Latest

ಪುಡಿ ರೌಡಿಯ ಹಂಗಾಮಾ: ಸಿಗರೇಟ್‌ಗಾಗಿ ಲಾಂಗ್‌, ತೋರಿಸಿದ ವಿಡಿಯೋ ವೈರಲ್

ಬೆಂಗಳೂರು, ಫೆಬ್ರವರಿ 8: ನಗರದ ಕೋರಮಂಗಲದಲ್ಲಿ ಪುಡಿ ರೌಡಿಯೊಬ್ಬನ ಅಟ್ಟಹಾಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ಪ್ರಕರಣವು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಟೀ ಶಾಪ್‌ನಲ್ಲಿ ಹಂಗಾಮಾ
ಘಟನೆ ಕಳೆದ ರಾತ್ರಿ ಕೋರಮಂಗಲದ ಒಂದು ಚಹಾ ಅಂಗಡಿಯಲ್ಲಿ ನಡೆದಿದೆ. 25 ವರ್ಷದ ಗೌತಮ್‌ ಎಂಬಾತ, ಕೈಯಲ್ಲಿ ಲಾಂಗ್‌ ಹಿಡಿದು ಅಂಗಡಿಗೆ ನುಗ್ಗಿ, ಮಾಲೀಕನಿಗೆ ಬೆದರಿಕೆ ಹಾಕಿ ಬಿಟ್ಟಿ ಸಿಗರೇಟ್‌ ಪಡೆದುಕೊಂಡಿದ್ದಾನೆ. ಈ ದ್ರುಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶೀಘ್ರವೇ ವೈರಲ್‌ ಆಗಿ ಪೊಲೀಸರ ಗಮನಕ್ಕೆ ಬಂದಿದೆ.

ಪೊಲೀಸರ ತ್ವರಿತ ಕಾರ್ಯಾಚರಣೆ
ಪೊಲೀಸರು ಸಿಸಿಟಿವಿ ದೃಶ್ಯ ಮತ್ತು ಸ್ಥಳೀಯರ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ತಮ್ಮ ಸಾಂಪ್ರದಾಯಿಕ ಶೈಲಿಯಲ್ಲಿ, ಬೆಂಗಳೂರಿನ ಪೊಲೀಸರು ಈ ಪ್ರಕರಣದ ಕುರಿತು ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಹಾಸ್ಯ ಶೈಲಿಯ ಪ್ರತಿಕ್ರಿಯೆ
ಪೊಲೀಸರ ಹಂಚಿದ ವಿಡಿಯೊದಲ್ಲಿ ಮೊದಲು ಆರೋಪಿಯ ಅವಾಜ್‌ ದೃಶ್ಯವಿದ್ದು, ನಂತರ ಜನಪ್ರಿಯ ಕನ್ನಡ ಚಿತ್ರ ‘ಸೂರ್ಯವಂಶ’ದ ಡೈಲಾಗ್‌ – “ಈ ಫಿಗರ್‌ನ ಎಲ್ಲೋ ನೋಡ್ದಂಗಯ್ತಲ್ಲ!” – ಎಂಬ ಹಾಸ್ಯಭರಿತ ಸಂಭಾಷಣೆ ಸೇರಿಸಲಾಗಿದೆ. ಅಂತಿಮವಾಗಿ, ಎಫ್‌ಐಆರ್‌ ಪ್ರತಿಯನ್ನು ತೋರಿಸಿ, ಪ್ರಕರಣಕ್ಕೆ ಸೀರಿಯಸ್‌ ಟಚ್‌ ನೀಡಿದ್ದಾರೆ.

ಈ ಘಟನೆಯಿಂದ ಕೋರಮಂಗಲದ ಸಾರ್ವಜನಿಕರಲ್ಲಿ ಭಯ ಮೂಡಿದ್ದರೂ, ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದು, ಇದೀಗ ಆರೋಪಿಯ ಕತೆ ಅದೆಷ್ಟೋ ಮೆಮೇ ಪೇಜ್‌ಗಳಲ್ಲಿ ಹಾಸ್ಯಕ್ಕಾಗಿ ಬಳಸಲ್ಪಡುತ್ತಿದೆ!

nazeer ahamad

Recent Posts

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

1 hour ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

6 hours ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

21 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

1 day ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago