ಅಪ್ರಾಪ್ತ ಬಾಲಕಿ ವಿದ್ಯಾರ್ಥಿ ಮೇಲೆ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಪಾವಗಡದ ಸಾಸಲುಕುಂಟೆಯಲ್ಲಿ ನಡೆದಿದೆ. ಪಿ. ನಾಗಭೂಷಣ್‌ ಆರೋಪಿ ಶಿಕ್ಷಕನಾಗಿದ್ದು, ಬಡಗನಹಳ್ಳಿ ಠಾಣೆಯ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಮೇಲೆ ಶಿಕ್ಷಕ ನಾಗಭೂಷಣ್‌ ದೌರ್ಜನ್ಯ ಎಸೆಗಿದ್ದು, ಈ ಕುರಿತು ಬಾಲಕಿಯ ತಾಯಿ ದೂರು ದಾಖಲಿಸಿದ್ದರು. ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಡಿಪಿಐ ಎಂ.ಆರ್‌. ಮಂಜುನಾಥ್‌ ನಾಗಭೂಷಣ್‌ ರನ್ನು ಅಮಾನತುಗೊಳಿಸಿದ್ದರು. ಈ ಹಿಂದೆ ಮಧುಗಿರಿ ಶಾಲೆಯಲ್ಲಿಯೂ ಈತ ವಿದ್ಯಾರ್ಥಿನಿಯೊಬ್ಬಳೊಡನೆ ಕರ್ತ್ಯವ್ಯದ ವೇಳೆ ಅನುಚಿತವಾಗಿ ವರ್ತಿಸಿದ ಆರೋಪ ಹೊಂದಿದ್ದ. ಅವನನ್ನು ಅಲ್ಲಿಂದ ವರ್ಗಾವಣೆ ಮಾಡಲಾಗಿತ್ತಾದರೂ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ.

Related News

error: Content is protected !!