಗುರಿ ಮತ್ತು ರಾಮನಗರ ನಡುವಿನ ರೈಲು ಪ್ರಯಾಣದ ವೇಳೆ ಮನಕಲಕುವ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನಿಂದ ಮಗು ಕೆಳಗೆ ಬಿದ್ದಿದ್ದು, ತಾಯಿಯ ನೋವಿನ ಅಳಲು ನೋಡುಗರ ಹೃದಯ ಕಲುಕುವಂತಾಗಿದೆ.
ಘಟನೆಯ ವಿವರ ಪ್ರಕಾರ, ಪ್ರಯಾಣದ ವೇಳೆ ತಾಯಿಯ ಕೈ ಜಾರಿ ಮಗು ರೈಲಿನಿಂದ ಕೆಳಗೆ ಬಿದ್ದಿದೆ. ತಕ್ಷಣವೇ ಆತಂಕಗೊಂಡ ತಾಯಿ ತುರ್ತು ಚೈನ್ ಎಳೆದು ರೈಲು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಅಲ್ಲಿದ್ದ ಇತರೆ ಪ್ರಯಾಣಿಕರೂ ಸಹ ಚೈನ್ ಎಳೆದರೂ ರೈಲು ನಿಲ್ಲದೇ ಹೋಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ರೈಲಿನಲ್ಲಿ ತುರ್ತು ಪರಿಸ್ಥಿತಿಗೆ ಬಳಸುವ ಚೈನ್ ಇದ್ದರೂ, ಅದು ಕಾರ್ಯಕ್ಷಮವಾಗದಿದ್ದರೆ ಅದರ ಉಪಯೋಗವೇನು ಎಂಬ ಪ್ರಶ್ನೆ ಈ ಘಟನೆಯಿಂದ ಎದ್ದಿದೆ.
ಮಗುವನ್ನು ಕಳೆದುಕೊಂಡ ತಾಯಿ ಕಣ್ಣೀರಿನಲ್ಲಿ ಮುಳುಗಿದ್ದು, ಆ ದೃಶ್ಯ ಅಲ್ಲಿದ್ದವರ ಮನಸ್ಸನ್ನು ಕಲುಕಿದೆ. ಬಳಿಕ ಪ್ರಯಾಣಿಕರಲ್ಲೊಬ್ಬರು ತಕ್ಷಣವೇ ರೈಲ್ವೆ ಸುರಕ್ಷತಾ ಪಡೆ (ಆರ್ಪಿಎಫ್) ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Indian railway and the services😪
— Kavish aziz (@azizkavish) April 26, 2026
A child fell from a train on the Jalpaiguri-Ramnagar route. The child’s mother immediately pulled the emergency chain, but the train did not stop.
Numerous other passengers seated in the compartment also pulled the chain, yet the train failed… pic.twitter.com/O98tt4jxDA
ಈಗ ಸ್ಥಳೀಯ ಪೊಲೀಸರು ಮತ್ತು ರೈಲ್ವೆ ಪೊಲೀಸರು ಮಗುವಿನ ಹುಡುಕಾಟ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
