Categories: Latest

ನಾಗಾವಿ ಯಲ್ಲಮ್ಮ ದೇವಾಲಯದ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಪತ್ತೆ: ₹17 ಸಾವಿರಕ್ಕೂ ಅಧಿಕ ಹಣ ಜಮೆ!

ಕೊರಿಯಾ, ಕೆನಡಾ, ಯುಎಇ, ಅಮೆರಿಕ ಸೇರಿದಂತೆ ವಿವಿಧ ದೇಶಗಳ ನೋಟು–ನಾಣ್ಯಗಳು ಪತ್ತೆ; ವಿದೇಶಗಳಲ್ಲೂ ನಾಗಾವಿ ಯಲ್ಲಮ್ಮ ದೇವಿಯ ಭಕ್ತರಿರುವುದಕ್ಕೆ ಸಾಕ್ಷಿ

ಚಿತ್ತಾಪುರ: ಇಲ್ಲಿನ ಐತಿಹಾಸಿಕ ಹಾಗೂ ಪ್ರಸಿದ್ಧ ನಾಗಾವಿ ಯಲ್ಲಮ್ಮ ದೇವಾಲಯದ ಹುಂಡಿ ಎಣಿಕೆ ವೇಳೆ ವಿವಿಧ ದೇಶಗಳ ವಿದೇಶಿ ಕರೆನ್ಸಿ ಹಾಗೂ ನಾಣ್ಯಗಳು ಪತ್ತೆಯಾಗಿದ್ದು, ಸ್ಥಳೀಯರು ಹಾಗೂ ಭಕ್ತರಲ್ಲಿ ಕುತೂಹಲ ಮೂಡಿಸಿದೆ.

ದೇವಾಲಯ ಸಮಿತಿ ಅಧ್ಯಕ್ಷರು ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಕೊರಿಯಾ, ಕೆನಡಾ, ಯುಎಇ ಹಾಗೂ ಅಮೆರಿಕ ಸೇರಿದಂತೆ ಹಲವು ದೇಶಗಳ ನೋಟುಗಳು ಮತ್ತು ನಾಣ್ಯಗಳು ಹುಂಡಿಯಲ್ಲಿ ಪತ್ತೆಯಾಗಿವೆ.

ಎಣಿಕೆ ವೇಳೆ ಕೊರಿಯಾದ 10 ಸಾವಿರ ಕರೆನ್ಸಿ (ಭಾರತೀಯ ಮೌಲ್ಯ ಸುಮಾರು ₹690), ಕೆನಡಾದ 5 ಸಿಂಕ್ ಡಾಲರ್ (ಸುಮಾರು ₹477), ಯುಎಇಯ 5 ಹಾಗೂ 10 ದಿರ್ಹಮ್ (ಕ್ರಮವಾಗಿ ಸುಮಾರು ₹129.81 ಮತ್ತು ₹259.62) ಪತ್ತೆಯಾಗಿವೆ.

ಇದರ ಜೊತೆಗೆ ಅಮೆರಿಕದ ಡಾಲರ್‌ಗಳ ನೋಟುಗಳು ಹಾಗೂ ನಾಣ್ಯಗಳು ಕೂಡ ಹುಂಡಿಯಲ್ಲಿ ದೊರೆತಿವೆ. ಅಮೆರಿಕದ ನೋಟುಗಳ ಭಾರತೀಯ ಮೌಲ್ಯ ಸುಮಾರು ₹14,584.40 ಆಗಿದ್ದು, ನಾಣ್ಯಗಳ ಮೌಲ್ಯ ಸುಮಾರು ₹1,000 ಎಂದು ತಿಳಿಸಲಾಗಿದೆ.

ಎಲ್ಲಾ ವಿದೇಶಿ ಕರೆನ್ಸಿಗಳನ್ನು ಭಾರತೀಯ ರೂಪಾಯಿ ಮೌಲ್ಯಕ್ಕೆ ಪರಿಗಣಿಸಿದಾಗ ಒಟ್ಟಾರೆಯಾಗಿ ಸುಮಾರು ₹17,140.91 ಮೌಲ್ಯದ ವಿದೇಶಿ ಹಣ ಹುಂಡಿಯಲ್ಲಿ ಜಮೆಯಾಗಿರುವುದು ಕಂಡುಬಂದಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾಹಿತಿ ನೀಡಿದ್ದಾರೆ.

ಕಳೆದ ಬಾರಿಯೂ ಪತ್ತೆಯಾಗಿತ್ತು ವಿದೇಶಿ ಹಣ

ನಾಗಾವಿ ಯಲ್ಲಮ್ಮ ದೇವಾಲಯದ ಹುಂಡಿ ಎಣಿಕೆ ವೇಳೆ ವಿದೇಶಿ ಕರೆನ್ಸಿ ಪತ್ತೆಯಾಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಬಾರಿಯ ಹುಂಡಿ ಎಣಿಕೆಯ ಸಂದರ್ಭದಲ್ಲೂ ವಿದೇಶಿ ಹಣ ದೊರೆತಿತ್ತು.

ಈ ಬಾರಿಯೂ ನಾಲ್ಕೈದು ದೇಶಗಳ ಕರೆನ್ಸಿ ಹಾಗೂ ನಾಣ್ಯಗಳು ಪತ್ತೆಯಾಗಿರುವುದು ಭಕ್ತರಲ್ಲಿ ಚರ್ಚೆಗೆ ಕಾರಣವಾಗಿದೆ. ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಲ್ಲಿಯೂ ನಾಗಾವಿ ಯಲ್ಲಮ್ಮ ದೇವಿಯ ಭಕ್ತರು ಇದ್ದಾರೆ ಎಂಬುದಕ್ಕೆ ಹುಂಡಿಯಲ್ಲಿ ಪತ್ತೆಯಾದ ವಿದೇಶಿ ಹಣ ಮತ್ತೊಮ್ಮೆ ಸಾಕ್ಷಿಯಾಗಿದೆ.

ವಿದೇಶಿ ಕರೆನ್ಸಿಗಳ ಪತ್ತೆಯ ವಿಚಾರ ಇದೀಗ ನಾಗಾವಿ ನಾಡಿನ ಜನತೆ ಹಾಗೂ ಭಕ್ತರ ನಡುವೆ ಕುತೂಹಲದ ಚರ್ಚೆಗೆ ಗ್ರಾಸವಾಗಿದೆ.

ಭ್ರಷ್ಟರ ಬೇಟೆ

Recent Posts

ರಾಜ್ಯದ 101 ತಾಲೂಕುಗಳು ಬರಪೀಡಿತ ಘೋಷಣೆ; 89 ತಾಲೂಕುಗಳಲ್ಲಿ ತೀವ್ರ ಬರ, 12 ತಾಲೂಕುಗಳಲ್ಲಿ ಸಾಧಾರಣ ಬರ

ಕಾರವಾರ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ.…

2 hours ago

ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ಬರ್ಬರ ಹತ್ಯೆ: ಬೈಕ್ ಸವಾರನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು!

ವಿದ್ಯಾನಗರದ ಬನಶಂಕರಿ ಬಡಾವಣೆಯ ಸಿದ್ದೇಶ್ವರ ಪಾರ್ಕ್ ಬಳಿ ಘಟನೆ; ಮೂವರು ಆರೋಪಿಗಳಿಗಾಗಿ ಪೊಲೀಸರ ಶೋಧ ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ…

2 hours ago

9 ವರ್ಷಗಳಿಂದ ಜಾಗ–ಮನೆಗಾಗಿ ಅಲೆದಾಟ: ಮಂಗಳಮುಖಿ ರಮಜಾನ್ ಮುಲ್ಲಾಗೆ ಇನ್ನಾದರೂ ಸಿಗುತ್ತಾ ನ್ಯಾಯ?

ಗ್ರಾಮ ಪಂಚಾಯಿತಿ ಠರಾವು ಪಾಸಾದರೂ ಆದೇಶ ಪತ್ರ ನೀಡದ ಅಧಿಕಾರಿಗಳು; ತಾಲೂಕು–ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರ್ಕಾರದತ್ತ ರಮಜಾನ್ ಮುಲ್ಲಾ…

2 hours ago

110 ಮಿಲಿಯನ್ ವೀಕ್ಷಣೆಗಾಗಿ ಖಾಸಗಿ ಕ್ಷಣಗಳನ್ನೇ ಹಂಚಿಕೊಂಡ ನವವಧು; ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶ!

ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್‌, ವೀವ್ಸ್‌ ಹಾಗೂ ಫಾಲೋವರ್ಸ್‌ ಹೆಚ್ಚಿಸಿಕೊಳ್ಳುವ ಹುಚ್ಚು ಕೆಲವರನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತಿದೆ ಎಂಬುದಕ್ಕೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ…

1 day ago

ಪ್ರೇಮದಿಂದ ಪ್ರಶ್ನೆಪತ್ರಿಕೆ ಲೀಕ್‌.. ಬ್ರೇಕಪ್ ಬಳಿಕ ಸೇಡಿಗೆ ಬಿದ್ದ ಪ್ರಿಯಕರ; ಬಯಲಾಯ್ತು ಭಾರೀ ಹಗರಣ!

ಮಹಾರಾಷ್ಟ್ರದಲ್ಲಿ ಪ್ರೇಮ, ವಂಚನೆ ಹಾಗೂ ಸೇಡಿನ ಸುತ್ತ ಸುತ್ತುವ ಕುತೂಹಲಕಾರಿ ಪ್ರಕರಣವೊಂದು ಭಾರೀ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಜಾಲವನ್ನು ಬಯಲಿಗೆಳೆದಿದೆ.…

1 day ago

17 ವರ್ಷದ ಬಾಲಕನೊಂದಿಗೆ ನಿಶಾ ಅಕ್ರಮ ಸಂಬಂಧ; ಪ್ರೀತಿಸಿ ಮದುವೆಯಾದ ಪತಿಯನ್ನೇ ಮುಗಿಸಿದ ಪತ್ನಿ; ಅಪಘಾತದ ಕಥೆ ಕಟ್ಟಿದವಳ ಬಣ್ಣ ಬಯಲು!

ಉತ್ತರಾಖಂಡದಲ್ಲಿ ಪ್ರೀತಿಸಿ ಮದುವೆಯಾದ ಪತಿಯನ್ನೇ ಪತ್ನಿಯೊಬ್ಬಳು ಅಕ್ರಮ ಸಂಬಂಧದ ಕಾರಣಕ್ಕೆ ಹತ್ಯೆ ಮಾಡಿಸಿ, ಬಳಿಕ ಅದನ್ನು ರಸ್ತೆ ಅಪಘಾತ ಎಂದು…

1 day ago