Categories: CrimeLatest

ಲಿಂಗಸುಗೂರಿನಲ್ಲಿ ಅಬಕಾರಿ ಇಲಾಖೆ ದಾಳಿ: 35.82 ಲೀಟರ್ ಮದ್ಯ ವಶ, ಆರೋಪಿ ಬಂಧನ

ಅಬಕಾರಿ ನಿರೀಕ್ಷಕಿ ಲಕ್ಷ್ಮೀದೇವಿ ನೇತೃತ್ವದಲ್ಲಿ ಕಾರ್ಯಾಚರಣೆ; ಕೃಷ್ಣ ಸ್ಪೆಷಲ್ ಚಿಕನ್ ಮತ್ತು ಮಟನ್ ಖಾನಾವಳಿಯಲ್ಲಿ ಪರಿಶೀಲನೆ

ಲಿಂಗಸುಗೂರು: ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತದಾನದ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಧಿಸಿದ್ದ ಸಂದರ್ಭದಲ್ಲಿ, ಲಿಂಗಸುಗೂರು ಪಟ್ಟಣದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 35.82 ಲೀಟರ್ ಭಾರತೀಯ ತಯಾರಿಕೆಯ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ರಾಯಚೂರು ಜಿಲ್ಲೆಯಾದ್ಯಂತ ಅಕ್ಟೋಬರ್ 21ರಂದು ಸಂಜೆ 4 ಗಂಟೆಯಿಂದ ಅಕ್ಟೋಬರ್ 23ರ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಲಿಂಗಸುಗೂರು ವಲಯದ ಅಬಕಾರಿ ನಿರೀಕ್ಷಕಿ ಲಕ್ಷ್ಮೀದೇವಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದರು.

ಈ ವೇಳೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪಟ್ಟಣದ ಕಲಬುರಗಿ ಮುಖ್ಯ ರಸ್ತೆಯ ಬಸವಸಾಗರ ಕ್ರಾಸ್ ಸಮೀಪವಿರುವ ಕೃಷ್ಣಪ್ಪ ತಂದೆ ಶೆಟ್ಟಪ್ಪ ರಾಠೋಡ, ಗೋನವಾಟ್ಲ ತಾಂಡಾ ನಿವಾಸಿ ಎಂಬುವವರಿಗೆ ಸೇರಿದ ಕೃಷ್ಣ ಸ್ಪೆಷಲ್ ಚಿಕನ್ ಮತ್ತು ಮಟನ್ ಖಾನಾವಳಿಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ವಿವಿಧ ಬ್ರ್ಯಾಂಡ್‌ಗಳ ಮದ್ಯ ಪತ್ತೆಯಾಗಿದೆ. ವಶಪಡಿಸಿಕೊಂಡ ಮದ್ಯದ ವಿವರ ಹೀಗಿದೆ:

  • ಬ್ಯಾಗ್‌ಪೈಪರ್ ವಿಸ್ಕಿ 180 ಎಂ.ಎಲ್.ನ 81 ಟೆಟ್ರಾ ಪ್ಯಾಕ್‌ಗಳು.
  • ಹೈವರ್ಡ್ಸ್ ಚಿಯರ್ಸ್ ವಿಸ್ಕಿ 90 ಎಂ.ಎಲ್.ನ 96 ಟೆಟ್ರಾ ಪ್ಯಾಕ್‌ಗಳು.
  • ಬ್ಯಾಗ್‌ಪೈಪರ್ ವಿಸ್ಕಿ 90 ಎಂ.ಎಲ್.ನ 59 ಟೆಟ್ರಾ ಪ್ಯಾಕ್‌ಗಳು.
  • ಒರಿಜಿನಲ್ ಚಾಯ್ಸ್ ವಿಸ್ಕಿ 90 ಎಂ.ಎಲ್.ನ 81 ಟೆಟ್ರಾ ಪ್ಯಾಕ್‌ಗಳು.

