ಭೋಪಾಲ್, ಜುಲೈ 6: ಸರ್ಕಾರಿ ಶಾಲೆಗಳ ಗೆರೆಬರೆ ಹಂಚಿದ ಗೋಡೆಗಳಷ್ಟೆ ಅಲ್ಲ, ಅಲ್ಲಿ ನಡೆದಿರುವ ಪೇಂಟ್ ಕೆಲಸದ ಲೆಕ್ಕಾಚಾರಗಳು ಎಲ್ಲರನ್ನೂ ಬೆರಗಿಗೊಳಿಸುತ್ತಿವೆ. ಮಧ್ಯಪ್ರದೇಶದ ಸಹ್ದೋಲ್ ಜಿಲ್ಲೆಯ ಸಕಂಡಿ ಮತ್ತು ನಿಪಾನಿಯಾ ಗ್ರಾಮಗಳಲ್ಲಿ ನಡೆದ ಈ ಕೆಲಸಗಳು ಈಗ ಭ್ರಷ್ಟಾಚಾರದ ಜೀವಂತ ಉದಾಹರಣೆಗಳಾಗಿ ಚರ್ಚೆಗೆ ಗ್ರಾಸವಾಗಿವೆ.

ಸಕಂಡಿಯೊಂದರಲ್ಲಿ ಕೇವಲ ನಾಲ್ಕು ಲೀಟರ್ ಬಣ್ಣ ಬಳಿಯಲು ಸುಮಾರು 1.07 ಲಕ್ಷ ರೂ. ವೆಚ್ಚ ತರುವಂತೆ ಬಿಲ್ ಕಟ್ಟಿ ಹಾಕಲಾಗಿದೆ. ಇದಕ್ಕೂಹೆಚ್ಚು ನಂಬಲಾಗದ ಸಂಗತಿಯಾಗಿದ್ದು, ಈ ಕಾಮಗಾರಿಗಾಗಿ 168 ಕಾರ್ಮಿಕರು ಮತ್ತು 65 ಮೇಸ್ತ್ರಿಗಳು ನಿಯೋಜಿತರಾದಂತೆ ದಾಖಲೆಗಳಲ್ಲಿ ನಮೂದಾಗಿದೆ! ಮತ್ತೊಂದು ಘಟನೆ ನಿಪಾನಿಯಾ ಗ್ರಾಮದಲ್ಲಿ ಸಂಭವಿಸಿದ್ದು, ಅಲ್ಲಿ 20 ಲೀಟರ್ ಪೇಂಟ್ ಕೆಲಸಕ್ಕೆ 2.3 ಲಕ್ಷ ರೂ. ಪಾವತಿಸಿದ್ದು, 275 ಕಾರ್ಮಿಕರು ಮತ್ತು 150 ಮೇಸ್ತ್ರಿಗಳ ಸೇವೆ ಪಡೆಯಲಾಗಿದೆ ಎಂದು ದಾಖಲೆಗಳು ತಿಳಿಸುತ್ತವೆ.

ಹೀಗಾಗಿ, ಗೋಡೆಗಳು ಬಣ್ಣದಿಂದ ಬದಲಾಯಿಸಬೇಕಿದ್ದರೂ ಕಲೆಗಾರಿಕೆಯ ಬದಲು ಇಲ್ಲಿ ಕಾಗದಗಳ ಮೇಲೆ ಮಾತ್ರ ಕೆಲಸ ನಡೆಯಿತ್ತೆನ್ನುವ ಅನುಮಾನವಿದೆ. ಇದೊಂದು ಸಾಧಾರಣ ಲೆಕ್ಕಪತ್ರದ ತಪ್ಪಾಗಿರಬಹುದು ಎಂಬ ನಿರೀಕ್ಷೆ ಇರುವಾಗ, ಇದರ ಹಿಂದಿರುವ ಗಂಭೀರ ಭ್ರಷ್ಟಾಚಾರದ ಸುಳಿವುಗಳು ಅಧಿಕಾರಿಗಳ ನಿರ್ಲಕ್ಷ್ಯವನ್ನೂ, ವ್ಯವಸ್ಥೆಯ ದುರ್ನೀತಿಯನ್ನೂ ಎತ್ತಿ ತೋರಿಸುತ್ತವೆ.

ಈ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣವೇ ವೈರಲ್ ಆಗಿದ್ದು, ಸರಕಾರದ ಮೇಲ್ವಿಚಾರಣಾ ವ್ಯವಸ್ಥೆಯ ನಂಬಿಕೆಯನ್ನು ಪ್ರಶ್ನೆಗೊಳಿಸುತ್ತಿವೆ. ಈಗ ಈ ‘ಪೇಂಟ್ ಪ್ಯಾಕೇಜ್’ ಲೆಕ್ಕಾಚಾರಗಳ ಬಗ್ಗೆ ತನಿಖೆ ನಡೆಯಬೇಕೆಂಬ ಒತ್ತಾಯಗಳು ಹೆಚ್ಚಾಗುತ್ತಿವೆ.

Related News

error: Content is protected !!