ಇಂದಿನ ದಿನಗಳಲ್ಲಿ ಮದುವೆ ಎಂದರೆ ಅದ್ಧೂರಿ ಸಮಾರಂಭ, ಲಕ್ಷಾಂತರ ರೂಪಾಯಿ ಖರ್ಚು ಹಾಗೂ ವರದಕ್ಷಿಣೆಯ ಬೇಡಿಕೆ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ಆರ್‌ಪಿಎಫ್ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ಕೇವಲ ₹1 ಸಂಕೇತಾತ್ಮಕ ವರದಕ್ಷಿಣೆ ಪಡೆದು ಸರಳವಾಗಿ ವಿವಾಹವಾಗುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ.
ರಾಜಸ್ಥಾನದ ಧೋಲ್‌ಪುರ ಮೂಲದ ವಿನೀತ್ ಗೌತಮ್ ಅವರು ಆರ್‌ಪಿಎಫ್‌ನಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗದಲ್ಲಿರುವ ಕಾರಣ ಅವರಿಗೆ ಹಲವು ಕಡೆಗಳಿಂದ ಮದುವೆ ಪ್ರಸ್ತಾಪಗಳು ಬಂದಿದ್ದವು. ಆದರೆ, ವರದಕ್ಷಿಣೆ ಹಾಗೂ ಆಡಂಬರದ ಮದುವೆಗೆ ಒಪ್ಪದ ವಿನೀತ್, ತಮ್ಮದೇ ಗ್ರಾಮದ ಸರಳ ಕುಟುಂಬದ ಹುಡುಗಿಯನ್ನು ವಿವಾಹವಾಗುವ ನಿರ್ಧಾರ ಕೈಗೊಂಡಿದ್ದರು.
ವಿನೀತ್ ಅವರ ಇಚ್ಛೆಯಂತೆ ಅವರ ತಂದೆ ತಮ್ಮ ಬಾಲ್ಯದ ಸ್ನೇಹಿತ ಹಾಗೂ ರೈತರಾದ ಮನೋಹರ್ ಅವರ ಮನೆಗೆ ತೆರಳಿ ಮದುವೆ ಪ್ರಸ್ತಾಪ ಇಟ್ಟಿದ್ದರು. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಯಾವುದೇ ವರದಕ್ಷಿಣೆ ಪಡೆಯದೆ, ಕೇವಲ ₹1 ಅನ್ನು ಸಂಕೇತವಾಗಿ ಪಡೆದು ವಿವಾಹ ನಿಶ್ಚಯಿಸಲಾಯಿತು.
ನಂತರ ದೇವಸ್ಥಾನದಲ್ಲಿ ಯಾವುದೇ ಅದ್ಧೂರಿ ಕಾರ್ಯಕ್ರಮ, ಅನಗತ್ಯ ಖರ್ಚು ಅಥವಾ ವೈಭವದ ಪ್ರದರ್ಶನವಿಲ್ಲದೆ ಸರಳವಾಗಿ ವಿವಾಹ ನೆರವೇರಿತು. ಸರಳತೆ, ವರದಕ್ಷಿಣೆ ವಿರೋಧ ಹಾಗೂ ಕುಟುಂಬದ ಒಪ್ಪಿಗೆಯೊಂದಿಗೆ ನಡೆದ ಈ ಮದುವೆ ಇದೀಗ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.
ಉತ್ತಮ ಹುದ್ದೆಯಲ್ಲಿದ್ದರೂ ಹಣ ಮತ್ತು ಆಡಂಬರಕ್ಕೆ ಆದ್ಯತೆ ನೀಡದೆ ಸರಳ ಜೀವನದ ಮೌಲ್ಯಗಳನ್ನು ಗೌರವಿಸಿದ ವಿನೀತ್ ಗೌತಮ್ ಅವರ ನಡೆ, ವರದಕ್ಷಿಣೆ ಪದ್ಧತಿಯ ವಿರುದ್ಧ ಸಮಾಜಕ್ಕೆ ಮಹತ್ವದ ಸಂದೇಶ ನೀಡಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಸಂಸ್ಥೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಿಢೀರ್ ಕಾರ್ಯಾಚರಣೆ…
ದಾವಣಗೆರೆ: ಶಾಲೆಯ ಸಮವಸ್ತ್ರದಲ್ಲೇ ಅಜ್ಜಿಯ ಎದೆಗಪ್ಪಿಕೊಂಡು ಏನೂ ಅರಿಯದೆ ದಿಟ್ಟಿಸುತ್ತಿರುವ ಇಬ್ಬರು ಪುಟ್ಟ ಕಂದಮ್ಮಗಳು… “ನನ್ನ ಮಗನನ್ನು ತಂದುಕೊಡಿ” ಎಂದು…
ಪಾಕಿಸ್ತಾನದ ಜನಪ್ರಿಯ ಟಿಕ್‌ಟಾಕ್ ಸ್ಟಾರ್ ಶಂಸು ಬೀಬಿ ಅಲಿಯಾಸ್ ಆಯೆಶಾ ಗಿಲಮಾನಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ…
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದಲ್ಲಿ 40 ವರ್ಷದ ಮಹೇಶ್ ಎಂಬ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ…
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ (42) ನಿಧನರಾಗಿರುವ ವಿಚಾರ…
ಚಿತ್ರದುರ್ಗದಲ್ಲಿ ನಡೆದ ನವವಿವಾಹಿತೆ ಸುಮಲತಾ ಕೊಲೆ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ಯುವತಿ ಅತ್ಯಾಚಾರಕ್ಕೊಳಗಾಗಿ…