Categories: Latest

ಬೆಂಗಳೂರಿನಲ್ಲಿ NEET ತಯಾರಿ ಮಾಡುತ್ತಿದ್ದ ವಿದ್ಯಾರ್ಥಿನಿಯರ ರೀಲ್ಸ್‌ಗೆ 9 ಕೋಟಿ ವೀಕ್ಷಣೆ; ಕೊನೆಗೆ ಓದಿಗೇ ಬಿತ್ತು ಕುತ್ತು!

ಬೆಂಗಳೂರು: ವೈದ್ಯಕೀಯ ಪ್ರವೇಶ ಪರೀಕ್ಷೆ (NEET)ಗೆ ತಯಾರಿ ನಡೆಸುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣದ ರೀಲ್ಸ್‌ ಗೀಳಿಗೆ ಬಿದ್ದು, ತಮ್ಮ ಶಿಕ್ಷಣ ಹಾಗೂ ಭವಿಷ್ಯಕ್ಕೆ ಸಂಕಷ್ಟ ತಂದಿಟ್ಟಿದ್ದಾರೆ ಎನ್ನಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

NEET ಪರೀಕ್ಷೆಯ ಸಿದ್ಧತೆಗಾಗಿ ಬೆಂಗಳೂರಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಇಬ್ಬರು ವಿದ್ಯಾರ್ಥಿನಿಯರು ಓದಿನ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವತ್ತ ಹೆಚ್ಚು ಆಸಕ್ತಿ ತೋರಿದ್ದರು ಎನ್ನಲಾಗಿದೆ. ಈ ವೇಳೆ ಹಾಸ್ಟೆಲ್ ಕೊಠಡಿಯಲ್ಲಿ ಆಕ್ಷೇಪಾರ್ಹ ಹಾಗೂ ಅತಿರೇಕದ ರೀತಿಯಲ್ಲಿ ವಿಡಿಯೋವೊಂದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ವಿಡಿಯೋ ವೈರಲ್ ಆಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೇವಲ ಎರಡು ದಿನಗಳಲ್ಲೇ ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಹರಿದಾಡಿದ್ದು, ಬರೋಬ್ಬರಿ 90 ಮಿಲಿಯನ್‌ಗೂ ಅಧಿಕ ಅಂದರೆ 9 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು ಎನ್ನಲಾಗಿದೆ.

ಸಹೋದರನ ಕಣ್ಣಿಗೆ ಬಿದ್ದ ವಿಡಿಯೋ

ವಿಡಿಯೋ ವಿದ್ಯಾರ್ಥಿನಿಯೊಬ್ಬಳ ಸಹೋದರನ ಗಮನಕ್ಕೆ ಬಂದಿದ್ದು, ಆತ ತಕ್ಷಣವೇ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾನೆ. ವಿಷಯ ತಿಳಿದು ಆಘಾತಕ್ಕೊಳಗಾದ ಪೋಷಕರು ಬೆಂಗಳೂರಿಗೆ ಧಾವಿಸಿ, ಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ವಿದ್ಯಾರ್ಥಿನಿಯರು, ಕೇವಲ ಲೈಕ್ಸ್ ಮತ್ತು ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಉದ್ದೇಶದಿಂದಲೇ ವಿಡಿಯೋ ಮಾಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ ಮಗಳ ನಡವಳಿಕೆಯಿಂದ ತೀವ್ರವಾಗಿ ಮನನೊಂದ ಪೋಷಕರು, ಆಕೆಯ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸದಿರಲು ನಿರ್ಧರಿಸಿ, ಬೆಂಗಳೂರಿನಿಂದ ಊರಿಗೆ ವಾಪಸ್ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಕ್ಷಣಿಕ ಜನಪ್ರಿಯತೆ, ಲೈಕ್ಸ್ ಮತ್ತು ಫಾಲೋವರ್ಸ್‌ಗಾಗಿ ಯುವಜನರು ಕೈಗೊಳ್ಳುವ ಕೆಲವು ನಿರ್ಧಾರಗಳು ಮುಂದೆ ಅವರ ಶಿಕ್ಷಣ, ವೃತ್ತಿಜೀವನ ಹಾಗೂ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರಬಹುದು ಎಂಬ ಚರ್ಚೆ ಇದೀಗ ಈ ಘಟನೆಯ ಬೆನ್ನಲ್ಲೇ ಮುನ್ನೆಲೆಗೆ ಬಂದಿದೆ.

ಸಾಮಾಜಿಕ ಜಾಲತಾಣ ಬಳಸುವಾಗ ಯುವಜನರು ಅದರ ಪರಿಣಾಮಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕು ಎಂಬ ಸಂದೇಶವೂ ಈ ಘಟನೆ ಮೂಲಕ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಭ್ರಷ್ಟರ ಬೇಟೆ

Recent Posts

17ರ ಬಾಲಕಿಯ ಧೈರ್ಯದಿಂದ ಬಯಲಾಯ್ತು 3 ಕೊಲೆಗಳ ರಹಸ್ಯ; ಮನೆಯ ಅಂಗಳ ಅಗೆದಾಗ ಸಿಕ್ಕಿದ್ದು ಅಸ್ಥಿಪಂಜರ!

ತಮಿಳುನಾಡು: ಪ್ರೀತಿಗೆ ಪೋಷಕರ ವಿರೋಧ, ಮನೆಯಿಂದ ಓಡಿಹೋದ ಅಪ್ರಾಪ್ತ ಬಾಲಕಿ, ತಂದೆಯ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳು… ಇವೆಲ್ಲದರ ನಡುವೆ…

38 seconds ago

ರಾಜ್ಯದ 101 ತಾಲೂಕುಗಳು ಬರಪೀಡಿತ ಘೋಷಣೆ; 89 ತಾಲೂಕುಗಳಲ್ಲಿ ತೀವ್ರ ಬರ, 12 ತಾಲೂಕುಗಳಲ್ಲಿ ಸಾಧಾರಣ ಬರ

ಕಾರವಾರ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ.…

2 days ago

ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ಬರ್ಬರ ಹತ್ಯೆ: ಬೈಕ್ ಸವಾರನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು!

ವಿದ್ಯಾನಗರದ ಬನಶಂಕರಿ ಬಡಾವಣೆಯ ಸಿದ್ದೇಶ್ವರ ಪಾರ್ಕ್ ಬಳಿ ಘಟನೆ; ಮೂವರು ಆರೋಪಿಗಳಿಗಾಗಿ ಪೊಲೀಸರ ಶೋಧ ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ…

2 days ago

ನಾಗಾವಿ ಯಲ್ಲಮ್ಮ ದೇವಾಲಯದ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಪತ್ತೆ: ₹17 ಸಾವಿರಕ್ಕೂ ಅಧಿಕ ಹಣ ಜಮೆ!

ಕೊರಿಯಾ, ಕೆನಡಾ, ಯುಎಇ, ಅಮೆರಿಕ ಸೇರಿದಂತೆ ವಿವಿಧ ದೇಶಗಳ ನೋಟು–ನಾಣ್ಯಗಳು ಪತ್ತೆ; ವಿದೇಶಗಳಲ್ಲೂ ನಾಗಾವಿ ಯಲ್ಲಮ್ಮ ದೇವಿಯ ಭಕ್ತರಿರುವುದಕ್ಕೆ ಸಾಕ್ಷಿ…

2 days ago

9 ವರ್ಷಗಳಿಂದ ಜಾಗ–ಮನೆಗಾಗಿ ಅಲೆದಾಟ: ಮಂಗಳಮುಖಿ ರಮಜಾನ್ ಮುಲ್ಲಾಗೆ ಇನ್ನಾದರೂ ಸಿಗುತ್ತಾ ನ್ಯಾಯ?

ಗ್ರಾಮ ಪಂಚಾಯಿತಿ ಠರಾವು ಪಾಸಾದರೂ ಆದೇಶ ಪತ್ರ ನೀಡದ ಅಧಿಕಾರಿಗಳು; ತಾಲೂಕು–ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರ್ಕಾರದತ್ತ ರಮಜಾನ್ ಮುಲ್ಲಾ…

2 days ago

110 ಮಿಲಿಯನ್ ವೀಕ್ಷಣೆಗಾಗಿ ಖಾಸಗಿ ಕ್ಷಣಗಳನ್ನೇ ಹಂಚಿಕೊಂಡ ನವವಧು; ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶ!

ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್‌, ವೀವ್ಸ್‌ ಹಾಗೂ ಫಾಲೋವರ್ಸ್‌ ಹೆಚ್ಚಿಸಿಕೊಳ್ಳುವ ಹುಚ್ಚು ಕೆಲವರನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತಿದೆ ಎಂಬುದಕ್ಕೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ…

3 days ago