ಸರಿಯಾಗಿ ಮೈ ಬಗ್ಗಿಸಿ ಕಷ್ಟ ಪಟ್ಟು ದುಡಿದು ಜೀವನ ಮಾಡಬೇಕು ಅದನ್ನು ಬಿಟ್ಟು ಅಡ್ಡ ದಾರಿ ಹಿಡಿಯಬಾರದು……
ಛೋಟಾ ಮುಂಬೈ ( ಹುಬ್ಬಳ್ಳಿ ) ಯಲ್ಲಿ ಅಕ್ರಮ ಚಟುವಟಿಕೆ ಒಂದಾ ಎರಡಾ…..
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹಿಂಭಾಗದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ತಿಳಿದ ಹುಬ್ಬಳ್ಳಿಯ ಉಪನಗರ ಪೋಲಿಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಿಂಭಾಗದಲ್ಲಿ ಕಾರ್ಯಾಚರಣೆ ನಡೆಸಿದ ಉಪನಗರ ಪೋಲಿಸ್ ಠಾಣೆಯ ಪೊಲೀಸರು ಓರ್ವ ವ್ಯಕ್ತಿ ಸೇರಿದಂತೆ ಅಂದಾಜು 4500/- ರೂ ಕಿಮ್ಮತ್ತಿನ 320 ಗ್ರಾಂ ಗಾಂಜಾ ಹಾಗೂ ಇಂತಹ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಹುಬ್ಬಳ್ಳಿ ಉಪನಗರ ಪೋಲಿಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಕಾಯ್ದೆಯ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ಪೊಲೀಸರು ಇನ್ನೂ ಇಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಕಡಿವಾಣ ಹಾಕಬೇಕಾಗಿದೆ……
ವರದಿ : ಶಿವ ಹುಬ್ಬಳ್ಳಿ .

Related News

error: Content is protected !!