Categories: CrimeLatest

ಪೋಕ್ಸೊ ಆರೋಪಿ ಪರಾರಿ ಪ್ರಕರಣ: ಅಫಜಲಪುರ ಠಾಣೆ PSI ಸೋಮಲಿಂಗ ಒಡೆಯರ್ ಅಮಾನತು

ಪೋಕ್ಸೊ ಪ್ರಕರಣದ ಆರೋಪಿಯೊಬ್ಬ ಪೊಲೀಸ್ ಠಾಣೆಯಿಂದಲೇ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯ PSI ಸೋಮಲಿಂಗ ಒಡೆಯರ್ ಅವರನ್ನು ಅಮಾನತುಗೊಳಿಸಲಾಗಿದೆ.

ಕರ್ತವ್ಯ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಡ್ಡೂರು ಶ್ರೀನಿವಾಸಲು ಅಮಾನತು ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣ ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಆರೋಪಿಯ ಪರಾರಿಯ ನಂತರ ತನಿಖೆ ಮತ್ತು ಇಲಾಖಾ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಮೂವರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿತ್ತು.

ಇದೀಗ ಠಾಣೆಯ ಜವಾಬ್ದಾರಿ ಅಧಿಕಾರಿಯಾಗಿದ್ದ PSI ಸೋಮಲಿಂಗ ಒಡೆಯರ್ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದ್ದು, ಇಲಾಖೆಯೊಳಗಿನ ನಿರ್ಲಕ್ಷ್ಯಕ್ಕೆ ಕಟ್ಟುನಿಟ್ಟಿನ ಸಂದೇಶ ನೀಡಲಾಗಿದೆ.

ಪೋಕ್ಸೊ ಆರೋಪಿಯ ಪರಾರಿ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಇನ್ನಷ್ಟು ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಭ್ರಷ್ಟರ ಬೇಟೆ

Recent Posts

ಲೀಲಾ ದೂರವಾದ ಕೋಪ: ಮನೆಗೆ ನುಗ್ಗಿ ತಾಯಿಯ ಮೇಲೆ ಸೈಕಲ್ ಎತ್ತಿ ಹಾಕಿದ ಮಂಜ!

ಬೆಂಗಳೂರು: ಹುಳಿಮಾವು ಸಮೀಪದ ಬಸವನಪುರದಲ್ಲಿ ಲೀಲಾ-ಮಂಜ-ಸಂತು ನಡುವಿನ ತ್ರಿಕೋನ ಪ್ರೇಮಕಥೆ ಮತ್ತೆ ಸದ್ದು ಮಾಡಿದೆ. ಪತ್ನಿ ಲೀಲಾ ದೂರವಾಗಿದ್ದಾಳೆ ಎಂಬ…

11 hours ago

ಮದುವೆಯ ಆಸೆ ತೋರಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ, ₹10 ಸಾವಿರ ಕಳುಹಿಸಿ ಕೈ ತೊಳೆದುಕೊಳ್ಳಲು ಮುಂದಾದ SI ವಿರುದ್ಧ ಕೇಸ್!

ಮೀರತ್: ರಕ್ಷಣೆ ನೀಡಬೇಕಾದ ಪೊಲೀಸನೇ ಯುವತಿಯೊಬ್ಬಳಿಗೆ ವಂಚನೆ ಎಸಗಿದ ಆರೋಪ ಉತ್ತರ ಪ್ರದೇಶದ ಮೀರತ್‌ನಲ್ಲಿ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ…

11 hours ago

ಪ್ರೀತಿಯ ಹೆಸರಲ್ಲಿ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ: ಯುವತಿ ಆತ್ಮಹತ್ಯೆ; ಪ್ರಿಯಕರನ ವಿರುದ್ಧ ಕೇಸ್

ಬೆಂಗಳೂರು: ಪ್ರೀತಿಯ ಹೆಸರಿನಲ್ಲಿ ಯುವತಿಗೆ ನಿರಂತರ ಕಿರುಕುಳ ನೀಡಿ, ಖಾಸಗಿ ಫೋಟೋ-ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪ…

11 hours ago

ಪತಿ-ಪ್ರೇಮಿ ಇಬ್ಬರ ಜತೆಗೂ ಸಂಸಾರಕ್ಕೆ ಅನುಮತಿ ಕೊಡಿ! ಪೊಲೀಸರ ಮುಂದೆ ಮಹಿಳೆಯ ವಿಚಿತ್ರ ಬೇಡಿಕೆ

ಸೀತಾಪುರ: ಪೊಲೀಸ್ ಠಾಣೆಗಳಿಗೆ ಪ್ರತಿದಿನ ಹಲವು ರೀತಿಯ ದೂರುಗಳು ಬರುತ್ತವೆ. ಆದರೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮಹಮೂದಾಬಾದ್ ಕೊತ್ವಾಲಿ…

11 hours ago

ರೈಲಿನ ಸೂಟ್‌ಕೇಸ್‌ನಲ್ಲಿ ಮಾನವ ದೇಹದ ತುಂಡುಗಳು; ತನಿಖೆ ವೇಳೆ ಬಯಲಾಯ್ತು ಬೆಚ್ಚಿಬೀಳಿಸುವ ರಹಸ್ಯ!

ತಮಿಳುನಾಡಿನ ಚೆನ್ನೈನಲ್ಲಿ ಮಹಿಳೆಯೊಬ್ಬರನ್ನು ಭೀಕರವಾಗಿ ಹತ್ಯೆಗೈದು, ಆಕೆಯ ದೇಹದ ಭಾಗಗಳನ್ನು ಬಳಸಿ ಬಿರಿಯಾನಿ ತಯಾರಿಸಿರುವ ಆರೋಪ ಕೇಳಿಬಂದಿದ್ದು, ಇಡೀ ಪ್ರಕರಣವೇ…

12 hours ago

ಚನ್ನರಾಯಪಟ್ಟಣದಲ್ಲಿ ಯುವತಿ ಆತ್ಮಹತ್ಯೆ; ಪ್ರೇಮ ವೈಫಲ್ಯ ಎಂದು ಕುಟುಂಬಸ್ಥರ ಅನುಮಾನ

ಚನ್ನರಾಯಪಟ್ಟಣ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಅಂಬಿಕ ನಗರದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು…

12 hours ago