ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಜಗನಹಳ್ಳಿಯಲ್ಲಿ ಒಂದು ಭೀಕರ ಘಟನೆ ನಡೆದಿದೆ,  ದುಷ್ಕರ್ಮಿಗಳು ಯುವತಿಯನ್ನು ಕಿಡ್ನಾಪ್ ಮಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಮಹಿಳೆಯನ್ನು ತೋಟದ ಮನೆಯಲ್ಲಿ ಬಂದು ಬರ್ಬರವಾಗಿ ಹಲ್ಲೆ ನಡೆಸಿ, ಕಣ್ಣಿಗೆ ಗಂಭೀರ ಗಾಯ ಮಾಡುವಂತಹ ಕ್ರೂರ ಕೃತ್ಯವೆಸಗಿದ್ದಾರೆ.

ಕಿಡ್ನಾಪ್ ಮಾಡಿ ಕ್ರೂರ ಹಿಂಸೆ!

ಸ್ಥಳೀಯ ಮಾಹಿತಿಯ ಪ್ರಕಾರ, ದಾಳಿಗೀಡಾದ ಮಹಿಳೆ ಸಂಗೀತಾ ಎಂಬುವರು, ಗಂಗರಾಜು ಎಂಬ ವ್ಯಕ್ತಿಯ ಎರಡನೇ ಪತ್ನಿಯಾಗಿದ್ದಾರೆ. ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಗಂಗರಾಜು ಸಂಗೀತಾಳನ್ನು ವಿವಾಹವಾದ ನಂತರ, ಅವರ ಮೊದಲ ಪತ್ನಿಯ ಸಂಬಂಧಿಕರು ಈ ಹಲ್ಲೆ ನಡೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಸುದ್ದಿಯ ಪ್ರಕಾರ, ದುಷ್ಕರ್ಮಿಗಳು ಸಂಗೀತಾಳನ್ನು ಅಪಹರಿಸಿ, ತೋಟದ ಮನೆಯಲ್ಲಿ ಕಟ್ಟಿ ಹಾಕಿ ರಾತ್ರಿ ಪೂರ್ತಿ ಮಾನಸಿಕ ಹಾಗೂ ಶಾರೀರಿಕ ಪೀಡನೆಗೊಳಪಡಿಸಿದ್ದಾರೆ. ಬ್ಯಾಟ್, ರೈಲು ರಾಡ್ ಮುಂತಾದ ತೀವ್ರ ಆಯುಧಗಳಿಂದ ಹಲ್ಲೆ ನಡೆಸಿದ ಪರಿಣಾಮ, ಸಂಗೀತಾಳ ಮುಖದಲ್ಲಿ ಗಂಭೀರ ಗಾಯಗಳಾಗಿದ್ದು, ಕಣ್ಣಿನ ಜೋಡಿಗೆ ಹಾನಿಯಾಗಿರುವುದು ತಿಳಿದುಬಂದಿದೆ.

ಕುಟುಂಬ ಕಲಹವೇ ಕಾರಣ?

ಸಂಗೀತಾಳ ಸಹೋದರಿಯು ನೀಡಿದ ಮಾಹಿತಿಯ ಪ್ರಕಾರ, ಈ ಹಲ್ಲೆ ಹಿಂದಿನ ಮೂಲ ಕಾರಣ ಕುಟುಂಬ ಕಲಹವಾಗಿದೆ. ಗಂಗರಾಜು ಮತ್ತು ಸಂಗೀತಾ ಮದುವೆಯಾಗಿರುವ ವಿಚಾರಕ್ಕೆ ಮೊದಲ ಪತ್ನಿಯ ಪರಿವಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ವಿರೋಧವೇ ದಾಳಿಯ ಮೂಲ ಕಾರಣವಾಗಿರುವ ಸಾಧ್ಯತೆ ಇದೆ.

ನಿನ್ನೆ ರಾತ್ರಿ ಸಂಗೀತಾ ಅವರ ತಂದೆ ಮತ್ತು ಸಹೋದರಿಯರ ಜೊತೆಗೆ ಮಾತಾನಾಡಲು ಬಂದಿದ್ದರು. ಈ ಸಂದರ್ಭದಲ್ಲಿ ಗಲಾಟೆ ಏರ್ಪಟ್ಟಿದ್ದು, ಅದೇ ರಾತ್ರಿ ದುಷ್ಕರ್ಮಿಗಳು ಸಂಗೀತಾಳನ್ನು ಅಪಹರಿಸಿ ಕ್ರೂರ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ಸಂಗೀತಾಳ ಸಹೋದರಿ ಹಂಸ ಕೂಡ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಪೊಲೀಸರು ತನಿಖೆ ಆರಂಭಿಸಿದ್ದಾರೆ

ಘಟನೆಯ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಈ ಭೀಕರ ದಾಳಿಯು ಜಿಲ್ಲೆಯಲ್ಲೇ  ವಸ್ತವಿರುವಂತಹ ಭಯಾನಕ ಘಟನೆಯಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.

Related News

error: Content is protected !!