Latest

ಕಛೇರಿಗೇ ಬಾರದ ಪಿಡಿಓ ಮುತ್ತಣ್ಣ ಡೋಣಿಗೆ ಎರಡೆರಡು ಪಂಚಾಯತಿ ಬೇಕಿತ್ತಾ?

ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ನಾಯನೆಗಲಿ ಗ್ರಾಮ ಪಂಚಾಯತಿಯಲ್ಲಿನ ಭ್ರಷ್ಟಾಚಾರದ ಪುರಾಣ ಕಥೆ. ಗ್ರಾಮ ಪಂಚಾಯಿತಿ 15 ನೇಯ ಹಣಕಾಸಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಪಂಚಾಯತಿಯ ವೆಬ್ಸೈಟ್ ನಲ್ಲಿ ಹಾಕಿರುವಂತಹ ಬಿಲ್ಲುಗಳು ಸಾಕ್ಷಿಯಾಗಿವೆ.
ದಿನಾಂಕ 26/06/2023 ರಂದು ತೆಗೆದ ಬಿಲ್ ವೋಚರಗಳು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದಾವೆ.
ಏಕೆಂದರೆ ಆ ದಿನ ಅಮೋಘ ಏಜೆನ್ಸಿ ಇಳಕಲ್ ರವರಿಗೆ 1)43,669 2)69,258 3)48,095 4)64,758 5)46,386 ಈ ಐದು ಬಿಲ್ಲುಗಳನ್ನು ಹಾಕಿದ್ದು,
ಅದರಲ್ಲಿ ಸರಿಯಾದ ಮಾಹಿತಿ ಇಲ್ಲದೇ ಪ್ರಶ್ನಾರ್ಥಕ(?) ಚಿನ್ಹೆಗಳು ಎದ್ದು ಕಾಣುತ್ತಿವೆ.
ಪ್ರಶ್ನಾರ್ಥಕ ಚಿಹ್ನೆಗಳು ಹಣ ಹೊಡೆಯಲು ಹಾಕುತಿದ್ದಾರೋ?ಅಥವಾ ತಾಂತ್ರಿಕ ದೋಷದಿಂದ ಈ ರೀತಿ ಆಗುತ್ತಿದೆಯೋ?
ಇದಕ್ಕೆ ಉತ್ತರ ಪಿಡಿಓ ರವರೆ ನೀಡಬೇಕಿದೆ.
ಮಾಹಿತಿ ಕೇಳಲು ಸಂಪರ್ಕಿಸಿದಾಗ ಸ್ಪಷ್ಟ ಮಾಹಿತಿ ನೀಡದೆ ತಪ್ಪಿಸಿಕೊಳ್ಳುತಿದ್ದಾರೆ. ಇವರ ಈ ನಡೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ದಿನಾಂಕ 21/08/2023 ರಂದು ಬಸವರಾಜ ತಿಪ್ಪಣ್ಣ ಬುದನೂರು ಎಂಬುವವರಿಗೆ 50,000 ರೂ ಗಳ ಮತ್ತೊಂದು ಬಿಲ್ಲನ್ನು ಹಾಕಿದ್ದು ಆ ಬಿಲ್ಲಿನ ವಿವರಣೆಯಲ್ಲಿಯು ಸಹ ಪ್ರಶ್ನಾರ್ಥಕ ಚಿನ್ಹೆಗಳು ಕಂಡು ಬಂದಿವೆ. ಪಿಡಿಓ ಮುತ್ತಣ್ಣ ಡೋಣಿ ಸರಿಯಾಗಿ ಪಂಚಾಯತಿಗೆ ಬರುವುದಿಲ್ಲ ಎಂಬ ಆರೋಪವು ಸಹ ಕೇಳಿಬರುತ್ತಿದೆ. ಗ್ರಾಮ ಅಭಿವೃದ್ದಿ ಆಗದ ಕಾರಣ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿರಬಹುದು ಎಂದು ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಈ ವ್ಯಕ್ತಿ ಕಾರ್ಯ ನಿರ್ವಹಿಸುತ್ತಿರುವ ಒಂದು ಪಂಚಾಯತಿ ಯಲ್ಲಿ ಇಷ್ಟೊಂದು ಆರೋಪಗಳು ಕೇಳಿಬರುತ್ತಿದ್ದು.ಇಂತವರನ್ನೆ ಎರೆಡೆರಡು ಪಂಚಾಯತಿಗೆ ನೇಮಕ ಮಾಡಿರುತ್ತಾರೆ.
