ಬೆಂಗಳೂರು, ಜುಲೈ 27: ನಟ ದರ್ಶನ್ ಸಂಬಂಧಿತ ವಿವಾದ ಮತ್ತೆ ಸದ್ದು ಮಾಡುತ್ತಿದೆ. ಇದೀಗ, ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಅವರು ದರ್ಶನ್ ಅಭಿಮಾನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಮೂಲಕ ಪ್ರತಿಭಟನೆಗೆ ಧ್ವನಿ ಕೂಡಿ, ಡಿ ಫ್ಯಾನ್ಸ್ (Darshan Fans) ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಹಾಗೂ ಪೋಸ್ಟ್‌ಗಳ ಮೂಲಕ ಕೆಲ ಅಭಿಮಾನಿಗಳ ಅಶ್ಲೀಲ ಸಂದೇಶಗಳು ಹಾಗೂ ಕೀಳ್ಮಟ್ಟದ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು, “ರೆಣುಕಾಸ್ವಾಮಿ ಮೆಸೇಜ್ ಕಳಿಸಿದ ವ್ಯಕ್ತಿಗೂ, ಈ ಅಭಿಮಾನಿಗಳಿಗೂ ಯಾವುದೇ ಭಿನ್ನತೆ ಇಲ್ಲ” ಎಂದು ಗಂಭೀರ ಆರೋಪ ಮಾಡಿದ್ದಾರೆ.
“ಡಿ ಫ್ಯಾನ್ಸ್ ಗಳು ಮಹಿಳಾ ವಿರೋಧಿ ಮನೋಭಾವನೆ ಹೊಂದಿದ್ದಾರೆ. ಇಂಥವರು ಮಹಿಳೆಯರ ಮೇಲಿನ ಕಿರುಕುಳ, ಕೊಲೆಗಳನ್ನು ನೈಸರ್ಗಿಕವೆಂದೇ ನೋಡುತ್ತಾರೆ. ಇವರು ಎಂಥದೂ ವಿಚಾರವಿಲ್ಲದೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವಾಚ್ಯ ಪದಗಳಿಂದ ಕಿರುಕುಳ ನೀಡುತ್ತಿರುವುದು ಆತಂಕಕಾರಿಯಾಗಿದೆ” ಎಂದು ಬರೆದಿದ್ದಾರೆ.
ಲಿಂಗಸುಗೂರು: ಅರಣ್ಯ ಸಂಪತ್ತಾದ ಸಾಗುವಾನಿ ಮರವನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು, ಮೂರು ಬೊಲೆರೋ ಗೂಡ್ಸ್ ವಾಹನಗಳ…
ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಮುಂಡಗೋಡ: 12 ವರ್ಷದ ಬಾಲಕಿಯ ಮೇಲೆ ನಡೆದಿರುವ ಅಮಾನವೀಯ…
ರಾಜಸ್ಥಾನ: ಜಿಮ್‌ನಲ್ಲಿ ಕಟ್ಟುಮಸ್ತಾದ ದೇಹದಂಡನೆ ಪ್ರದರ್ಶಿಸುವ ವಿಡಿಯೋ ಹಾಗೂ ಫೋಟೋಗಳನ್ನು ತೋರಿಸಿ 82 ವರ್ಷದ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ…
ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು ಮನೆಯ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಎಎಸ್‌ಐ ಅವರನ್ನು ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡ ಹಿನ್ನೆಲೆಯಲ್ಲಿ…
ಯಲ್ಲಾಪುರ: ತಾಲೂಕಿನ ಹುಟ್ಕಮನ ಗ್ರಾಮದಲ್ಲಿ ಚಾಕು ತೋರಿಸಿ ಮನೆಯವರನ್ನು ಬೆದರಿಸಿ ಒಂಟಿಮನೆ ದರೋಡೆ ನಡೆಸಿದ್ದ ಪ್ರಕರಣವನ್ನು ಯಲ್ಲಾಪುರ ಪೊಲೀಸರು ಭೇದಿಸುವಲ್ಲಿ…
ಧಾರವಾಡ: ತಾಲೂಕಿನ ಮಾದನಬಾವಿ ಗ್ರಾಮದ ಗೋಶಾಲೆಯಲ್ಲಿ ಗೋವುಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಗೋಶಾಲೆಯ ಅವ್ಯವಸ್ಥೆ ಸರಿಪಡಿಸಿ…