Latest

ಹತ್ತೇ ದಿನದಲ್ಲಿ 12 ಅಪರಾಧಿಗಳ ಶಿರಚ್ಛೇದಿಸಿದ ಸೌದಿ ಅರೇಬಿಯಾ.

ಸೌದಿ ಅರೇಬಿಯಾ 10 ದಿನಗಳ ಅವಧಿಯಲ್ಲಿ 12 ಅವರಾಧಿಗಳ ತಲೆ ಕತ್ತರಿಸಿದೆ ಎಂದು ಮಾನವ ಹಕ್ಕುಗಳ ಸಂಘಟನೆಯೊಂದು ತಿಳಿಸಿದೆ. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಈ ಹಿಂದೆ ಇಂತಹ ಶಿಕ್ಷೆಗಳನ್ನು ಕಡಿಮೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ ಹೊರತಾಗಿಯೂ ದೇಶವು ಈ ವರ್ಷ ದಾಖಲೆಯ ಮರಣದಂಡನೆಗಳನ್ನು ವಿಧಿಸಿದೆ.
ಅವುಗಳಲ್ಲಿ ಹೆಚ್ಚಿನವು ಕತ್ತಿಯಿಂದ ಶಿರಚ್ಛೇದಗಳಾಗಿವೆ ಎಂದು ವರದಿ ಸೂಚಿಸುತ್ತದೆ.
ಮಾದಕವಸ್ತು ಸೇವನೆ ಆರೋಪದ ಮೇಲೆ ಜೈಲಿನಲ್ಲಿದ್ದ ಆರೋಪಿಗಳಿಗೆ ಈ ಎರಡು ವಾರಗಳಲ್ಲಿ ಮರಣದಂಡನೆ ವಿಧಿಸಲಾಯಿತು. ಅದರಲ್ಲಿ ಮೂವರು ಪಾಕಿಸ್ತಾನಿಗಳು, ನಾಲ್ಕು ಸಿರಿಯನ್ನರು, ಇಬ್ಬರು ಜೋರ್ಡಾನಿಯನ್ನರು ಮತ್ತು ಮೂವರು ಸೌದಿ ಪ್ರಜೆಗಳು ಸೇರಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. ಇದರೊಂದಿಗೆ ಈ ವರ್ಷ ಮರಣದಂಡನೆಗೆ ಒಳಗಾದವರ ಸಂಖ್ಯೆ ಕನಿಷ್ಠ 132 ಕ್ಕೆ ತಲುಪಿದೆ. ಇದು 2020 ಮತ್ತು 2021 ರ ಒಟ್ಟು ಸಂಖ್ಯೆಯನ್ನು ಮೀರಿದೆ ಎಂದು ವರದಿ ಹೇಳಿದೆ.
2018 ರಲ್ಲಿ, ಮೊಹಮ್ಮದ್ ಬಿನ್ ಸಲ್ಮಾನ್ ತಮ್ಮ ಆಡಳಿತವು ಮರಣದಂಡನೆ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು. ಕೊಲೆ ಅಥವಾ ನರಹತ್ಯೆ ತಪ್ಪಿತಸ್ಥರು ಮಾತ್ರ ಮರಣದಂಡನೆಗೆ ಒಳಪಡುತ್ತಾರೆ ಎಂದು ಹೇಳಿದ್ದರು.
2020 ರಲ್ಲಿ, ಜಮಾಲ್ ಖಶೋಗಿ ಹತ್ಯೆಯ ಬಳಿಕ ಸೌದಿಯ ಮರಣದಂಡನೆ ನೀತಿಯ ಬಗ್ಗೆ ತೀವ್ರ ಟೀಕೆಗಳು ಕೇಳಿಬಂದಿದವು. ಈ ರಕ್ತಸಿಕ್ತ ಅಧ್ಯಾಯವನ್ನು ಕೊನೆಗೊಳಿಸಲು ಸೌದಿ ಅರೇಬಿಯಾ ಕಾನೂನನ್ನು ಬದಲಾಯಿಸಿಕೊಳ್ಳುವುದಾಗಿ ಪ್ರಸ್ತಾಪಿಸಿತ್ತು. ಆ ಬಳಿಕ ಗಂಭೀರವಲ್ಲದ ಅಪರಾಧಗಳನ್ನು ಮಾಡಿದವರ ಮೇಲೆ ಮೃದುತ್ವ ತೋರುತ್ತಿರುವ ಸುಳಿವುಗಳು ಕಂಡುಬಂದವು.
ಆದರೆ ಸೌದಿ ಇದೆಲ್ಲವನ್ನು ಹೊರಗಷ್ಟೇ ತೋರಿಸಿಕೊಳ್ಳುತ್ತಿದೆ. ಆಂತರಿಕವಾಗಿ ಯಾವುದೇ ಮುಲಾಜಿಲ್ಲದೆ ಅಪರಾಧಿಗಳ ತಲೆ ಕತ್ತರಿಸುತ್ತಿದೆ. ಆದರೆ ಈಗ ಅವೆಲ್ಲವೂ ರಹಸ್ಯವಾಗಿ ನಡೆಯುತ್ತಿದೆ. ಈ ಮರಣದಂಡನೆಗಳ ರಕ್ತಸಿಕ್ತ ವರ್ಷದಲ್ಲಿ ಸೌದಿ ಅಧಿಕಾರಿಗಳು ಮಾದಕವಸ್ತು ಅಪರಾಧಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಮತ್ತು ರಹಸ್ಯವಾಗಿ ಗಲ್ಲಿಗೇರಿಸಲು ಪ್ರಾರಂಭಿಸಿದ್ದಾರೆ ಎಂದು ವರದಿ ಹೇಳುತ್ತದೆ.

