ಕೊಟ್ಟೂರು:- ತಾಲ್ಲೂಕಿನ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತವು ಯೂರಿಯಾ ರಸಗೊಬ್ಬರವನ್ನು ವಿತರಿಸುವಾಗ ಸಂಬಂಧಪಡುವ ಎಲ್ಲಾ ಗ್ರಾಮಗಳ ರೈತರು ಏಕಕಾಲಕ್ಕೆ ಮುಗಿಬಿದ್ದ ಕಾರಣದಿಂದಾಗಿ ಕೆಲ ಕಾಲ ಪರದಾಡುವಂತಾಯಿತು.
ಈ ಭಾಗದಲ್ಲಿ ಕಡಿಮೆ ಪ್ರಮಾಣ ಮಳೆಯಾಗಿದ್ದರೂ ಬೀಜ, ಗೊಬ್ಬರದ ಅಭಾವದಿಂದಾಗಿ ಬಿತ್ತನೆ ಕಾರ್ಯ ವಿಳಂಬವಾಗುತ್ತಿದೆ. ರೈತರು ರಸಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಸರ್ಕಾರವು ಎಫ್ಐಡಿ (FID) ಕಡ್ಡಾಯಗೊಳಿಸಿರುವುದರಿಂದ ಮತ್ತು ನಿಗದಿತ ಪ್ರಮಾಣದಲ್ಲಿ ಮಾತ್ರ ಗೊಬ್ಬರ ಸಿಗುತ್ತಿರುವುದರಿಂದ ರೈತರಿಗೆ ಅನಾನುಕೂಲವಾಗುತ್ತಿದೆ. ಕೃಷಿ ಇಲಾಖೆಯು ಕೂಡಲೇ ಕಾರ್ಯಪ್ರವೃತ್ತಗೊಂಡು ನಿಗದಿತ ಅವಧಿಯಲ್ಲಿ ಬೀಜ, ರಸಗೊಬ್ಬರವನ್ನು ಸರಬರಾಜು ಮಾಡಲು ಅನುವು ಮಾಡಿಕೊಡಬೇಕೆಂದು ಪ್ರಗತಿ ಪರ ರೈತರು ಅಭಿಪ್ರಾಯಪಟ್ಟರು.
ವರದಿ:- ಮಣಿಕಂಠ. ಬಿ
