Corruption

ಸಿದ್ದರಾಮಯ್ಯ ಸರ್ಕಾರದ ಮತ್ತೊಂದು ಭ್ರಷ್ಟಾಚಾರ ಬಟಾ ಬಯಲು!

ಬಿಟ್ಟಿ ಭಾಗ್ಯಗಳಿಗೆ ಪ್ರಖ್ಯಾತಿ ಪಡೆದಿದ್ದ ಕಾಂಗ್ರೆಸ್ ಸರ್ಕಾರ ಈಗ ವರ್ಗಾವಣೆ ಪದೋನ್ನತಿಯ ಭ್ರಷ್ಟಾಚಾರಗಳ ಕುರಿತು ಪ್ರಖ್ಯಾತಿ ಪಡೆಯುತ್ತಿದೆ. ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರಗಳು ಇತ್ತೀಚಿಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ.

ಮತ್ತೊಂದು ಭ್ರಷ್ಟಾಚಾರ?
ಜನವರಿ-01-2025 ರಂದು ಅಬಕಾರಿ ಆಯುಕ್ತರು, 35 ಅಧಿಕಾರಿಗಳನ್ನು ಅಬಕಾರಿ ನಿರೀಕ್ಷಕರ ವೃಂದಕ್ಕೆ ಸ್ಥಾನಪನ್ನ ಪದೋನ್ನತಿ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿರುತ್ತಾರೆ. ಈ ಆದೇಶ ಹೊರಡಿಸಿದ ಮರುದಿನವೇ ಅಬಕಾರಿ ಆಯುಕ್ತರಾದ ರವಿಶಂಕರ್ ರವರ ವರ್ಗಾವಣೆಯಾಗಿದೆ. ದಿಡೀರನೆ ಈ ರೀತಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


ಇದಕ್ಕೆಲ್ಲಾ ಕಾರಣ ಅಬಕಾರಿ ಮಂತ್ರಿಗಳಾದ ಬಿ.ಆರ್ ತಿಮ್ಮಾಪುರ ರವರು ಎಂಬ ಮಾತು ಇಲಾಖೆಯಲ್ಲೆಲ್ಲಾ ಓಡಾಡುತ್ತಿದೆ.

ಅಬಕಾರಿ ಮಂತ್ರಿ ತಿಮ್ಮಾಪುರರಿಗೆ ಪದೋನ್ನತಿ ವಿಚಾರದಲ್ಲಿ ಹಣ ದೋಚುವ ದುರಾಸೆಯೇ?
ಈ ಮಾತಿಗೆ ಪುಷ್ಟಿ ಕೊಡುವಂತೆ ಅಬಕಾರಿ ಅಧಿಕಾರಿಗಳಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಿದ ದಿನವೇ ಅದನ್ನು ತಡೆ ಹಿಡಿಯುವಂತೆ ಮಂತ್ರಿಗಳು ಹೇಳಿರುವ ಮಾಹಿತಿ ಲಭ್ಯವಾಗಿದ್ದು ಇದು ಯಾವ ಉದ್ದೇಶಕ್ಕೆ ಎಂಬುದರ ಸ್ಪಷ್ಟ ಮಾಹಿತಿಯನ್ನು ಹೊರಹಾಕಿರುವುದಿಲ್ಲ. ಮೂಲಗಳ ಪ್ರಕಾರ ಪದೋನ್ನತಿ ನೀಡುವ ವಿಚಾರದಲ್ಲಿ ಹಣ ಪಡೆದು ಬಡ್ತಿ ನೀಡಬೇಕೆಂಬ ಉದ್ದೇಶದಲ್ಲಿ ಮಂತ್ರಿಗಳಿದ್ದು, ಅದೇ ಉದ್ದೇಶದಿಂದ ಅಬಕಾರಿ ಆಯುಕ್ತ ರವಿಶಂಕರ್ ರವರು ನೀಡಿರುವ ಆದೇಶವನ್ನು ತಡೆಹಿಡಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವ್ಯವಹಾರದ ಜವಾಬ್ದಾರಿ ಹೊತ್ತಿದ್ದಾನ ಶೆಟ್ಟಿ?
ಪದೋನ್ನತಿ ಪಡೆದಿರುವ ಅಧಿಕಾರಿಗಳು ಮತ್ತು ಮಂತ್ರಿಗಳ ಮಧ್ಯೆ ಶೆಟ್ಟಿ ಎಂಬಾತ ಮಧ್ಯಸ್ಥಿಕೆ ವಹಿಸಿದ್ದು ಹಣದ ವಿಚಾರದಲ್ಲಿ ಹಲವು ಅಧಿಕಾರಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂಬ ಮಾಹಿತಿಯು ಸಹ ಲಭ್ಯವಾಗಿದೆ.
ಪದೋನ್ನತಿ ಪಡೆದಿರುವ ಅಧಿಕಾರಿಗಳ ಪಟ್ಟಿಯಲ್ಲಿರುವ ಕೆಲವರು ಅಬಕಾರಿ ಆಯುಕ್ತರು ತುಂಬಾ ಒಳ್ಳೆಯವರು ಅವರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರೆ! ಇನ್ನೂ ಕೆಲವರು ಅವರು ಮಾಡಿರುವ ಕೆಲಸದಲ್ಲಿ ಹಣ ಮಾಡುವ ನಿಟ್ಟಿನಲ್ಲಿ ಮಂತ್ರಿಗಳು ಈಗ ಮಧ್ಯದಲ್ಲಿ ಬಂದಿದ್ದಾರೆ ಎಂಬ ಮಾತುಗಳನ್ನು ಸಹ ಆಡುತ್ತಿದ್ದಾರೆ.
ಇಲಾಖೆಯಲ್ಲಿ ಕೇಳಿಬರುತ್ತಿರುವ ಮಾತುಗಳಂತೆ ಅಬಕಾರಿ ಮಂತ್ರಿಗಳಾದ ತಿಮ್ಮಾಪುರ ರವರು ಪದೋನ್ನತಿ ವಿಚಾರದಲ್ಲಿ ಹಣ ಮಾಡಲು ಮುಂದಾಗಿದ್ದಾರಾ?

