Categories: CorruptionLatest

ರಸ್ತೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ: ಧೂಳಿನ ಕಾಟದಿಂದ ನರಳುತ್ತಿರುವ ಮೇಡ್ಲೇರಿ ಭಾಗದ ಜನರು

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಮೇಡ್ಲೇರಿ ಹೋಬಳಿಯ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ಜನರಿಗೆ ಸಂಕಷ್ಟದ ಕಾರಣವಾಗಿದೆ. ಈಗಾಗಲೇ ಇದ್ದ ರಸ್ತೆ ಕಿತ್ತು ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾದ ಅಧಿಕಾರಿಗಳು, ಕಲ್ಲಿನ ಪುಡಿ ಹಾಸಿ ಕೆಲಸವನ್ನು ಅರ್ಧದಲ್ಲೇ ಬಿಟ್ಟುಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಒಂದು ತಿಂಗಳಿನಿಂದ ಕಾಮಗಾರಿ ಆರಂಭವಾದರೂ, ಇದುವರೆಗೆ ಪೂರ್ಣಗೊಳ್ಳದೇ ವಾಹನ ಸವಾರರು ಹಾಗೂ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಮೇಲೆ ಹಾಸಿರುವ ಕಲ್ಲಿನ ಪುಡಿಗೆ ನೀರು ಎರಚದೇ ಇರುವುದರಿಂದ ಭಾರೀ ಪ್ರಮಾಣದಲ್ಲಿ ಧೂಳು ಏಳುತ್ತಿದ್ದು, ಎದುರು ಬರುವ ವಾಹನಗಳು ಸ್ಪಷ್ಟವಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರಿಂದ ಅಪಘಾತಗಳ ಭೀತಿ ಹೆಚ್ಚಾಗಿದ್ದು, ಸ್ವಲ್ಪ ಯಾಮಾರಿದರೆ ಪ್ರಾಣಾಪಾಯವಾಗುವಂತಹ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ದಿನನಿತ್ಯ ಸಂಚಾರ ಮಾಡುವ ಜನರು ಧೂಳಿನಿಂದ ಉಸಿರಾಟದ ಸಮಸ್ಯೆಗೂ ಒಳಗಾಗುತ್ತಿದ್ದಾರೆ.

ಸ್ಥಳೀಯರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಹಳೆಯ ರಸ್ತೆಯನ್ನು ಕಿತ್ತು ಹಾಕಿದ ಮೇಲೆ ಕನಿಷ್ಠ ಧೂಳು ನಿಯಂತ್ರಣಕ್ಕಾಗಿ ನೀರು ಎರಚುವ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಇದಕ್ಕೂ ಯಾವುದೇ ಗಮನ ಕೊಡದೇ ಜನರ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.

ತಕ್ಷಣವೇ ಕಾಮಗಾರಿ ಪೂರ್ಣಗೊಳಿಸುವುದರ ಜೊತೆಗೆ, ರಸ್ತೆ ಮೇಲೆ ನೀರು ಎರಚಿ ಧೂಳು ನಿಯಂತ್ರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇರುವುದಾಗಿ ಎಚ್ಚರಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

3 hours ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

18 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

23 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago