Categories: CrimeLatest

ಹೆಂಡತಿ ಮಕ್ಕಳನ್ನು ಕರೆತರಲು ಹೋದವ ಅನುಮಾನಾಸ್ಪದ ಸಾವು: ಪತ್ನಿಯ ಮೇಲೆ ಅನುಮಾನ..!

ದೊಡ್ಡಬಳ್ಳಾಪುರ ತಾಲ್ಲೂಕಿನ ಬೀಸುವನಹಳ್ಳಿ ಗ್ರಾಮದ ಶಿವಕುಮಾರ್ ಅಲಿಯಾಸ್ ಸಾದಿಕ್ (40) ಅವರ ಅನುಮಾನಾಸ್ಪದ ಸಾವು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಈ ಪ್ರಕರಣದಲ್ಲಿ ಪತ್ನಿ ರೇಷ್ಮಾ ಮೇಲೆ ಗಂಭೀರ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

ಶಿವಕುಮಾರ್ ಕುಟುಂಬವು ನಗರದ ವಿವಿಪುರಂ 13ನೇ ವಾರ್ಡ್‌ನ ಕುವೆಂಪು ರಸ್ತೆಯ ಶನಿಮಹಾತ್ಮಾ ದೇವಸ್ಥಾನದ ಹಿಂಭಾಗದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ಮಾಹಿತಿ ಪ್ರಕಾರ, ಶಿವಕುಮಾರ್ ತಡರಾತ್ರಿ ಸುಮಾರು 1:30ರ ವೇಳೆಗೆ ಮನೆಗೆ ಬಂದಿದ್ದರು. ಬೆಳಿಗ್ಗೆ 5:30ರ ಸುಮಾರಿಗೆ ಪತ್ನಿ ರೇಷ್ಮಾ, ಮೃತನ ಅಕ್ಕ ಲಕ್ಷಮ್ಮ ಅವರಿಗೆ ಕರೆ ಮಾಡಿ, “ನಿನ್ನ ತಮ್ಮನಿಗೆ ಗಾಯಗಳಾಗಿದ್ದವು. ನಾನು ನೀರು ಕುಡಿಸಿದ್ದೇನೆ, ನಂತರ ಅವರು ಸತ್ತರು. ಅದನ್ನು ಕಂಡು ನಾನು ಮೂರ್ಛೆ ಹೋಗಿದ್ದೇನೆ” ಎಂದು ತಿಳಿಸಿದ್ದಾರೆ.

ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯ ಗ್ರಾಮದ ರೇಷ್ಮಾ ಅವರನ್ನು ಶಿವಕುಮಾರ್ 17 ವರ್ಷಗಳ ಹಿಂದೆ ವಿವಾಹ ಮಾಡಿಕೊಂಡಿದ್ದರು. ದಂಪತಿಗೆ 16 ವರ್ಷದ ಮಗ ಹಾಗೂ 12 ವರ್ಷದ ಮಗಳು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ ನಡುವೆ ನಿರಂತರ ಜಗಳಗಳು ನಡೆಯುತ್ತಿದ್ದು, ಇಬ್ಬರೂ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರೆಂದು ತಿಳಿದುಬಂದಿದೆ.

ಮೃತನ ಅಕ್ಕ ಲಕ್ಷಮ್ಮ ಅವರು, “ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಾನು ಬುದ್ಧಿ ಹೇಳಿದ್ದೆ. ಆದರೆ ರೇಷ್ಮಾ, ‘ನಿನ್ನ ತಮ್ಮ ಬಂದರೆ ಏನಾಗುತ್ತೋ ಗೊತ್ತಿಲ್ಲ’ ಎಂದು ಹೇಳಿದ್ದಾಳೆ. ಇದರಿಂದ ಏನೋ ಅನುಮಾನ ಉಂಟಾಗಿದೆ” ಎಂದು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೊಕೊ ತಜ್ಞರ ತಂಡದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ವಿಚಾರಣೆ ಮುಂದುವರಿದಿದೆ.

ಈ ಘಟನೆ ಸ್ಥಳೀಯರಲ್ಲಿ ಆಘಾತ ಉಂಟುಮಾಡಿದ್ದು, ತನಿಖೆಯಿಂದ ಹೆಚ್ಚಿನ ಸತ್ಯಾಂಶಗಳು ಹೊರಬರುವ ನಿರೀಕ್ಷೆಯಿದೆ.

