ಅಳ್ನಾವರ: ಕನ್ನಡ ನಾಡಿನಾದ್ಯಂತ ಮುಂಬರುವ ನವೆಂಬರ ತಿಂಗಳ ಒಂದನೆಯ ತಾರಿಖಿನ ಕರ್ನಾಟಕ ರಾಜ್ಯೋತ್ಸವದ ವಿಶೇಷವಾಗಿ 67 ನೇ ವರ್ಷದ ಪ್ರಯುಕ್ತ ಕನ್ನಡ ನುಡಿ ನಮನ ಏಕಕಾಲದಲ್ಲಿ ಕರುನಾಡ ತಾಯಿ ಭುವನೇಶ್ವರಿ ತಾಯಿಯ ಪಾದಕ್ಕೆ ಕೋಟಿ ಕಂಠಗಳ ದ್ವನಿಯಲ್ಲಿ ಅರ್ಪಣೆ .ಇದರ ಪ್ರಯುಕ್ತ ಅಳ್ನಾವರ ತಾಲೂಕಿನ ಶ್ರೀ ಪ್ರಭುದೇವ ಪ್ರೌಢಶಾಲೆ ಹೊನ್ನಾಪೂರದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನೆರವೇರಿತು. ಶಿಕ್ಷಕ ಬಾಬಾಜಾನ ಮುಲ್ಲಾ ರವರ ನೇತೃತ್ವದಲ್ಲಿ ಒಟ್ಟು ೯೦ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡಪರ ಗೀತೆಗಳನ್ನು ಹಾಡಿದರು. ಮುಖ್ಯಾಧ್ಯಾಪಕ ಶ್ರೀ ಎಂ ಎ ಬಾದಗಿ ಸ್ವಾಗತಿಸಿದರು, ಶ್ರೀ ಎಸ್ ಜಿ ಅಕ್ಕಿ ಸ್ವಾಗತಿಸಿದರು.

ವರದಿ: ಚರಂತಯ್ಯ ಹಿರೇಮಠ.

Related News

error: Content is protected !!