Categories: CrimeLatest

ಮಂಗಳಮುಖಿಯ ವೇಷದಲ್ಲಿ ವೇಶ್ಯಾವಾಟಿಕೆ ಜಾಲ: ಬೆಂಗಳೂರಿನಲ್ಲಿ ನಟೋರಿಯಸ್ ದಲ್ಲಾಳಿ ಚೇತನ್ ಬಂಧನ

ಬೆಂಗಳೂರು: ಹೊರರಾಜ್ಯಗಳ ಯುವತಿಯರನ್ನು ಕರೆತಂದು ಬೆಂಗಳೂರಿನಲ್ಲಿ ಅನೈತಿಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಹಾಗೂ ಹಲವು ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ದಲ್ಲಾಳಿಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚೇತನ್ ಕುಮಾರ್ ಅಲಿಯಾಸ್ ಮಂಗಳಮುಖಿ ಚೇತನ್ (40) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಚೇತನ್ ವಿರುದ್ಧ ಪೀಣ್ಯ, ಬಾಗಲಗುಂಟೆ, ಸಿಸಿಬಿ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತ, ಪೊಲೀಸರ ಕಣ್ತಪ್ಪಿಸಲು ಮಂಗಳಮುಖಿಯ ವೇಷ ಧರಿಸಿ ಓಡಾಡುತ್ತಿದ್ದ ಎನ್ನಲಾಗಿದೆ.

ಈ ವೇಷವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ದೆಹಲಿ, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಂದ ಯುವತಿಯರನ್ನು ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ. ಈತನ ಬಂಧನಕ್ಕಾಗಿ ಪೊಲೀಸರು ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು.

ಜುಲೈ 6ರಂದು ಪೀಣ್ಯ ರಸ್ತೆಯ ಸಮೀಪದ ಲಾಡ್ಜ್‌ ಒಂದರಲ್ಲಿ ಆರೋಪಿ ತಂಗಿರುವ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಕೂಡಲೇ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಬಂಧಿತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಈತನ ಜಾಲದಲ್ಲಿ ಇನ್ನೂ ಯಾರು ಭಾಗಿಯಾಗಿದ್ದಾರೆ, ಯಾವೆಲ್ಲ ಪ್ರದೇಶಗಳಲ್ಲಿ ದಂಧೆ ನಡೆಸಲಾಗುತ್ತಿತ್ತು ಹಾಗೂ ಇದರ ಹಿಂದಿರುವ ಜಾಲದ ಬಗ್ಗೆ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಮೈಸೂರು ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಕಾರ್ತಿಕ್‌ಗೆ ಮರಣದಂಡನೆ

9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಚಾಕುವಿನಿಂದ 27 ಬಾರಿ ಇರಿದು ಕೊಲೆ ಮಾಡಿದ್ದ ಪ್ರಕರಣ; ₹1 ಲಕ್ಷ…

21 hours ago

ಕಾರವಾರ–ಇಳಕಲ್ ರಾಜ್ಯ ಹೆದ್ದಾರಿ ದುಸ್ಥಿತಿ: ಹಳೆಕೋಟದಿಂದ ಕಡವಾಡ ಕ್ರಾಸ್‌ವರೆಗೆ ಸಂಚಾರ ದುಸ್ತರ

ಕಾರವಾರ: ಕಾರವಾರ–ಇಳಕಲ್–ಕೈಗಾ ರಾಜ್ಯ ಹೆದ್ದಾರಿಯ ಹಳೆಕೋಟದಿಂದ ಕಡವಾಡ ಕ್ರಾಸ್‌ವರೆಗಿನ ರಸ್ತೆಯ ಒಂದು ಬದಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ…

21 hours ago

ಲಿಂಗಸುಗೂರಿನಲ್ಲಿ ಅಬಕಾರಿ ಇಲಾಖೆ ದಾಳಿ: 35.82 ಲೀಟರ್ ಮದ್ಯ ವಶ, ಆರೋಪಿ ಬಂಧನ

ಅಬಕಾರಿ ನಿರೀಕ್ಷಕಿ ಲಕ್ಷ್ಮೀದೇವಿ ನೇತೃತ್ವದಲ್ಲಿ ಕಾರ್ಯಾಚರಣೆ; ಕೃಷ್ಣ ಸ್ಪೆಷಲ್ ಚಿಕನ್ ಮತ್ತು ಮಟನ್ ಖಾನಾವಳಿಯಲ್ಲಿ ಪರಿಶೀಲನೆ ಲಿಂಗಸುಗೂರು: ಕರ್ನಾಟಕ ಈಶಾನ್ಯ…

21 hours ago

ಥಾರ್–ಬೊಲೆರೋ ನಡುವೆ ಭೀಕರ ಅಪಘಾತ: ಶಾಸಕ ಮಾನಪ್ಪ ವಜ್ಜಲ್ ಸಹೋದರನ ಪುತ್ರನಿಗೆ ಗಂಭೀರ ಗಾಯ

ಹೊನ್ನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 150ಎರಲ್ಲಿ ಘಟನೆ; ಬೊಲೆರೋದಲ್ಲಿದ್ದ ಇಬ್ಬರ ಕಾಲು ಮುರಿತ ಲಿಂಗಸುಗೂರು: ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದ ಸಮೀಪ…

21 hours ago

ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ: ಪತ್ನಿ ಮುಸ್ಕಾನ್‌, ಪ್ರಿಯಕರ ಸಾಹಿಲ್‌ಗೆ ಮರಣದಂಡನೆ

ಮೀರತ್: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಉತ್ತರ ಪ್ರದೇಶದ ಮೀರತ್‌ನ ಬ್ಲೂ ಡ್ರಮ್ ಕೊಲೆ ಪ್ರಕರಣದಲ್ಲಿ ಪತ್ನಿ ಮುಸ್ಕಾನ್ ರಸ್ತೋಗಿ…

1 week ago

ಚಿಕ್ಕೋಡಿಯಲ್ಲಿ ಉಪಲೋಕಾಯುಕ್ತರ ದಿಢೀರ್ ತಪಾಸಣೆ: ಸರ್ಕಾರಿ ಕಚೇರಿಗಳ ಲೋಪದೋಷಗಳ ವಿರುದ್ಧ 27 ಸ್ವಯಂಪ್ರೇರಿತ ಪ್ರಕರಣ ದಾಖಲು

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸೆಪ್ಟೆಂಬರ್ 24…

2 weeks ago