ಕುಂದಗೋಳ; ಕಳೆದ ಮೂರು ನಾಲ್ಕು ತಿಂಗಳದಿಂದ ವಿಪರೀತ ಮಳೆಗೆ ಸಾಕಷ್ಟು ರೈತರ ಬೆಳೆಗಳು ಜಲಾವೃತಗೂಂಡು ಈ ಭಾಗದ ರೈತರಿಗೆ ಬೆಳೆನಾಶವಾಗಿ ಬಹಳಷ್ಟು ನಷ್ಟು ಉಂಟಾಗಿ ರೈತ ತೆಲೆ ಮೇಲೆ ಕೈ ಇಟ್ಟುಕೊಂಡು ಕೊಡುವ ಪರಿಸ್ಥಿತಿ ಎದುರಾಗಿತ್ತು.

ಆದರೆ ಹಂದಿಗಳ ಹಾವಳಿ ಮೀತಿ ಮೀರಿದ್ದು ಯರಗುಪ್ಪಿ ಗ್ರಾಮದಲ್ಲಿ ಜನ ಹೈರಾಣಾಗಿದ್ದಾರೆ. ಗ್ರಾಮದ ರೈತರ ಬಣವೆಗಳಿಗೆ ನುಗ್ಗಿ ದ್ವಂಸ ಮಾಡಿ ಒಟ್ಟಿರುವ ಬಣವೆಗಳು ಚಲ್ಲಾಪಲ್ಲಿಗೊಂಡು ಹಾನಿ ಮಾಡಿರಿವೂ ಉದಾಹರಣೆಗೆ ಳು ಸಹ ಇವೆ. ಇದೊಂದು ಕಡೆ ಆದರೆ,ಗ್ರಾಮದ ಹೊರವಲಯಗಳಲ್ಲಿ ರೈತರ ಗದ್ದೆಗೆ ನುಗ್ಗಿ ಜಮೀನಿನಲ್ಲಿ ಬೆಳೆದ ಕಡ್ಲೆಕಾಯಿ ತಿಂದು ನಾಶಪಡಸಿ , ರೈತರಿಗೆ ತ್ರೀವು ತೊಂದರೆ ಕೊಟ್ಟಿದ್ದಲ್ಲದೇ. ಸಾರ್ವಜನಿಕರಿಗೆ ಆಘಾತ ತಂದೊಡ್ಡಿದೆ.

ಈ ಕುರಿತು ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಊರಿನ ಯುವಕರು ಮೌಖಿಕವಾಗಿ ಮನವಿ ಮಾಡಿಕೂಂಡಿದರು. ಇದನ್ನ ಆದರಿಸಿ ಅಭಿವೃದ್ಧಿ ಅಧಿಕಾರಿಗಳು ಕೊಡ ಕುಂದಗೋಳ ಪೋಲಿಸ್ ಠಾಣೆಗೆ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಹಂದಿಗಳ ಮಾಲೀಕರು ಮೇಲೆ ಕ್ರಮ ಆಗದೇ ಇರುವದಕ್ಕೆ ಕಾರವೇನು? ಎಂದು ಊರಿನ ಗ್ರಾಮಸ್ಥರು ಪ್ರಶ್ನೆ ಮಾಡ್ತಾ ಇದಾರೆ.
ಒಟ್ಟಿನಲ್ಲಿ ಹಂದಿಗಳ ಹಾವಳಿ ಬ್ರೇಕ್ ಯಾವಾಗ? ಅನ್ನುವುದು ಪ್ರಶ್ನೆಯಾಗಿ ಉಳಿದಿದೆ.

ವರದಿ; ಶಾನು ಯಲಿಗಾರ

Related News

error: Content is protected !!