ಭ್ರಷ್ಟರ ಬೇಟೆ

Recent Posts

ಲೈಂಗಿಕ ಕಿರುಕುಳಕ್ಕೆ ಬೇಸತ್ತು ಸ್ನೇಹಿತನ ಜೊತೆ ಸೇರಿ ವ್ಯಕ್ತಿಯ ಕೊಲೆ: ಮಹಿಳೆ ಸೇರಿ ಇಬ್ಬರು ಅರೆಸ್ಟ್

ಅಥಣಿ: ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಹಿಳೆಯೊಬ್ಬಳು ತನ್ನ ಶಾಲಾ ದಿನಗಳ ಸ್ನೇಹಿತನ ನೆರವಿನಿಂದ ಹತ್ಯೆ ಮಾಡಿರುವ ಘಟನೆ…

4 hours ago

ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ತೊಂದರೆ ಆಗಿದೆ: ಅರ್ಹರಿಗೆ ಮಾತ್ರ ಸೌಲಭ್ಯ ನೀಡಲು ಪರಿಷ್ಕರಣೆ – ಡಿಕೆಶಿ

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಮೇಲೆ ಆರ್ಥಿಕ ಒತ್ತಡ ಉಂಟಾಗಿರುವುದು ನಿಜ ಎಂದು ಉಪಮುಖ್ಯಮಂತ್ರಿ ಡಿ.ಕೆ.…

4 hours ago

ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ; ಬೇಸತ್ತು ಚರಂಡಿ ಸ್ವಚ್ಛಗೊಳಿಸಿದ ಮಹಿಳೆ.

ಕೊಟ್ಟೂರು:- ತಾಲ್ಲೂಕಿನ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹರಾಳು ಗ್ರಾಮದ ದುಮ್ಮಾಡಿ ಕೆಂಚಮ್ಮ ಎಂಬ ಮಹಿಳೆಯೋರ್ವರು ತಮ್ಮ…

17 hours ago

ಬಸವನ ಬಾಗೇವಾಡಿಯಲ್ಲಿ ಅಕ್ರಮ LPG ರೀಫಿಲ್ಲಿಂಗ್ ಆರೋಪ: ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ನಗರದಲ್ಲಿ ಗೃಹಬಳಕೆಯ LPG ಸಿಲಿಂಡರ್‌ಗಳಿಂದ ಆಟೋಗಳಿಗೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿದೆ ಎಂಬ ಆರೋಪ…

24 hours ago

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

2 days ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

3 days ago