ಮದ್ಯದ ಅಮಲಿನಲ್ಲಿ ಕೈಯಲ್ಲಿ ಮಚ್ಚು ಹಿಡಿದು ಯುವಕನೋರ್ವ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ ಘಟನೆ ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದ್ಯ ಸೇವಿಸಿ ಸಿಕ್ಕ ಸಿಕ್ಕವರ ಮೇಲೆ ಮಚ್ಚು ಬೀಸಿದ ಯುವಕ, ನಿಂತಿದ್ದ ಕಾರಿಗೂ ಹಾನಿಗೊಳಿಸಿದ್ದಾನೆ. ಪರಿಣಾಮವಾಗಿ ಕಾರಿನ ಹಿಂದಿನ ಗಾಜು ಪುಡಿಪುಡಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಲಿಸುತ್ತಿದ್ದ ಲಾರಿ ಚಾಲಕನ ಮೇಲೆ ಮಾತ್ರವಲ್ಲದೆ, ಬೈಕ್ ಸವಾರರು, ನಿಂತವರ ಮೇಲೂ ಮಚ್ಚು ಬೀಸಿದ್ದಾನೆ. ಭೀತಿಗೊಂಡ ಸಾರ್ವಜನಿಕರು ಪುಂಡಾಟ ಮೆರೆಯುತ್ತಿದ್ದ ಯುವಕನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Related News

error: Content is protected !!