ಕಾಂಗ್ರೆಸ್ ಸರ್ಕಾರ ನಡೆಯುತ್ತಿರುವುದೇ ವರ್ಗಾವಣೆ ಮತ್ತು ಪದೋನ್ನತಿಗಳಿಂದಲಾ?
ಇತ್ತೀಚಿಗೆ ವರ್ಗಾವಣೆಯ ವಿಚಾರಗಳಲ್ಲಿ ಲಕ್ಷಾಂತರ ರೂ ಹಣ ಪಡೆಯುತ್ತಿರುವ ಮಾಹಿತಿಗಳು ಹೊರಬಿದ್ದಿದ್ದು ಈಗ ಅಧಿಕಾರಿಗಳ ಪದೋನ್ನತಿ ವಿಚಾರದಲ್ಲೂ ಲಕ್ಷಾಂತರ ರೂ ಭ್ರಷ್ಟಾಚಾರ ನಡೆಯುತ್ತಿರುವ ಮಾಹಿತಿಗಳು ಲಭ್ಯವಾಗುತ್ತಿವೆ. ನಿಜಕ್ಕೂ ಇದು ಕಾಂಗ್ರೆಸ್ ಸರ್ಕಾರದ ಹಗಲು ದರೋಡೆಯೇ?
ಪದೋನ್ನತಿ ಪಡೆದಿರುವ ಪಟ್ಟಿಯಲ್ಲಿರುವ ಬಹುತೇಕ ಅಧಿಕಾರಿಗಳು ಅಲ್ಪಸಂಖ್ಯಾತರು, ಎಸ್.ಸಿ/ಎಸ್.ಟಿ ಹಾಗೂ ಹಿಂದುಳಿದ ವರ್ಗದವರಾಗಿರುತ್ತಾರೆ. ಅಹಿಂದ ನಾಯಕರಾದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಹಿಂದ ದವರಿಂದಲೇ ಲೂಟಿ ಹೊಡೆಯುತ್ತಿರುವುದು ನೈತಿಕ ಅಧಃಪತನಕ್ಕಿಳಿದಿರುವುದಕ್ಕೆ ಸಾಕ್ಷಿಯಾಗಿದೆ.
ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಪದೋನ್ನತಿ, ವರ್ಗಾವಣೆ ವಿಚಾರಗಳಲ್ಲಿ ಅಧಿಕಾರಿಗಳ ಬಳಿ ಹಣ ಪಡೆದರೆ ಅಧಿಕಾರಿಗಳು ಪುನಃ ಆ ಹಣವನ್ನು ಎಲ್ಲಿಂದ ಪಡೆಯುತ್ತಾರೇ? ಅಧಿಕಾರಿಗಳ ಬಳಿ ಹಣ ಪಡೆದು ಮಂತ್ರಿಗಳು ಭ್ರಷ್ಟಾಚಾರ ನಡೆಸಿದರೆ ಕೊಟ್ಟಿರುವ ಹಣವನ್ನು ಹಿಂಪಡೆಯಲು ಅಧಿಕಾರಿಗಳು ಮತ್ತೆ ಭ್ರಷ್ಟಾಚಾರ ಮಾಡಲು ಮುಂದಾಗುತ್ತಾರೆ. ಭ್ರಷ್ಟಾಚಾರ ತಡೆಯಬೇಕಾದ ಜಾಗದಲ್ಲಿ ಸರ್ಕಾರವೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟಂತಾಗಿದೆ. ಆದ್ದರಿಂದ ಭ್ರಷ್ಟ ಮಂತ್ರಿಯಾದ ಬಿ ಆರ್ ತಿಮ್ಮಾಪುರ ರವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ, ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಸಮಗ್ರ ತನಿಖೆ ನಡೆಸಿ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸರ್ಕಾರದ ಘನತೆಯನ್ನು ಎತ್ತಿ ಹಿಡಿಯಬೇಕೆಂದು ‘ಭ್ರಷ್ಟರ ಬೇಟೆ’ ಪತ್ರಿಕೆ ಆಗ್ರಹಿಸುತ್ತದೆ.

ಭ್ರಷ್ಟರ ಬೇಟೆ

Recent Posts

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

39 minutes ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

16 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

20 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago