Latest

ಲಾರಿ ಅಡ್ಡಗಟ್ಟಿ ಹಣ ಬೇಡಿದ ಪ್ರಕರಣ: ಶೃಂಗೇರಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳನ್ನು ಬಂಧಿಸಿದ್ದ ಪೊಲೀಸರು

ಬಾಳೆಹೊನ್ನೂರು: ಲಾರಿಯನ್ನು ಅಡ್ಡಗಟ್ಟಿ ಹಣಕ್ಕಾಗಿ ಬೇಡಿಕೆ ಇಟ್ಟು, ಚಾಲಕನಿಗೆ ಹಲ್ಲೆ ಮಾಡಿದ ಆರೋಪದ ಮೇಲೆ ಶೃಂಗೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್ ಹಾಗೂ ಮೆಣಸೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜು ಅವರನ್ನು ಬಾಳೆಹೊನ್ನೂರು ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಈ ಘಟನೆ ಬಾಳೆಹೊನ್ನೂರು ಸಮೀಪ ಹರಿಗೆ ಎಂಬಲ್ಲಿ ನಡೆದಿದೆ. ಕಾಫಿ ಸಾಗಣಿಕೆ ಮಾಡುತ್ತಿದ್ದ ಲಾರಿಯನ್ನು ಸರ್ಕಾರಿ ವಾಹನದಲ್ಲಿ ಬಂದ ಇಬ್ಬರು ಆರೋಪಿಗಳು ತಡೆದು ನಿಲ್ಲಿಸಿದ್ದಾರೆ. ಬಳಿಕ, ಲಾರಿಯಲ್ಲಿದ್ದ ಕಾಫಿ ಸರಕು ಸಂಬಂಧಿತ ಬಿಲ್ ನೀಡಲು ಚಾಲಕ ಆತೀಫ್ ಮುಂದಾದಾಗ, ಅವರು ₹50,000 ಲಂಚ  ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಹಣ ನೀಡಲು ನಿರಾಕರಿಸಿದ ಆತೀಫ್‌ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲಾಗಿದೆ.

ಘಟನೆ ಸಂಬಂಧ, ಆತೀಫ್ ಅವರ ಸ್ನೇಹಿತ ಹಾಗೂ ಹೇರೂರು ಗ್ರಾಮ ಪಂಚಾಯಿತಿ ಸದಸ್ಯ ಅಮ್ಜದ್ ಪೊಲೀಸ್ ದೂರು ನೀಡಿದ್ದಾರೆ. ‘ಇದು ಅಕ್ರಮವೆಂದು ಹೇಳಿದ ನನಗೂ ನಿಂದಿಸಿ, ಹಲ್ಲೆ ನಡೆಸಲಾಯಿತು. ಅಲ್ಲದೆ ಜೀವ ಬೆದರಿಕೆ ಹಾಕಲಾಯಿತು. ಸರ್ಕಾರಿ ವಾಹನ ದುರುಪಯೋಗ ಮಾಡಲಾಗಿದೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಸುದೀಪ್ ಮತ್ತು ಮಂಜು ಅವರನ್ನು ಬಂಧಿಸಿ ತಕ್ಷಣವೇ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಈ ಘಟನೆಯು ಸ್ಥಳೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನತೆ ಆಗ್ರಹಿಸುತ್ತಿದ್ದಾರೆ.

nazeer ahamad

Recent Posts

ಪ್ರಿಪೇಯ್ಡ್ ಮೊಬೈಲ್ ಬಳಕೆದಾರರಿಗೆ ಗುಡ್‌ನ್ಯೂಸ್: ಇನ್ಮುಂದೆ 30 ದಿನಗಳ ರೀಚಾರ್ಜ್, ವರ್ಷಕ್ಕೆ 12 ಬಾರಿ ಸಾಕು!

