Categories: CrimeLatest

82ರ ಉದ್ಯಮಿಗೆ ಜಿಮ್ ಬಾಡಿ ತೋರಿಸಿ ಗಾಳ ಹಾಕಿದ ಸುಂದರಿ; ₹2 ಲಕ್ಷ ಸುಲಿಗೆ, 10 ಲಕ್ಷಕ್ಕೆ ಬೇಡಿಕೆ!

ರಾಜಸ್ಥಾನ: ಜಿಮ್‌ನಲ್ಲಿ ಕಟ್ಟುಮಸ್ತಾದ ದೇಹದಂಡನೆ ಪ್ರದರ್ಶಿಸುವ ವಿಡಿಯೋ ಹಾಗೂ ಫೋಟೋಗಳನ್ನು ತೋರಿಸಿ 82 ವರ್ಷದ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಹಣ ಸುಲಿಗೆ ಮಾಡುತ್ತಿದ್ದ ಮಹಿಳೆ ಹಾಗೂ ಆಕೆಯ ಸಹಚರರ ಗ್ಯಾಂಗ್ ಅನ್ನು ರಾಜಸ್ಥಾನದ ಸಿಕರ್ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿಯ ಖಾಸಗಿ ಕ್ಷಣಗಳ ವಿಡಿಯೋ ಸೆರೆಹಿಡಿದು ಬ್ಲ್ಯಾಕ್‌ಮೇಲ್ ಮಾಡಿದ್ದ ಆರೋಪದ ಮೇಲೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಜಿಮ್ ಬಾಡಿ ತೋರಿಸಿ ವೃದ್ಧನಿಗೆ ಗಾಳ ಹಾಕಿದ ಮಹಿಳೆ!

ರಾಜಸ್ಥಾನದ ಸಿಕರ್ ಮೂಲದ 82 ವರ್ಷದ ಉದ್ಯಮಿಗೆ ಮಹಿಳೆಯೊಬ್ಬಳು ಪರಿಚಯವಾಗಿದ್ದಳು. ತನ್ನ ಜಿಮ್ ವರ್ಕೌಟ್ ಹಾಗೂ ಕಟ್ಟುಮಸ್ತಾದ ದೇಹದ ಫೋಟೋ, ವಿಡಿಯೋಗಳನ್ನು ತೋರಿಸುವ ಮೂಲಕ ಉದ್ಯಮಿಯನ್ನು ಆಕರ್ಷಿಸಿದ್ದಳು. ಬಳಿಕ ಆತನೊಂದಿಗೆ ಖಾಸಗಿಯಾಗಿ ಭೇಟಿಯಾಗಲು ಆರಂಭಿಸಿದ್ದಳು. ಈ ಭೇಟಿಗಳ ಸಂದರ್ಭದಲ್ಲಿ ಉದ್ಯಮಿಯ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಳು ಎನ್ನಲಾಗಿದೆ.

₹2 ಲಕ್ಷ ಕೊಟ್ಟರೂ ಮುಗಿಯದ ಸುಲಿಗೆ ಕಾಟ!

ಕೆಲವು ದಿನಗಳ ಬಳಿಕ ಇದೇ ಖಾಸಗಿ ವಿಡಿಯೋಗಳನ್ನು ಮುಂದಿಟ್ಟುಕೊಂಡು ಉದ್ಯಮಿಗೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಳು. ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮಾನ-ಮರ್ಯಾದೆಗೆ ಅಂಜಿದ ಉದ್ಯಮಿ ಆರಂಭದಲ್ಲಿ ₹2 ಲಕ್ಷ ಹಣ ನೀಡಿದ್ದರು. ಆದರೆ, ಹಣ ಪಡೆದ ಬಳಿಕವೂ ಮಹಿಳೆಯ ದುರಾಸೆ ಕಡಿಮೆಯಾಗಿರಲಿಲ್ಲ. ಕೇವಲ ಒಂದು ವಾರದ ಅಂತರದಲ್ಲಿ ಮತ್ತೆ ಉದ್ಯಮಿಗೆ ಕರೆ ಮಾಡಿ ಬರೋಬ್ಬರಿ ₹10 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಳು.

ಪೊಲೀಸರಿಗೆ ದೂರು; ಖೆಡ್ಡಾಕ್ಕೆ ಬಿದ್ದ ‘ಮೇಮ್‌ಸಾಹೇಬ್’ ಗ್ಯಾಂಗ್!

ಮಹಿಳೆಯ ನಿರಂತರ ಬ್ಲ್ಯಾಕ್‌ಮೇಲ್ ಹಾಗೂ ಹಣದ ಬೇಡಿಕೆಯಿಂದ ಬೇಸತ್ತ ಉದ್ಯಮಿ ಕೊನೆಗೂ ಧೈರ್ಯ ಮಾಡಿ ಪೊಲೀಸರ ಮೊರೆ ಹೋಗಿದ್ದಾರೆ. ತಮಗಾದ ಅನ್ಯಾಯದ ಕುರಿತು ಸಂಪೂರ್ಣ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಸಿಕರ್ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಹನಿಟ್ರ್ಯಾಪ್ ಜಾಲದ ಮಹಿಳೆ ಹಾಗೂ ಆಕೆಯ ಸಹಚರರನ್ನು ಬಂಧಿಸಿದ್ದಾರೆ. ಅಲ್ಲದೆ, ಉದ್ಯಮಿಯಿಂದ ಈಗಾಗಲೇ ಸುಲಿಗೆ ಮಾಡಿದ್ದ ₹2 ಲಕ್ಷ ನಗದನ್ನೂ ವಶಪಡಿಸಿಕೊಂಡಿದ್ದಾರೆ.

82 ವರ್ಷದ ಉದ್ಯಮಿಯನ್ನು ಗುರಿಯಾಗಿಸಿಕೊಂಡು ಜಿಮ್ ಬಾಡಿ ಪ್ರದರ್ಶನದ ಮೂಲಕ ಪರಿಚಯ ಬೆಳೆಸಿ, ಖಾಸಗಿ ವಿಡಿಯೋಗಳನ್ನೇ ಸುಲಿಗೆಗೆ ಅಸ್ತ್ರವನ್ನಾಗಿಸಿಕೊಂಡಿದ್ದ ಈ ಪ್ರಕರಣ ಇದೀಗ ರಾಜಸ್ಥಾನದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಪ್ರೇಯಸಿಯ ಮನೆಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಎಸ್‌ಐ; ಗ್ರಾಮಸ್ಥರ ಮೇಲೆ ಫೈರಿಂಗ್!

ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು ಮನೆಯ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಎಎಸ್‌ಐ ಅವರನ್ನು ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡ ಹಿನ್ನೆಲೆಯಲ್ಲಿ…

7 hours ago

ಚಾಕು ತೋರಿಸಿ ಒಂಟಿಮನೆ ದರೋಡೆ: ನಾಲ್ವರು ಆರೋಪಿಗಳ ಬಂಧನ; ಯಲ್ಲಾಪುರ ಪೊಲೀಸರ ಕಾರ್ಯಾಚರಣೆ ಯಶಸ್ವಿ!

ಯಲ್ಲಾಪುರ: ತಾಲೂಕಿನ ಹುಟ್ಕಮನ ಗ್ರಾಮದಲ್ಲಿ ಚಾಕು ತೋರಿಸಿ ಮನೆಯವರನ್ನು ಬೆದರಿಸಿ ಒಂಟಿಮನೆ ದರೋಡೆ ನಡೆಸಿದ್ದ ಪ್ರಕರಣವನ್ನು ಯಲ್ಲಾಪುರ ಪೊಲೀಸರು ಭೇದಿಸುವಲ್ಲಿ…

7 hours ago

ಮಾದನಬಾವಿ ಗೋಶಾಲೆಯ ದುಸ್ಥಿತಿಗೆ ಆಕ್ರೋಶ: ಗೋವುಗಳಿಗೆ ಮೇವು, ನೀರು ಹಾಗೂ ಚಿಕಿತ್ಸೆ ಒದಗಿಸಲು ಆಗ್ರಹ

ಧಾರವಾಡ: ತಾಲೂಕಿನ ಮಾದನಬಾವಿ ಗ್ರಾಮದ ಗೋಶಾಲೆಯಲ್ಲಿ ಗೋವುಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಗೋಶಾಲೆಯ ಅವ್ಯವಸ್ಥೆ ಸರಿಪಡಿಸಿ…

2 days ago

ಮುಂಡಗೋಡದ ರಾಜಲಕ್ಷ್ಮಿ ಜ್ಯುವೆಲ್ಲರ್ಸ್‌ನಲ್ಲಿ ಬೆಳ್ಳಿ ಆಭರಣ ಕಳವು ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಮಹಿಳೆಯರ ಬಂಧನ

ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದ ಎದುರಿನ ರಾಜಲಕ್ಷ್ಮಿ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ನಡೆದಿದ್ದ ಬೆಳ್ಳಿ ಆಭರಣ ಕಳವು ಪ್ರಕರಣವನ್ನು ಮುಂಡಗೋಡ ಪೊಲೀಸರು…

2 days ago

ಫೋನ್‌ಪೇ ಹಣ ಪಾವತಿ ನಕಲಿ ಸಂದೇಶ ತೋರಿಸಿ ಮೊಬೈಲ್ ವಂಚನೆ: ಬೆಂಗಳೂರಿನಲ್ಲಿ ಆರೋಪಿಯ ಬಂಧನ

ಕುಮಟಾ: ಮೊಬೈಲ್ ಖರೀದಿಸಿ ಫೋನ್‌ಪೇ ಮೂಲಕ ಹಣ ಪಾವತಿಸಿರುವುದಾಗಿ ನಕಲಿ ಸಂದೇಶ ತೋರಿಸಿ ಅಂಗಡಿ ಮಾಲೀಕರಿಗೆ ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು…

2 days ago

ಮಾರ್ಚ್ ಅಂತ್ಯದೊಳಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿ: ಸಿಇಒ ಡಾ. ದಿಲೀಷ್ ಶಶಿ ಕಟ್ಟುನಿಟ್ಟಿನ ಸೂಚನೆ

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರು ಸರಬರಾಜು (MVS) ಯೋಜನೆಯ ಕಾಮಗಾರಿಯನ್ನು ಉತ್ತರ…

2 days ago