ಕುಂದಗೋಳ; ತಾಲೂಕಿನಿಂದ ಹಂಚಿನಾಳ ಮಾರ್ಗವಾಗಿ ಯಲಿವಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟುದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ಮಾರ್ಗವು ಯಲಿವಾಳ, ರಾಮನಕೂಪ್ಪ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ. ಬಹುತೇಕ ಜನರು ಈ ರಸ್ತೆಯಲ್ಲಿ ಸಂಚಾರಸುತ್ತಾರೆ. ಆದರೆ ರಸ್ತೆಗಳ ಮಧ್ಯಭಾಗದಲ್ಲಿ ತೆಗ್ಗು ದಿನ್ನೆಗಳ ಹೆಚ್ಚು ಕಾಣುತ್ತೇವೆ. ರಾತ್ರಿ ವೇಳೆ ಸಂಚಾರ ಮಾಡುವುದು ದುಸ್ತರವಾಗಿದೆ.

ಹಂಚಿನಾಳ ಮಾರ್ಗವಾಗಿ ಯಲಿವಾಳ, ಹಾಗೂ ಕುಬಿಹಾಳ ಗ್ರಾಮಕ್ಕೆ ತೆರಳಬೇಕಾದರೆ ನಾಮಫಲಕ ಹಾಗೂ ಸೂಚನಾ ಫಲಕ ಅಳವಡಿಸಿದೆ ಇರೋದು ವಾಹನ ಸವಾರರಿಗೆ ಬೇಸರ ಮೂಡಿಸಿದೆ. ಇದೊಂದು ಕಡೆ ಆದರೆ ರಸ್ತೆಯಲ್ಲಿ ಆಳ ಎತ್ತರ ಗುಂಡಿ ಬಿದ್ದು ಡಾಂಬರು ಕಿತ್ತು ಹೋಗಿದೆ. ಇದೊಂದು ಕಡೆ. ಹಾಗಾದರೆ ಅಧಿಕಾರಿಗಳ ಗಮನಕ್ಕೆ ಬಂದಿಲವ್ವಾ?

ಇನ್ನೂ ಯಲಿವಾಳ, ಹಾಗೂ ರಾಮನಕೊಪ್ಪ ಗ್ರಾಮಕ್ಕೆ ಇದೆ ಮುಖ್ಯರಸ್ತೆ ಇದ್ದು. ಇಲ್ಲಿ ರೈತರು ತಮ್ಮ ಜಮೀನುಗಳಿಗೆ ಹಾಗೂ ಮಾರುಕಟ್ಟೆಗಳಿಗೆ ಹೋಗುವು ರಸ್ತೆ ಇದಾಗಿದ್ದು. ಇದರ ನಡುವೆ ಗುಂಡಿಗಳು ಸಾಕಷ್ಟು ಆಳ ಎತ್ತಿರ ತೆಗ್ಗು ಗಳು ಬಿದ್ದು ಸಂಚಾರಕ್ಕೆ ದುಸ್ತರವಾಗಿದೆ.

ಇದನ್ನ ಗಮನದಲ್ಲಿಟ್ಟುಕೊಂಡು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಂಡಿ ತುಂಬುವು ಕೆಲಸ ಕಾಮಗಾರಿ ಕೈಗೂಳ್ಳತ್ತಾರೋ ಇಲೋ ಕಾದು ನೋಡಬೇಕು.

ವರದಿ; ಶಾನು ಯಲಿಗಾರ

Related News

error: Content is protected !!