ಕುಂದಗೋಳ; ತಾಲೂಕಿನ ರೊಟ್ಟಿಗವಾಡದಿಂದ ಕೂಡ್ಲಿವಾಡ ಗ್ರಾಮಕ್ಕೆ ಸಮರ್ಪಕ ಕಲ್ಪಿಸುವ ಹಳ್ಳದ ಮಧ್ಯೆ ಡಾಂಬರು ಕಿತ್ತು ಹಳ್ಳಕ್ಕೆ ತಾಗಿದೆ. ಮತ್ತು ಈ ಭಾಗದ ರೈತನ ಹೊಲ ಸಂಪೂರ್ಣ ನೀರಿಗೆ ಕೊಚ್ಚಿ ಹೋಗಿದೆ.

ತಾಲೂಕಿನ ರೊಟ್ಟಿಗವಾಡದಿಂದ ಕೂಡ್ಲಿವಾಡ ಗ್ರಾಮಕ್ಕೆ ಸಂಪರ್ಕಿಸಿವು ರಸ್ತೆ ಮದ್ಯೆ ಹಳ್ಳಕ್ಕೆ ಹೊಂದಿಕೂಂಡಿರುವ ಈ ರಸ್ತೆ ಮಳೆಗೆ ಸಂಪೂರ್ಣ ಕಿತ್ತು, ಈ ಭಾಗದ ರೈತನಿಗೆ ತ್ರೀವ ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನೂ ಸಣ್ಣ ನೀರಾವರಿ ಇಲಾಖೆದವರು ನಿರ್ಮಸಿದ ರಸ್ತೆ ಸುರಕ್ಷಿತ ಅಡ್ಡಗೊಡೆ ಸಾಕಾಗುವಷ್ಟು ಆಗದೇ ಇರುವದಕ್ಕೆ ಈ ರೈತನ ಹೊಲ ಪ್ರವಾಹ ಸಿಲುಕಿ ಬಹಳಷ್ಟು ಹಾನಿ ಉಂಟುಮಾಡಿದೆ.

ಇದರ ಜೊತೆಗೆ ಹಳ್ಳ ಅಗಲೀಕರಣ ಆಗದೇ ಸಾಕಷ್ಟು ಹಳ್ಳ ತುಂಬಿ ಪ್ರವಾಹಕ್ಕೆ ತುತ್ತಾಗಿ, ರಸ್ತೆ, ರೈತನ ಹೊಲಗಳು ನಾಶವಾಗಿ ತ್ರೀವ ತೊಂದರಕ್ಕೆ ಹೀಡಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಕಾಮಗಾರಿ ನೀಡದೆ ರಾಜಕೀಯದಲ್ಲಿ ನಿರತರಾಗಿದ್ದಾರೆ ಅಂದರೆ ಜನಗಳ ಸಮಸ್ಯೆ ಆಲಿಸುವುರು ಯಾರು? ಅನ್ನುವುದು ಪ್ರಶ್ನೆಯಾಗಿ ಉಳಿದಿದೆ.

ಈ ಕೂಡಲೇ ಅಧಿಕಾರಿಗಳು ಜನಪ್ರತಿನಿಧಿಗಳು ವರದಿ ಗಮನಿಸಿ ಹಳ್ಳದ ಪಕ್ಕ ತಡೆಗೋಡೆ ಮತ್ತು ಹಳ್ಳ ಅಗಲೀಕರಣ ವಿಸ್ತರಣೆ ಆಗಬೇಕು ಅನ್ನುವುದೆ ಈ ಭಾಗದ ಜನರ ಬೇಡಿಕೆಯಾಗಿದೆ.

ವರದಿ;ಶಾನು ಯಲಿಗಾರ

Related News

error: Content is protected !!