ವರದಿ: ಅವಿನಾಶ್

ಭ್ರಷ್ಟರ ಬೇಟೆ

Recent Posts

ಚಿಂಚೋಳಿ ತಾಲ್ಲೂಕಿನ ಹದಗೆಟ್ಟ ರಸ್ತೆಗಳಿಂದ ಜನರಿಗೆ ಸಂಕಷ್ಟ: ತಕ್ಷಣ ದುರಸ್ತಿ ಮಾಡಲು ಸಾರ್ವಜನಿಕರ ಆಗ್ರಹ

ಚಿಂಚೋಳಿ ತಾಲ್ಲೂಕಿನ ಗಂಜಗೇರಾ–ವಜೀರಗಾಂವ ಸಂಪರ್ಕ ರಸ್ತೆಯ ದುಸ್ಥಿತಿ ಜನರನ್ನು ಕಂಗೆಡಿಸಿದೆ. ರಸ್ತೆ ಸಂಪೂರ್ಣವಾಗಿ ಹದಗೆಟ್ಟು, ದೊಡ್ಡ ದೊಡ್ಡ ಗುಂಡಿಗಳಿಂದ ತುಂಬಿಕೊಂಡಿರುವುದರಿಂದ…

18 minutes ago

6 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ವಾಣಿಜ್ಯ ತೆರಿಗೆ ಡಿಸಿ: ಲೋಕಾಯುಕ್ತ ದಾಳಿ

ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಲೋಕಾಯುಕ್ತ ಪೊಲೀಸರು ಹುಬ್ಬಳ್ಳಿಯಲ್ಲಿ ಮಿಂಚಿನ ದಾಳಿ ನಡೆಸಿ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ…

6 hours ago

ಅಕ್ರಮ ಸಿಲಿಂಡರ್ ದಂಧೆ ಬಯಲು: ಅಧಿಕಾರಿಗೆ ಪ್ರಭಾವಿಗಳ ಒತ್ತಡ, ವೈರಲ್ ವಿಡಿಯೋದಿಂದ ಸಂಚಲನ

ಬೆಂಗಳೂರು ನಗರದ ಯಲಹಂಕ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 350 ಅಡುಗೆ ಅನಿಲ ಸಿಲಿಂಡರ್‌ಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ ಪ್ರಕರಣಕ್ಕೆ ಹೊಸ ತಿರುವು…

11 hours ago

ವಿವಾಹಿತೆಯೊಂದಿಗೆ ಸಂಬಂಧ: ಆಕೆಯನ್ನೇ ಕೊಂದು ಫ್ರಿಡ್ಜ್ ನಲ್ಲಿಟ್ಟ ನೌಕಾಪಡೆ ಉದ್ಯೋಗಿ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಗಾಜುವಾಕದಲ್ಲಿ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ತನ್ನೊಂದಿಗೆ ವಿವಾಹೇತರ…

11 hours ago

ತನ್ನ ಸ್ನೇಹಿತೆಯೊಂದಿಗೂ ಸಂಬಂಧ ಬೆಳೆಸು ಪತ್ನಿ ಒತ್ತಾಯ: ಬೆಂಗಳೂರಿನಲ್ಲಿ ಪತಿಯಿಂದ ದೂರು ದಾಖಲು.

ಬೆಂಗಳೂರು ನಗರದಲ್ಲಿ ಪತ್ನಿಯ ಮಾನಸಿಕ ಹಾಗೂ ಲೈಂಗಿಕ ಕಿರುಕುಳದಿಂದ ಬೇಸತ್ತ ಪತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಳಕಿಗೆ ಬಂದಿದೆ.…

12 hours ago

ಚಾಲಕನ ಸಮಯಪ್ರಜ್ಞೆ: ಮರಕ್ಕೆ ಡಿಕ್ಕಿ ಹೊಡೆಸಿ 16 ಪ್ರಯಾಣಿಕರ ಪ್ರಾಣ ಉಳಿಸಿದ ಕೆಕೆಆರ್‌ಟಿಸಿ ಬಸ್ ಚಾಲಕ

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಕೆಕೆಆರ್‌ಟಿಸಿ ಬಸ್ ಅಪಘಾತಕ್ಕೀಡಾದರೂ, ದೊಡ್ಡ…

12 hours ago