ಕೊಟ್ಟೂರು:- ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಬೀಗ ಹಾಕಿದ ಮನೆಗಳನ್ನು ಹೊಂಚು ಹಾಕಿ ಕಳ್ಳತನ ನಡೆಸುತ್ತಿದ್ದ ತಂಡವನ್ನು ಹೆಡೆಮುರಿ ಕಟ್ಟುವಲ್ಲಿ ಕೊಟ್ಟೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರ ಮೂಲದ ನಾಲ್ವರು ಕಳ್ಳರನ್ನು ಬಂಧಿಸಿ 60 ಲಕ್ಷ ಮೌಲ್ಯದ ಚಿನ್ನ ಹಾಗೂ 20000 ರೂಪಾಯಿ ನಗದನ್ನು ಜಪ್ತಿ ಮಾಡಿದ್ದಾರೆ.
ಪಟ್ಟಣದ ರೇಣುಕಾ ಬಡಾವಣೆ ಮನೆಯ ಮುಂದೆ 15 ದಿನಗಳ ಹಿಂದೆ 20 ರಿಂದ 30 ವರ್ಷದ ನಾಲ್ವರು ಕಳ್ಳತನಕ್ಕೆ ಯತ್ನ ನಡೆಸುತ್ತಿರುವುದು ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು.

ಕಳ್ಳರ ಪತ್ತೆಗೆ ತಂಡ ರಚನೆ:- ಪ್ರಕರಣ ದಾಖಲಿಸಿಕೊಂಡು ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಸಿಪಿಐ ದುರುಗಪ್ಪ ಡಿ ಹಾಗೂ ಪಿಎಸ್ಸೈ ಗೀತಾಂಜಲಿ ಸಿಂಧೆ ಠಾಣೆ ಸಿಬ್ಬಂದಿಗಳಾದ ಶಂಕ್ರಪ್ಪ,ದೊಡ್ಡಬಸವನಗೌಡ, ಸಿದ್ದೇಶ್, ಬಸವರಾಜ್,ಶಶಿಧರ, ರಮೇಶ ಚಿದಾನಂದ,ಇವರುಗಳ ನೇತೃತ್ವದಲ್ಲಿ ತಂಡ ರಚಿಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದರು.ಕೂಡಲೇ ತನಿಖೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಕೊಟ್ಟೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಕೊಟ್ಟೂರು ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್ ಪ್ರಶಂಸಿದ್ದಾರೆ.

ವರದಿ:- ಮಣಿಕಂಠ. ಬಿ

Related News

error: Content is protected !!