ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ), ಜುಲೈ 4: ಆತ್ಮಹತ್ಯೆಗೆ ಯತ್ನವಾಗಿ ಆರಂಭವಾದ ಘಟನೆ, ಬದುಕುಳಿಯುವ ಪವಾಡದಂತೆ ಅಂತ್ಯವಾಯಿತು. ಬೆಂಗಳೂರಿನ ಕಾನೂನು ವಿದ್ಯಾರ್ಥಿನಿಯೊಬ್ಬರು ಗುರುವಾರ ಸಂಜೆ ಕಾವೇರಿ ನದಿಗೆ ಹಾರಿ ಬದುಕು ಕೊನೆಗೊಳಿಸಲು ಮುಂದಾದರೂ, ನದಿಯ ಮಧ್ಯೆ ಮರದ ಒಂದು ಕೊಂಬೆಗೆ ಸಿಕ್ಕಿಕೊಂಡು ಒಂದು ರಾತ್ರಿಯಂತೂ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಅವರನ್ನು ಜೀವಂತವಾಗಿ ರಕ್ಷಿಸಲಾಗಿದೆ.

ಬದುಕುಳಿದ ಯುವತಿಯನ್ನು ಪವಿತ್ರಾ (19) ಎಂದು ಗುರುತಿಸಲಾಗಿದ್ದು, ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ. ಕಾವೇರಿ ನದಿಗೆ ಹಾರಿದ ಬಳಿಕ ಸುಮಾರು ಐದು ಕಿಲೋಮೀಟರ್ ದೂರ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಅವರು, ತೀವ್ರ ನೀರಿನ ಹರಿವಿನ ನಡುವೆಯೇ ಹಂಗರಹಳ್ಳಿ ಬಳಿ ನದಿಯ ಮಧ್ಯಭಾಗದಲ್ಲಿದ್ದ ಮರದ ಢಾಳಕ್ಕೆ ಸಿಕ್ಕಿಕೊಂಡಿದ್ದರು.

ರಾತ್ರಿ ಪೂರಾ ಮರದ ಮೇಲೆಯೇ ಕುಳಿತು ಜೀವದ ಹೋರಾಟ ನಡೆಸಿದ್ದ ಪವಿತ್ರಾ, ಶುಕ್ರವಾರ ಮುಂಜಾನೆ “ಕಾಪಾಡಿ” ಎಂದು ಮೊರೆ ಹಾಕಿದಾಗ, ಆಕೆಯ ಕೂಗನ್ನು ಕೇಳಿದ ರೈತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅರಕೆರೆ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಎನ್. ವಿನೋದಕುಮಾರ್ ನೇತೃತ್ವದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಅವಳಿ ಬಲೆಗಳ ಸಹಾಯದಿಂದ ಪವಿತ್ರಾಳನ್ನು ಸುರಕ್ಷಿತವಾಗಿ ಕರೆಗೆ ಎಳೆದಿದ್ದಾರೆ.

ಬಳಿಕ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಥಮ ಚಿಕಿತ್ಸೆಯ ಬಳಿಕ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಪವಿತ್ರಾ ಆತ್ಮಹತ್ಯೆಗೆ ಯತ್ನಿಸಿದ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

ಪಿಎಸ್‌ಐ ವಿನೋದಕುಮಾರ್ ಮಾತಿನ ಪ್ರಕಾರ, ನೀರಿನ ಸೆಳೆತ ಹೆಚ್ಚು ಇದ್ದಿದ್ದರೆ ಪವಿತ್ರಾಳ ಪ್ರಾಣ ಉಳಿಯುವುದು ಕಷ್ಟವಾಗುತ್ತಿತ್ತು. “ಅವಳು ಬದುಕಿದ್ದೇ ಪವಾಡ.

error: Content is protected !!