ಯುಎಸ್‌ನ ವಾಷಿಂಗ್ಟನ್‌ನಲ್ಲಿ ಪತಿಯೊಬ್ಬ ತನ್ನ ಹೆಂಡತಿಯನ್ನು ಚಾಕುವಿನಿಂದ ಇರಿದು ಜೀವಂತವಾಗಿ ಸಮಾಧಿ ಮಾಡಿದ್ದು, ಆಕೆ ತನ್ನ ʻApple Watchʼ ನಿಂದ 911 ಗೆ ಕರೆ ಮಾಡಿ ತನ್ನ ಪ್ರಾಣ ಉಳಿಸಿಕೊಂಡರುವ ಘಟನೆ ನಡೆದಿದೆ.
ಈ ಘಟನೆಯು ಅಕ್ಟೋಬರ್ 16 ರಂದು ಮಧ್ಯಾಹ್ನ ಸಂಭವಿಸಿದೆ. 42 ವರ್ಷದ ಪತ್ನಿಯನ್ನು ಚಾಕುವಿನಿಂದ ಇರಿದು, ಆಕೆಯ ಕೈಯನ್ನು ಕಟ್ಟಿ ಹಾಕಿ ಕಾಡಿನಲ್ಲಿ ಜೀವಂತವಾಗಿ ಸಮಾಧಿಯಲ್ಲಿ ಹೂತಿದ್ದಾನೆ. ಆದರೆ, ಮಹಿಳೆ ಸಮಾಧಿಯ ಮಣ್ಣನ್ನು ತೆಗೆದು ಹೊರಬಂದಿದ್ದು, ತನ್ನ ಕೈಯಿಗೆ ಕಟ್ಟಿದ್ದ ಆಯಪಲ್ ವಾಚ್‌ನಿಂದ 911 ಗೆ ಕರೆ ಮಾಡಿ ಸಹಾಯ ಕೋರಿದ್ದಾಳೆ ಎಂದು ತಿಳಿದುಬಂದಿದೆ.
ಕರೆ ನಂತರ, ಮಹಿಳೆಯನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮಹಿಳೆಯನ್ನು ಆಕೆಯ ಪತಿಯೇ ತನ್ನ ಮನೆಯಿಂದ ಅಪಹರಿಸಿದ್ದಾನೆ ಎಂದು ಆಕೆ ಮಾಹಿತಿ ನೀಡಿದ್ದಾಳೆ. ತನ್ನ ನಿವೃತ್ತಿ ಹಣವನ್ನು ನೀಡುವುದಕ್ಕಿಂತ ನಿನ್ನನ್ನು ಕೊಲ್ಲುವುದಾಗಿ ಆತ ಹೇಳಿದ್ದ ಎಂದೂ ಮಹಿಳೆ ಬಹಿರಂಗಪಡಿಸಿದ್ದಾಳೆ.
42 ವರ್ಷದ ಯಂಗ್ ಸೂಕ್ ಆನ್ 53 ವರ್ಷ ವಯಸ್ಸಿನ ಚೇ ಕ್ಯೋಂಗ್ ಆನ್ ಅವರನ್ನು ವಿವಾಹವಾಗಿದ್ದಾಳೆ. ಇವರಿಗೆ ಒಬ್ಬಳು ಮಗಳೂ ಕೂಡ ಇದ್ದಾಳೆ.
ಅಕ್ಟೋಬರ್ 16 ರ ಭಾನುವಾರ ಮಧ್ಯಾಹ್ನ 1.00 ಗಂಟೆಗೆ ಪತ್ನಿಯ ಮನೆಗೆ ಬಂದ ಪತಿ ಆಕೆಯೊಂದಿಗೆ ಜಗಳವಾಡಿದ್ದಾನೆ. ಇವರಿಬ್ಬರೂ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಹಣ ನೀಡುವ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.

Related News

error: Content is protected !!