ಒಟ್ಟು 35.82 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)-2023ರ ಕಲಂ 35(3)ರ ಅಡಿಯಲ್ಲಿ ನೋಟಿಸ್ ನೀಡಿ, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಪಟ್ಟಣದ ಇತರ ಕೆಲವು ಸ್ಥಳಗಳಲ್ಲಿಯೂ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ತಡೆಯಲು ಕೈಗೊಂಡ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕರಾದ ಬಸವರಾಜ, ಶರಣಬಸಪ್ಪ, ವಾಹನ ಚಾಲಕ ಅಮರೇಶ ಹಾಗೂ ಗೃಹರಕ್ಷಕ ಸಿಬ್ಬಂದಿ ಭಾಗವಹಿಸಿದ್ದರು.

ಭ್ರಷ್ಟರ ಬೇಟೆ

Recent Posts

ಮೈಸೂರು ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಕಾರ್ತಿಕ್‌ಗೆ ಮರಣದಂಡನೆ

9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಚಾಕುವಿನಿಂದ 27 ಬಾರಿ ಇರಿದು ಕೊಲೆ ಮಾಡಿದ್ದ ಪ್ರಕರಣ; ₹1 ಲಕ್ಷ…

50 minutes ago

ಕಾರವಾರ–ಇಳಕಲ್ ರಾಜ್ಯ ಹೆದ್ದಾರಿ ದುಸ್ಥಿತಿ: ಹಳೆಕೋಟದಿಂದ ಕಡವಾಡ ಕ್ರಾಸ್‌ವರೆಗೆ ಸಂಚಾರ ದುಸ್ತರ

ಕಾರವಾರ: ಕಾರವಾರ–ಇಳಕಲ್–ಕೈಗಾ ರಾಜ್ಯ ಹೆದ್ದಾರಿಯ ಹಳೆಕೋಟದಿಂದ ಕಡವಾಡ ಕ್ರಾಸ್‌ವರೆಗಿನ ರಸ್ತೆಯ ಒಂದು ಬದಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ…

52 minutes ago

ಥಾರ್–ಬೊಲೆರೋ ನಡುವೆ ಭೀಕರ ಅಪಘಾತ: ಶಾಸಕ ಮಾನಪ್ಪ ವಜ್ಜಲ್ ಸಹೋದರನ ಪುತ್ರನಿಗೆ ಗಂಭೀರ ಗಾಯ

ಹೊನ್ನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 150ಎರಲ್ಲಿ ಘಟನೆ; ಬೊಲೆರೋದಲ್ಲಿದ್ದ ಇಬ್ಬರ ಕಾಲು ಮುರಿತ ಲಿಂಗಸುಗೂರು: ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದ ಸಮೀಪ…

54 minutes ago

ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ: ಪತ್ನಿ ಮುಸ್ಕಾನ್‌, ಪ್ರಿಯಕರ ಸಾಹಿಲ್‌ಗೆ ಮರಣದಂಡನೆ

ಮೀರತ್: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಉತ್ತರ ಪ್ರದೇಶದ ಮೀರತ್‌ನ ಬ್ಲೂ ಡ್ರಮ್ ಕೊಲೆ ಪ್ರಕರಣದಲ್ಲಿ ಪತ್ನಿ ಮುಸ್ಕಾನ್ ರಸ್ತೋಗಿ…

1 week ago

ಚಿಕ್ಕೋಡಿಯಲ್ಲಿ ಉಪಲೋಕಾಯುಕ್ತರ ದಿಢೀರ್ ತಪಾಸಣೆ: ಸರ್ಕಾರಿ ಕಚೇರಿಗಳ ಲೋಪದೋಷಗಳ ವಿರುದ್ಧ 27 ಸ್ವಯಂಪ್ರೇರಿತ ಪ್ರಕರಣ ದಾಖಲು

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸೆಪ್ಟೆಂಬರ್ 24…

2 weeks ago

ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗೆ ಅಮಾನತು ಬಿಸಿ ಮುಟ್ಟಿಸಿದ ಡಿಸಿಎಂ ಪರಮೇಶ್ವರ್

ದೇವನಹಳ್ಳಿ: ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಯೊಬ್ಬರನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಅಮಾನತುಗೊಳಿಸಿದ್ದಾರೆ. ಶುಕ್ರವಾರ ದೇವನಹಳ್ಳಿ…

2 weeks ago