ಬೆಂಗಳೂರು, ಆಗಸ್ಟ್ 1 – ಮನೆಗೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಯುವ ನಾಯಕ ಮತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂಬ ತೀರ್ಪು ನೀಡುವ ಮೂಲಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ನಿರ್ಧಾರ ಪ್ರಕಟಿಸಿದೆ.
ನ್ಯಾಯಾಧೀಶ ನ್ಯಾ. ಸಂತೋಷ್ ಗಜನಾನನ ಭಟ್ ಅವರು ತೀರ್ಪು ವಾಚಿಸಿ, ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಪ್ರಜ್ವಲ್ ವಿರುದ್ಧದ ಆರೋಪ ಸಾಬೀತಾದಂತಾಗಿದೆ ಎಂದು ಘೋಷಿಸಿದರು. ಇಂದು (ಆಗಸ್ಟ್ 1) ಬೆಳಿಗ್ಗೆ ತೀರ್ಪು ಪ್ರಕಟವಾಗಿದ್ದು, ತೀರ್ಪಿಗೆ ಹಾಜರಾಗುವಂತೆ ಕೋರ್ಟ್ ನೋಟಿಸ್ ನೀಡಿದ್ದರಿಂದ ಪ್ರಜ್ವಲ್ ಅವರನ್ನು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ತೀರ್ಪು ಪ್ರಕಟಗೊಂಡ ತಕ್ಷಣ ಪ್ರಜ್ವಲ್ ಭಾವುಕತೆಗೆ ಜಾರಿದ್ದು, ಕೋರ್ಟ್ ಕೊಠಡಿಯಲ್ಲಿ ಕಣ್ಣೀರಿಟ್ಟರು. ನಂತರ ಪೊಲೀಸರು ಅವರನ್ನು ಕೋರ್ಟ್‌ನಿಂದ ಹಿಡಿದು ಜೈಲಿಗೆ ಕರೆದುಕೊಂಡು ಹೋದರು.
ಈ ತೀರ್ಪು ಸಂಬಂಧಿಸಿದಂತೆ ಒಂದು ಪ್ರಕರಣಕ್ಕೆ ಮಾತ್ರ ಆಗಿದ್ದು, ಪ್ರಜ್ವಲ್ ವಿರುದ್ಧ ಇನ್ನೂ ಮೂರು ಅತ್ಯಾಚಾರ ಸಂಬಂಧಿತ ಪ್ರಕರಣಗಳು ಮುಂದುವರಿದಿವೆ.
ಈ ಹಿಂದೆಯೇ ಜುಲೈ 28ರಂದು ವಾದವಿವಾದ ನಡೆಯಿದ್ದು, ತೀರ್ಪನ್ನು ಜುಲೈ 30ರಂದು ಪ್ರಕಟಿಸಲಾಗುವುದು ಎಂದು ನಿರ್ಧರಿಸಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ತೀರ್ಪು ಪ್ರಕಟಣೆ ದಿನಾಂಕ ಇಂದಿಗೆ (ಆಗಸ್ಟ್ 1) ಮುಂದೂಡಲಾಗಿತ್ತು.
ಪ್ರಜ್ವಲ್ ರೇವಣ್ಣ ವಿರುದ್ಧದ ಈ ತೀರ್ಪು ಜೆಡಿಎಸ್ ಪಕ್ಷಕ್ಕೂ ರಾಜಕೀಯವಾಗಿ ದೊಡ್ಡ ಬಡಿತ ನೀಡುವ ಸಾಧ್ಯತೆ ಇದೆ. ಮುಂದಿನ ಹಂತದಲ್ಲಿ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುವ ವಿಚಾರಣೆ ಶೀಘ್ರವೇ ನಡೆಯಲಿದೆ.
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…
ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…
ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…
ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…