Categories: CrimeLatest

ಮದುವೆ ಮಾಡಿಸಿ ಕಳುಹಿಸಿದ್ರು.. ಅದೇ ದಿನ ನವವಿವಾಹಿತೆ ಕೊಲೆ! ಗಂಡನ ಸ್ನೇಹಿತರೇ ಆರೋಪಿಗಳು

ಚಿತ್ರದುರ್ಗದಲ್ಲಿ ನಡೆದ ನವವಿವಾಹಿತೆ ಸುಮಲತಾ ಕೊಲೆ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ಯುವತಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

20 ವರ್ಷದ ಸುಮಲತಾ ಅವರನ್ನು ಶುಕ್ರವಾರ ಗಜೇಂದ್ರ ಎಂಬಾತನೊಂದಿಗೆ ಮದುವೆ ಮಾಡಿಸಲಾಗಿತ್ತು. ಆದರೆ ಮದುವೆಯಾದ ಅದೇ ದಿನ ಸಂಜೆ ಆಕೆಯ ಮೇಲೆ ಗಂಡನ ಸ್ನೇಹಿತರಾದ ಬೋರಯ್ಯ ಹಾಗೂ ಕಾರಯ್ಯ ಅತ್ಯಾಚಾರ ಎಸಗಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್. ಮಹದೇವಪುರ ಬಳಿ ಕೃತ್ಯ ನಡೆದಿದ್ದು, ಕೊಲೆಯ ಬಳಿಕ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಸುಮಲತಾ ಅವರ ಮೃತದೇಹವನ್ನು ಬಾವಿಗೆ ಎಸೆದಿದ್ದರು ಎನ್ನಲಾಗಿದೆ.

ಪ್ರಕರಣದ ತನಿಖೆ ನಡೆಸಿದ ನಾಯಕನಹಟ್ಟಿ ಪೊಲೀಸರು ಆರೋಪಿಗಳಾದ ಬೋರಯ್ಯ ಮತ್ತು ಕಾರಯ್ಯ ಅವರನ್ನು ಬಂಧಿಸಿದ್ದಾರೆ. ಸಿಪಿಐ ಹನುಮಂತಪ್ಪ ಶಿರೇಹಳ್ಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಮದುವೆಯಾಗಿ ಹೊಸ ಜೀವನ ಆರಂಭಿಸಬೇಕಿದ್ದ 20 ವರ್ಷದ ಸುಮಲತಾ ಅವರ ಬದುಕು ಕೆಲವೇ ಗಂಟೆಗಳಲ್ಲಿ ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರಲ್ಲಿ ಆಕ್ರೋಶ ಹಾಗೂ ಆಘಾತಕ್ಕೆ ಕಾರಣವಾಗಿದೆ.

ಭ್ರಷ್ಟರ ಬೇಟೆ

Recent Posts

ಉತ್ತರ ಕನ್ನಡದಲ್ಲಿ ಲೋಕಾಯುಕ್ತರ ದಿಢೀರ್ ಕಾರ್ಯಾಚರಣೆ: 9 ಹಾಸ್ಟೆಲ್‌, ಆಸ್ಪತ್ರೆ ಸೇರಿ ವಿವಿಧ ಸರ್ಕಾರಿ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಸಂಸ್ಥೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಿಢೀರ್ ಕಾರ್ಯಾಚರಣೆ…

11 hours ago

12 ವರ್ಷಗಳ ದಾಂಪತ್ಯಕ್ಕೆ ಅಂತ್ಯ: ಪ್ರಿಯಕರನಿಗಾಗಿ ಗಂಡನನ್ನೇ ಕೊಂದ ಆರೋಪ, ಇಬ್ಬರು ಪುಟ್ಟ ಮಕ್ಕಳ ಬದುಕು ಅತಂತ್ರ

ದಾವಣಗೆರೆ: ಶಾಲೆಯ ಸಮವಸ್ತ್ರದಲ್ಲೇ ಅಜ್ಜಿಯ ಎದೆಗಪ್ಪಿಕೊಂಡು ಏನೂ ಅರಿಯದೆ ದಿಟ್ಟಿಸುತ್ತಿರುವ ಇಬ್ಬರು ಪುಟ್ಟ ಕಂದಮ್ಮಗಳು… “ನನ್ನ ಮಗನನ್ನು ತಂದುಕೊಡಿ” ಎಂದು…

11 hours ago

ಟಿಕ್‌ಟಾಕ್ ಸ್ಟಾರ್‌ಗೆ ದಾರುಣ ಅಂತ್ಯ: ಕಾರಿನ ಮೇಲೆ ಗುಂಡಿನ ದಾಳಿ, ಜನಪ್ರಿಯ ಯುವತಿ ಬಲಿ!

ಪಾಕಿಸ್ತಾನದ ಜನಪ್ರಿಯ ಟಿಕ್‌ಟಾಕ್ ಸ್ಟಾರ್ ಶಂಸು ಬೀಬಿ ಅಲಿಯಾಸ್ ಆಯೆಶಾ ಗಿಲಮಾನಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ…

11 hours ago

ಅಕ್ರಮ ಸಂಬಂಧಕ್ಕೆ ವಿರೋಧಿಸಿದ್ದ ಗಂಡನ ನಿಗೂಢ ಸಾವು; ಪತ್ನಿ ಬಂಧನ, ಪ್ರಿಯಕರನ ಬಂಧನಕ್ಕೆ ಕುಟುಂಬಸ್ಥರ ಆಗ್ರಹ

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದಲ್ಲಿ 40 ವರ್ಷದ ಮಹೇಶ್ ಎಂಬ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ…

12 hours ago

ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಸಾವು: ಡಿವೋರ್ಸ್‌ ಬಳಿಕ ಏನಾಗಿತ್ತು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ (42) ನಿಧನರಾಗಿರುವ ವಿಚಾರ…

12 hours ago

ಸುಳ್ಳು ಅತ್ಯಾಚಾರ ಕೇಸ್: ಯುವಕ 4.5 ವರ್ಷ ಜೈಲು, ಕೇಸ್ ಹಾಕಿದ ಯುವತಿಗೂ ಅದೇ ಶಿಕ್ಷೆ!

ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಸುಳ್ಳು ಆರೋಪದ ಮೂಲಕ ವ್ಯಕ್ತಿಯೊಬ್ಬನನ್ನು ಜೈಲಿಗೆ ಕಳುಹಿಸಿದ ಪ್ರಕರಣದಲ್ಲಿ ನ್ಯಾಯಾಲಯ ಕಠಿಣ ನಿಲುವು ತಾಳಿದೆ. ಯುವಕನ…

12 hours ago