Crime

ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ 4 ವರ್ಷ ಜೈಲು, 20 ಸಾವಿರ ದಂಡ..!

ಕೋಲಾರ: 22/01/2024 ರಂದು ಮಧ್ಯಾಹ್ನ ಸುಮಾರು 01:45 ಗಂಟೆಯ ಸಮಯದಲ್ಲಿ ಹದಿನಾರು ಹರೆಯದ ಬಾಲಕಿ ತನ್ನ ಪರೀಕ್ಷೆ ಮುಗಿಸಿಕೊಂಡು ಚಿನ್ಮಯ ಶಾಲೆಯ ಮುಂಭಾಗದ ರೈಲ್ವೆ ಟ್ರ್ಯಾಕ್‌ನ್ನು ದಾಟಲು ಹೋಗುತ್ತಿದ್ದಾಗ ಮಳಬಾಗಿಲು ನಗರ, ಮುಜಾವರ್ ಮೊಹಲ್ಲಾ ವಾಸಿಯಾದ ಶೇಕ್ ಸಿರಾಜ್ ಪಾಷಾ ಅಲಿಯಾಸ್ ಶೇರು ಎಂಬುವ ಆರೋಪಿಯು ಸಂತ್ರಸ್ಥೆಯನ್ನು ಲೈಂಗೀಕ ದೌರ್ಜನ್ಯವೆಸಗುವ ಉದ್ದೇಶದಿಂದ 2-3 ಬಾರಿ ಹಿಂಬಾಲಿಸಿಕೊಂಡು ಹೋಗಿದ್ದ ಘಟನೆ ನಡೆದಿದೆ , ಆರೋಪಿಯು ತನ್ನನ್ನು ಹಿಡಿಯಲು ಬಂದಾಗ ನೊಂದ ಬಾಲಕಿ ಆರೋಪಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಮಯದಲ್ಲಿ ರೈಲ್ವೆ ಟ್ರ್ಯಾಕ್ ಕಲ್ಲುಗಳು ಕಾಲಿಗೆ ತಗುಲಿ ರೈಲ್ವೆ ಜಲ್ಲಿ ಕಲ್ಲುಗಳ ಮೇಲೆ ಬಿದ್ದು, ಕೆಳಗೆ ಉರುಳಿಕೊಂಡು ಹೋಗಿ ಬಿದ್ದಿರುವ ಘಟನೆ ನಡೆದಿತ್ತು. ಆ ಸಮಯದಲ್ಲಿ ಜಲ್ಲಿ ಕಲ್ಲುಗಳ ಮೇಲೆ ಜಾರಿ ಬಿದ್ದಿದ್ದರಿಂದ ನೊಂದ ಸಂತ್ರಸ್ತಿಯ ಬಲಗೈ ಮೂಳೆ ಮುರಿದಿತ್ತು, ನೊಂದ ಬಾಲಕಿಯ ಕೈ ಮುರಿಯಲು ಕಾರಣರನಾದ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಕಳೆದ ವರ್ಷ 23/01/2024 ರಂದು ರಾಣೆಯಲ್ಲಿ ದೂರು ನೀಡಿದ್ದುರು, ಪೋಲೀಸರು ಸಂತ್ರಸ್ತೆಯ ದೂರಿನನ್ವಯ ಠಾಣಾ ಮೊ.ಸಂ: 09/2024 ಕಲಂ: 325 ಐ.ಪಿ.ಸಿ ಮತ್ತು ಕಲಂ:12 ಪೋಕ್ಸೋ ಕಾಯ್ದೆ-2012 ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಹೊಂದಿಸುವಲ್ಲಿಯಾಗಿದ್ದರು.

ಪೊಲೀಸರು ಪ್ರಕರಣ ದಾಖಲಾದ ತಕ್ಷಣ ತನಿಖೆಯನ್ನು ಕೈಗೊಂಡು ಆರೋಪಿಯ ವಿರುದ್ಧ ಕೋಲಾರದ ಮಹಿಳಾ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಬಿ. ಶಂಕರಚಾರ್ ರವರು ಕೇವಲ 50 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಅಂತಿಮ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸಂತ್ರಸ್ಥೆಯ ಪರ ಸರ್ಕಾರಿ ವಿಶೇಷ ಅಭಿಯೋಜಕರಾದ ಶ್ರೀಮತಿ ಡಿ. ಲಲಿತಕುಮಾರಿ ರವರು ವಾದ ಮಂಡಿಸಿದರು, ಘನ ಅಪರ ಜಿಲ್ಲಾ ಮತ್ತು ಸತ್ರ ಶೀಘ್ರುಗತಿ ಎಫ್.ಟಿ. ಎಸ್. ಸಿ-1 ಪೋಕ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ. ಕೆ. ಬಿ ಪ್ರಸಾದ್. ರವರು ವಿಚಾರಣೆ ನಡೆಸಿ, ಆರೋಪಿ ವಿರುದ್ಧ ಆರೋಪ ಸಾಭೀತಾಗಿದ್ದರಿಂದ ಇದೇ 27 ಜನವರಿ 2025 ರಂದು ಅಪರಾಧಿಗೆ 04 ವರ್ಷ ಕಠಿಣ ಕಾರಗೃಹ ಶಿಕ್ಷೆ ಮತ್ತು 20 ಸಾವಿರ ರೊ. ದಂಡ ವಿಧಿಸಲಾಗಿದೆ. ಹಾಗು ಸಂತ್ರಸ್ಥೆಗೆ ಸರ್ಕಾರದಿಂದ 02ಲಕ್ಷ ರೂ. ಪರಿಹಾರ ನೀಡುವಂತೆ ಐತಿಹಾಸಿಕ ತೀರ್ಪನ್ನು ನ್ಯಾಯಾಲಯ ನೀಡಿದೆ.

ಇಂತಹ ಐತಿಹಾಸಿಕ ತೀರ್ಪಿನಿಂದ ಪೊಲೀಸರ ಮತ್ತು ನ್ಯಾಯಾಲಯದ ಮೇಲೆ ಸಾರ್ವಜನಿಕರ ವಿಶ್ವಾಸ ಹೆಚ್ಚಿಸಿದ್ದು ಹಲವರು ಈ ತೀರ್ಪಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ತನಿಖೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ. ವರದಿ : ರೋಶನ್ ಜಮೀರ್

nazeer ahamad

Recent Posts

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

12 hours ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

16 hours ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

19 hours ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

24 hours ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

2 days ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

2 days ago