
ಚಿಕ್ಕಬಳ್ಳಾಪುರ ಜಿಲ್ಲೆಯ ರಾಶ್ಚೆರುವು ಗ್ರಾಮದಲ್ಲಿ ಪಿಡಿಓ ಹಾಗೂ ಇತರ ಸದಸ್ಯರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಗ್ರಾಮ ಪಂಚಾಯತಿ ಅಧ್ಯಕ್ಷೆಯೊಬ್ಬರಿಗೆ ಪಿಡಿಓ ಅಶೋಕ್ ಅಶ್ಲೀಲ ಮೆಸೇಜ್ ಕಳುಹಿಸಿ “ನಾನು ನಿನ್ನ ಪ್ರೀತಿಸುತ್ತೇನೆ” ಎಂದು ಸಂದೇಶ ರವಾನಿಸಿರುವುದಾಗಿ ಆರೋಪ ಕೇಳಿ ಬಂದಿದೆ.
ಅಧ್ಯಕ್ಷೆಯೂ ಪಿಡಿಓ ಅಶೋಕ್‌ಗೂ ವಿವಾಹಿತರಾಗಿದ್ದು, ಇದರ ನಡುವೆಯೂ ಈ ರೀತಿಯ ಸಂದೇಶ ಕಳುಹಿಸಿದ್ದು ಅಧ್ಯಕ್ಷೆಯಲ್ಲಿ ಆಕ್ರೋಶ ಉಂಟುಮಾಡಿದೆ. ಅಶ್ಲೀಲ ಮೆಸೇಜ್ ಪ್ರಕರಣದ ಜೊತೆಗೆ ಇನ್ನೂ ಹಲವು ಆರೋಪಗಳು ಲಗ್ಗೆ ಇಟ್ಟಿವೆ.
ಅಧ್ಯಕ್ಷೆ ನೀಡಿರುವ ದೂರಿನಲ್ಲಿ, ಪಿಡಿಓ ಅಶೋಕ್ ಮತ್ತು ಮಾಜಿ ಅಧ್ಯಕ್ಷೆಯ ಪತಿ ಎ.ಎನ್. ಬಾಬು ರೆಡ್ಡಿ, ಹಾಲಿ ಸದಸ್ಯ ನಾಗೇಶ್ ಮತ್ತು ಮತ್ತೊಬ್ಬ ಭಾನು ಪ್ರಕಾಶ್ ಎಂಬವರು ಖಾಲಿ ಚೆಕ್ಗಳಿಗೆ ಸಹಿ ಹಾಕುವಂತೆ ಬಲವಂತ ಮಾಡಿರುವುದು, ಅವರ ವಿರುದ್ಧ ಜಾತಿ ನಿಂದನೆ ಮಾಡಿರುವುದೂ ಸೇರಿದೆ ಎಂದು ದೂರಲಾಗಿದೆ.
ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪಿಡಿಓ ಸೇರಿದಂತೆ ನಾಲ್ವರು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.