Categories: CorruptionCrimeLatest

ಅಕ್ರಮ ಸಿಲಿಂಡರ್ ದಂಧೆ ಬಯಲು: ಅಧಿಕಾರಿಗೆ ಪ್ರಭಾವಿಗಳ ಒತ್ತಡ, ವೈರಲ್ ವಿಡಿಯೋದಿಂದ ಸಂಚಲನ

ಬೆಂಗಳೂರು ನಗರದ ಯಲಹಂಕ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 350 ಅಡುಗೆ ಅನಿಲ ಸಿಲಿಂಡರ್‌ಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದಾಳಿಯ ವೇಳೆ ಮಹಿಳಾ ಅಧಿಕಾರಿಗೆ ಪ್ರಭಾವಿ ವ್ಯಕ್ತಿಯೊಬ್ಬರು ಕರೆ ಮಾಡಿ ಆರೋಪಿಗಳನ್ನು ಬಿಡುವಂತೆ ಒತ್ತಡ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.

ಸ್ಥಳೀಯರ ದೂರಿನ ಮೇರೆಗೆ ಆಹಾರ ಸರಬರಾಜು ಇಲಾಖೆ ಅಧಿಕಾರಿಗಳು ಹೆಚ್‌ಪಿ ಏಜೆನ್ಸಿಯ ಗೋದಾಮಿನ ಮೇಲೆ ದಾಳಿ ನಡೆಸಿದಾಗ, ದೊಡ್ಡ ಪ್ರಮಾಣದ ಅನಿಲ ಸಿಲಿಂಡರ್‌ಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಯಿತು. ಕೃತಕ ಕೊರತೆ ಸೃಷ್ಟಿಸಲು ಇವುಗಳನ್ನು ಸಂಗ್ರಹಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಅಧಿಕಾರಿಗಳು ಸಿಲಿಂಡರ್‌ಗಳನ್ನು ಜಪ್ತಿ ಮಾಡುವ ಕಾರ್ಯಾಚರಣೆಗೆ ಮುಂದಾದರು.

ಈ ವೇಳೆ ಪ್ರಭಾವಿ ವ್ಯಕ್ತಿಯೊಬ್ಬರು ಕರೆ ಮಾಡಿ ಆರೋಪಿಗಳನ್ನು ಬಿಡುವಂತೆ ಮತ್ತು ಸಿಲಿಂಡರ್‌ಗಳನ್ನು ಜಪ್ತಿ ಮಾಡದಂತೆ ಸೂಚನೆ ನೀಡಿರುವ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದೆ.

ವಿಡಿಯೋದಲ್ಲಿ ಮಹಿಳಾ ಅಧಿಕಾರಿ, “350 ಸಿಲಿಂಡರ್‌ಗಳು ಸಿಕ್ಕಿವೆ, ಇಂತಹವರನ್ನು ಹಿಡಿಯಲು ಹೇಳಬೇಡಿ” ಎಂದು ಕೋಪ ವ್ಯಕ್ತಪಡಿಸಿರುವುದು ಕೇಳಿಬರುತ್ತದೆ. ಈ ಘಟನೆಯಲ್ಲಿ ಪ್ರಭಾವಿ ವ್ಯಕ್ತಿಯ ಪಾತ್ರದ ಕುರಿತು ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇನ್ನೊಂದೆಡೆ, ಆಹಾರ ಇಲಾಖೆ ಸಚಿವ ಮುನಿಯಪ್ಪ ಅವರು ಆರೋಪಗಳನ್ನು ತಳ್ಳಿ ಹಾಕಿ, “ನನ್ನ ಹೆಸರನ್ನು ದುರ್ಬಳಕೆ ಮಾಡಲಾಗಿದೆ, ನಾನು ಯಾವುದೇ ಅಧಿಕಾರಿಗೆ ಕರೆ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆಯೇ, ಗೋದಾಮಿನ ಸಿಬ್ಬಂದಿ ಸಿಲಿಂಡರ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರಭಾವಿಗಳ ಹಸ್ತಕ್ಷೇಪದಿಂದ ಕಾನೂನು ಜಾರಿಯಲ್ಲಿ ವ್ಯತ್ಯಾಸ ಉಂಟಾಗುತ್ತಿದೆ ಎಂಬ ಆಕ್ರೋಶ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಭ್ರಷ್ಟರ ಬೇಟೆ

