ಪೋಲಿಸರಿಂದ ಕಾರಣ ವಿಲ್ಲದೆ ಯುವಕನ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ಪೋಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ತಾಲ್ಲೂಕಿನ ಕಾನಮಾಕನಹಳ್ಳಿ ಗ್ರಾಮದ ಶಿವಪ್ಪ ಯುವಕನ ಮೇಲೆ ತಡರಾತ್ರಿ ಠಾಣೆಗೆ ಕರೆದೊಯ್ದು ಲಾಠಿ ಹಾಗೂ ಬೂಟಿನಲ್ಲಿ ಹೊಡೆದಿದ್ದಾರೆ ಎಂದು ಶಿವಪ್ಪ ಆರೋಪಿಸಿದ್ದಾರೆ.
ಪೋಲೀಸರಿಂದ ತೀವ್ರ ಹಲ್ಲೆಗೊಳಗಾದ ಶಿವಪ್ಪ ಚಿಕಿತ್ಸೆಗಾಗಿ ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ..
ಕಳೆದ ಎರಡು ತಿಂಗಳ ಹಿಂದೆ ನಡೆದಿದ್ದ ಟ್ಯಾಕ್ಟರ್ ಅಫಘಾತ ಪ್ರಕರಣ ಸಂಬಂದ ಶಿವಪ್ಪ ಜಾಮೀನು ಸಹ ಪಡೆದುಕೊಂಡಿರುತ್ತಾರೆ. ಅಫಘಾತ ಪ್ರಕರಣ ಸಂಬಂದ ಕಳೆದ ತಡ ರಾತ್ರಿ ಠಾಣೆಗೆ ಕರೆದೊಯ್ದು ಶ್ರೀನಿವಾಸಪುರ ಪೋಲೀಸ್ ಠಾಣೆಯ ಪಿಎಸ್.ಐ ನಾರಾಯಣಸ್ವಾಮಿ ಹಾಗು ಠಾಣೆ ಎಸ್ಬಿ ರಾಮಚಂದ್ರಪ್ಪ ರಿಂದ ಹಲ್ಲೆಯಾಗಿದ್ದು, ಜಾಮೀನು ಪಡೆದಿದ್ದರು ಹಣಕ್ಕಾಗಿ ಹಲ್ಲೆ ನಡೆಸಿದ್ದಾರೆಂದು ಗಾಯಾಳು ಶಿವಪ್ಪ ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಾವು ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.

Related News

error: Content is protected !!