ಕ್ಯಾರಿಬಿಯನ್ ದೇಶವೊಂದರಲ್ಲಿ ನಡೆದ ದಾರುಣ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಿಮ್ ಸಿಂಗ್ ಎಂಬ ಯುವತಿಯನ್ನು ತನ್ನ ಪತಿಯನ್ನು ನದಿಗೆ ತಳ್ಳಿ ಸಾವಿಗೆ ಕಾರಣಳಾದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಮಾಹಿತಿಯ ಪ್ರಕಾರ, ಕಿಮ್ ಅವರ ಪತಿ ಹಲವು ವರ್ಷಗಳಿಂದ ಅಮೆರಿಕ ವೀಸಾ ಪಡೆಯಲು ಪ್ರಯತ್ನಿಸುತ್ತಿದ್ದರು. ಅವರು ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಅವರಿಗೆ ಅಮೆರಿಕ ಪ್ರವಾಸ ವೀಸಾ ದೊರಕಿತ್ತು.

ಆದರೆ, “ನನ್ನ ವೀಸಾ ಕೂಡ ಬಂದ ಬಳಿಕ ಇಬ್ಬರೂ ಒಟ್ಟಿಗೆ ಅಮೆರಿಕಕ್ಕೆ ಹೋಗೋಣ” ಎಂದು ಕಿಮ್ ಮನವಿ ಮಾಡಿದ್ದಾಳೆ ಎನ್ನಲಾಗಿದೆ. ಇದಕ್ಕೆ ಪತಿ, “ನಾನು ಮೊದಲು ಹೋಗಿ ಕೆಲಸ ಹಾಗೂ ವಾಸದ ವ್ಯವಸ್ಥೆ ಮಾಡಿಕೊಂಡು ನಂತರ ನಿನ್ನನ್ನು ಕರೆಸಿಕೊಳ್ಳುತ್ತೇನೆ” ಎಂದು ಉತ್ತರಿಸಿದ್ದನು.

ಈ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಬಳಿಕ ಪಿಕ್ನಿಕ್‌ಗೆ ಹೋಗುವ ನೆಪದಲ್ಲಿ ಪತಿಯನ್ನು ನದಿಯ ತೀರಕ್ಕೆ ಕರೆದುಕೊಂಡು ಹೋಗಿ ನೀರಿಗೆ ತಳ್ಳಿದ ಆರೋಪ ಕಿಮ್ ವಿರುದ್ಧ ಕೇಳಿಬಂದಿದೆ. ಪತಿಗೆ ಈಜು ಬಾರದ ಕಾರಣ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ದೃಶ್ಯ ಅಲ್ಲಿದ್ದ ಕುರಿಗಾಹಿಯೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ಪೊಲೀಸರು ಕಿಮ್ ಸಿಂಗ್ ಅವರನ್ನು ಬಂಧಿಸಿದ್ದಾರೆ.

ಪ್ರಸ್ತುತ ಆರೋಪಿ ಪೊಲೀಸ್ ವಶದಲ್ಲಿದ್ದು, ಪ್ರಕರಣದ ವಿಚಾರಣೆ ಜುಲೈ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ.

Related News

error: Content is protected !!