Recent Posts

25 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಗುಜರಾತ್‌ನಲ್ಲಿ ಬಂಧನ

ಯಲ್ಲಾಪುರ: 2001ರಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು…

1 day ago

ನೈಸ್ ಯೋಜನೆ ಮತ್ತೆ ಕಾವೇರಿದ ವಿವಾದ: ಸರ್ಕಾರದ ವಶಕ್ಕೆ ಪಡೆಯಲು ಜೆಡಿಎಸ್ ಒತ್ತಾಯ

ಬೆಂಗಳೂರು–ಮೈಸೂರು ಸಂಪರ್ಕವನ್ನು ಸುಧಾರಿಸುವುದು ಹಾಗೂ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ರೂಪುಗೊಂಡಿದ್ದ ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (BMICP)…

1 day ago

ಲೀಲಾ ದೂರವಾದ ಕೋಪ: ಮನೆಗೆ ನುಗ್ಗಿ ತಾಯಿಯ ಮೇಲೆ ಸೈಕಲ್ ಎತ್ತಿ ಹಾಕಿದ ಮಂಜ!

ಬೆಂಗಳೂರು: ಹುಳಿಮಾವು ಸಮೀಪದ ಬಸವನಪುರದಲ್ಲಿ ಲೀಲಾ-ಮಂಜ-ಸಂತು ನಡುವಿನ ತ್ರಿಕೋನ ಪ್ರೇಮಕಥೆ ಮತ್ತೆ ಸದ್ದು ಮಾಡಿದೆ. ಪತ್ನಿ ಲೀಲಾ ದೂರವಾಗಿದ್ದಾಳೆ ಎಂಬ…

2 days ago

ಮದುವೆಯ ಆಸೆ ತೋರಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ, ₹10 ಸಾವಿರ ಕಳುಹಿಸಿ ಕೈ ತೊಳೆದುಕೊಳ್ಳಲು ಮುಂದಾದ SI ವಿರುದ್ಧ ಕೇಸ್!

ಮೀರತ್: ರಕ್ಷಣೆ ನೀಡಬೇಕಾದ ಪೊಲೀಸನೇ ಯುವತಿಯೊಬ್ಬಳಿಗೆ ವಂಚನೆ ಎಸಗಿದ ಆರೋಪ ಉತ್ತರ ಪ್ರದೇಶದ ಮೀರತ್‌ನಲ್ಲಿ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ…

2 days ago

ಪ್ರೀತಿಯ ಹೆಸರಲ್ಲಿ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ: ಯುವತಿ ಆತ್ಮಹತ್ಯೆ; ಪ್ರಿಯಕರನ ವಿರುದ್ಧ ಕೇಸ್

ಬೆಂಗಳೂರು: ಪ್ರೀತಿಯ ಹೆಸರಿನಲ್ಲಿ ಯುವತಿಗೆ ನಿರಂತರ ಕಿರುಕುಳ ನೀಡಿ, ಖಾಸಗಿ ಫೋಟೋ-ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪ…

2 days ago

ಪತಿ-ಪ್ರೇಮಿ ಇಬ್ಬರ ಜತೆಗೂ ಸಂಸಾರಕ್ಕೆ ಅನುಮತಿ ಕೊಡಿ! ಪೊಲೀಸರ ಮುಂದೆ ಮಹಿಳೆಯ ವಿಚಿತ್ರ ಬೇಡಿಕೆ

ಸೀತಾಪುರ: ಪೊಲೀಸ್ ಠಾಣೆಗಳಿಗೆ ಪ್ರತಿದಿನ ಹಲವು ರೀತಿಯ ದೂರುಗಳು ಬರುತ್ತವೆ. ಆದರೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮಹಮೂದಾಬಾದ್ ಕೊತ್ವಾಲಿ…

2 days ago