ನವದೆಹಲಿ: ಪ್ರಿಪೇಯ್ಡ್ ಮೊಬೈಲ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಜಾರಿಗೆ ತಂದಿದೆ. ಟೆಲಿಕಾಂ ಕನ್ಸ್ಯೂಮರ್ ಪ್ರೊಟೆಕ್ಷನ್ (ಥರ್ಟೀನ್ತ್ ಅಮೆಂಡ್‌ಮೆಂಟ್)…

8 hours ago

ರೈಲ್ವೇ ನಿಲ್ದಾಣದಲ್ಲಿ ಪತಿಯ ಕಣ್ಣೆದುರೇ ಪ್ರಿಯಕರನನ್ನು ತಬ್ಬಿದ ಇಬ್ಬರು ಮಕ್ಕಳ ತಾಯಿ! 20 ವರ್ಷದ ಯುವಕನ ಜೊತೆ ಹೋಗುತ್ತೇನೆಂದು ಹಠ.

ವಾರಣಾಸಿ (ಉತ್ತರ ಪ್ರದೇಶ): ಇಬ್ಬರು ಮಕ್ಕಳ ತಾಯಿಯೊಬ್ಬಳು ತನ್ನ 20 ವರ್ಷದ ಪ್ರಿಯಕರನೊಂದಿಗೆ ಹೋಗುವುದಾಗಿ ಪತಿಯ ಎದುರೇ ಹಠ ಹಿಡಿದು,…

23 hours ago

ಸಿವಿಲ್‌ ವ್ಯಾಜ್ಯದಲ್ಲಿ ಪೊಲೀಸ್‌ ಹಸ್ತಕ್ಷೇಪ: ಮಂಗಳೂರು ತನಿಖಾಧಿಕಾರಿಗೆ ಹೈಕೋರ್ಟ್‌ ತೀವ್ರ ಚಾಟಿ

ಮಂಗಳೂರು: ಸಿವಿಲ್‌ ವ್ಯಾಜ್ಯಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಬಾರದು ಎಂದು ನ್ಯಾಯಾಲಯಗಳು ಹಲವು ಬಾರಿ ಸ್ಪಷ್ಟಪಡಿಸಿದ್ದರೂ, ಇಂತಹ ಪ್ರಕರಣಗಳು ಮುಂದುವರಿಯುತ್ತಿವೆ. ಇದೀಗ…

24 hours ago

ಲೈಂಗಿಕ ಕಿರುಕುಳಕ್ಕೆ ಬೇಸತ್ತು ಸ್ನೇಹಿತನ ಜೊತೆ ಸೇರಿ ವ್ಯಕ್ತಿಯ ಕೊಲೆ: ಮಹಿಳೆ ಸೇರಿ ಇಬ್ಬರು ಅರೆಸ್ಟ್

ಅಥಣಿ: ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಹಿಳೆಯೊಬ್ಬಳು ತನ್ನ ಶಾಲಾ ದಿನಗಳ ಸ್ನೇಹಿತನ ನೆರವಿನಿಂದ ಹತ್ಯೆ ಮಾಡಿರುವ ಘಟನೆ…

1 day ago

ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ತೊಂದರೆ ಆಗಿದೆ: ಅರ್ಹರಿಗೆ ಮಾತ್ರ ಸೌಲಭ್ಯ ನೀಡಲು ಪರಿಷ್ಕರಣೆ – ಡಿಕೆಶಿ

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಮೇಲೆ ಆರ್ಥಿಕ ಒತ್ತಡ ಉಂಟಾಗಿರುವುದು ನಿಜ ಎಂದು ಉಪಮುಖ್ಯಮಂತ್ರಿ ಡಿ.ಕೆ.…

1 day ago

ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ; ಬೇಸತ್ತು ಚರಂಡಿ ಸ್ವಚ್ಛಗೊಳಿಸಿದ ಮಹಿಳೆ.

ಕೊಟ್ಟೂರು:- ತಾಲ್ಲೂಕಿನ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹರಾಳು ಗ್ರಾಮದ ದುಮ್ಮಾಡಿ ಕೆಂಚಮ್ಮ ಎಂಬ ಮಹಿಳೆಯೋರ್ವರು ತಮ್ಮ…

2 days ago