ಗೃಹ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಲೇ ಸಂಕಷ್ಟದಲ್ಲಿರುವ ಜನ ಸಾಮಾನ್ಯರಿಗೆ ರಾಜ್ಯ ಸರ್ಕಾರ ಮತ್ತೊಂದು ಹೊರೆ ಹಾಕಲು ಮುಂದಾಗಿದೆ. ನೀರು ಮತ್ತು ವಿದ್ಯುತ್ ದರ ಏರಿಕೆಯ ಬೆನ್ನಲ್ಲೇ, ಈಗ ಮದ್ಯದ ದರವನ್ನು ಗಣನೀಯವಾಗಿ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಮುಂದಿನ ವಾರದಿಂದಲೇ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆ ಇದ್ದು, ಈ ಸಂಬಂಧ ಸರ್ಕಾರ ಈಗಾಗಲೇ ಕರಡು ಅಧಿಸೂಚನೆ ಪ್ರಕಟಿಸಿದೆ.
ಬೆಲೆ ಏರಿಕೆಯ ಹಿಂದಿರುವ ಕಾರಣ
ರಾಜ್ಯದ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ, ಕಳೆದ ಬಜೆಟ್ನಲ್ಲಿ ಘೋಷಿಸಿದಂತೆ ಮದ್ಯದ ಮೇಲೆ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬರುತ್ತಿದೆ. ಈ ಹೊಸ ನಿಯಮದಂತೆ, ಮದ್ಯದಲ್ಲಿರುವ ಆಲ್ಕೊಹಾಲ್ ಪ್ರಮಾಣದ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಇದರ ಪರಿಣಾಮವಾಗಿ ಸಾಮಾನ್ಯ ಜನರು ಹೆಚ್ಚಾಗಿ ಖರೀದಿಸುವ ‘ಎಕಾನಮಿ’ ಬ್ರ್ಯಾಂಡ್ಗಳ ಬೆಲೆ ಹೆಚ್ಚಾಗಲಿದೆ.
ಎಷ್ಟು ಏರಿಕೆ? (180 ಎಂಎಲ್ ಅಂದಾಜು ದರ)
ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್ಗಳ ಬೆಲೆಯಲ್ಲಿ ಸುಮಾರು 10ರಿಂದ 25 ರೂಪಾಯಿಗಳಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಒರಿಜಿನಲ್ ಚಾಯ್ಸ್: ₹95ರಿಂದ ₹115ಕ್ಕೆ
ಓಲ್ಡ್ ಟ್ಯಾವರಿನ್ (OT): ₹80ರಿಂದ ₹100ಕ್ಕೆ
ರಾಜಾ ವಿಸ್ಕಿ: ₹70ರಿಂದ ₹95ಕ್ಕೆ
ಹೇವಾರ್ಡ್ಸ್: ₹100ರಿಂದ ₹120ಕ್ಕೆ
ಈ ದರ ಏರಿಕೆ ಸಾಮಾನ್ಯ ಹಾಗೂ ಬಡ ವರ್ಗದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