ಒಂದೇ ಕೆಲಸ ಮಾಡದ ಸೊಂಬೇರಿಗೆ ಎರಡೆರಡು ಕೆಲಸವನ್ನು ವಹಿಸಿದಂತಾಗಿದೆ ಇಲ್ಲಿನ ಗ್ರಾಮ ಪಂಚಾಯಿತಿ ಪರಿಸ್ಥಿತಿ. ಈತನಿಗೆ ವಹಿಸಿದ ಒಂದು ಪಂಚಾಯತಿ ನಾಯನೆಗಲಿ ಆದರೆ ಮತ್ತೊಂದು ಚಿಕ್ಕ ಮ್ಯಾಗೇರಿ.
ಈ ಎರಡು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಅಭಿವೃದ್ದಿ ಕುಂಠಿತಗೊಂಡಲ್ಲಿ ಅದಕ್ಕೆ ಮೂಲ ಕಾರಣ ಈತನೇ ಎಂದರು ತಪ್ಪಾಗಲಾರದು.
ಸರ್ಕಾರದಲ್ಲಿ ಸಿಬ್ಬಂದಿಗಳ ಕೊರತೆ ಇದ್ದಲ್ಲಿ ಯೋಗ್ಯತೆ ಇರುವವರನ್ನು ಬಳಸಿಕೊಂಡು ಎರಡೆರಡು ಪಂಚಾಯತಿಗೆ ನೇಮಕ ಮಾಡಿಕೊಳ್ಳಬೇಕು, ಅದನ್ನು ಬಿಟ್ಟು ಇಂತವರಿಗೆ ಕೆಲಸ ವಹಿಸಿದರೆ ಗ್ರಾಮದ ಅಭಿವೃದ್ಧಿ ಹೇಗೆ ತಾನೇ ಆಗುತ್ತದೆ.
ಸರಿಯಾಗಿ ಕಾರ್ಯ ನಿರ್ವಹಿಸದ ವ್ಯಕ್ತಿಗೆ ಎರಡೆರಡು ಪಂಚಾಯತಿಗೆ ನೇಮಕ ಮಾಡುವ ಮೂಲಕ ಇ.ಓ ರವರು ಎಡವಿದ್ದಾರಾ? ಅಥವಾ ಇದರ ಹಿಂದೆ ಯಾವುದಾದರೂ ದುರುದ್ದೇಶವಿದೆಯಾ?
ಜಿಲ್ಲಾ ಪಂಚಾಯತಿ ಸಿ.ಇ.ಓ ರವರು ಈ ವಿಚಾರದ ಬಗ್ಗೆ ಆದಷ್ಟು ಬೇಗ ಗಮನ ಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಒತ್ತು ಕೊಡಬೇಕಿದೆ.

ವರದಿ: ಸಂಗಪ್ಪ ಚಲವಾದಿ

ಭ್ರಷ್ಟರ ಬೇಟೆ

Recent Posts

ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ; ಬೇಸತ್ತು ಚರಂಡಿ ಸ್ವಚ್ಛಗೊಳಿಸಿದ ಮಹಿಳೆ.

ಕೊಟ್ಟೂರು:- ತಾಲ್ಲೂಕಿನ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹರಾಳು ಗ್ರಾಮದ ದುಮ್ಮಾಡಿ ಕೆಂಚಮ್ಮ ಎಂಬ ಮಹಿಳೆಯೋರ್ವರು ತಮ್ಮ…

11 hours ago

ಬಸವನ ಬಾಗೇವಾಡಿಯಲ್ಲಿ ಅಕ್ರಮ LPG ರೀಫಿಲ್ಲಿಂಗ್ ಆರೋಪ: ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ನಗರದಲ್ಲಿ ಗೃಹಬಳಕೆಯ LPG ಸಿಲಿಂಡರ್‌ಗಳಿಂದ ಆಟೋಗಳಿಗೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿದೆ ಎಂಬ ಆರೋಪ…

17 hours ago

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

2 days ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

2 days ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

3 days ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

3 days ago