Latest

ರೆಸ್ಟೋರೆಂಟ್ ನಲ್ಲಿ ನೋ ಎಂಟ್ರಿ : ತುಂಡು ತುಂಡು ಬಟ್ಟೆ ಹಾಕಿದರೆ ಮಾತ್ರ ಪ್ರವೇಶ ಎಂದ ರೆಸ್ಟೋರೆಂಟ್ ಸಿಬ್ಬಂದಿ!

ನವದೆಹಲಿ: ಡ್ರೆಸ್ ಕೋಡ್ ನಿಯಮವನ್ನು ನೆಪವಿಟ್ಟು, ದೆಹಲಿಯೊಂದು ರೆಸ್ಟೋರೆಂಟ್‌ ದಂಪತಿಗೆ ಪ್ರವೇಶ ನಿರಾಕರಿಸಿದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಹಿಳೆ ಚೂಡಿದಾರ್ ಧರಿಸಿದ್ದಕ್ಕಾಗಿ ಒಳಗೆ ಬಿಡದಿರುವ ವಿಡಿಯೋವೈರಲ್‌ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಆಗಸ್ಟ್‌ 3ರಂದು ಪಿತಂಪುರ ಪ್ರದೇಶದಲ್ಲಿರುವ ಟುಬಾಟ ಬಾರ್ ಅಂಡ್‌ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ವಿಡಿಯೋದಲ್ಲಿ, ಪುರುಷ ಟೀ-ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರೆ, ಮಹಿಳೆ ಸಲ್ವಾರ್-ಕಮೀಜ್ ತೊಟ್ಟಿದ್ದಾರೆ. ಆದರೆ, ರೆಸ್ಟೋರೆಂಟ್ ಸಿಬ್ಬಂದಿ ‘ತುಂಡು ತುಂಡು ಬಟ್ಟೆ ಹಾಕಿದರೆ ಮಾತ್ರ ಪ್ರವೇಶ’ ಎಂದು ಹೇಳಿ, ದಂಪತಿಯನ್ನು ಒಳಗೆ ಬಿಡಲಿಲ್ಲ ಎಂಬ ಆರೋಪ ಬಂದಿದೆ.

ವಿಡಿಯೋದಲ್ಲಿ ವ್ಯಕ್ತಿಯೊಬ್ಬರು, “ಪಾಶ್ಚಿಮಾತ್ಯ ಉಡುಗೆ ತೊಟ್ಟವರಿಗೆ ಎಂಟ್ರಿ, ಆದರೆ ನಮ್ಮ ದೇಸಿ ಉಡುಗೆ ತೊಟ್ಟವರಿಗೆ ನೋ ಎಂಟ್ರಿ ಯಾಕೆ? ಶಾರ್ಟ್ಸ್ ಹಾಕಿದವರಿಗೆ ಒಳಗೆ ಬಿಡ್ತೀರ, ಚೂಡಿದಾರ್ ಹಾಕಿದವರಿಗೆ ಬೇಡ ಅಂತೀರ” ಎಂದು ಪ್ರಶ್ನಿಸಿರುವುದು ಕೇಳಿಸಿತು. ಇನ್ನೊಬ್ಬರು ತಮಾಷೆಯಾಗಿ, “ರಾಷ್ಟ್ರಪತಿ ಅಥವಾ ದೆಹಲಿ ಸಿಎಂ ಸೀರೆ ಧರಿಸಿ ಬಂದರೂ ಒಳಗೆ ಬಿಡ್ತೀರಾ?” ಎಂದು ಕೇಳಿರುವುದು ಸಹ ವೈರಲ್‌ ಆಗಿದೆ.

ಘಟನೆಯ ಬಳಿಕ, ದೆಹಲಿ ಸಚಿವ ಕಪಿಲ್ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ಈಗಿನಿಂದ ಡ್ರೆಸ್ ಕೋಡ್ ಆಧಾರಿತ ನಿರ್ಬಂಧಗಳನ್ನು ಕೈಬಿಡಲಾಗುತ್ತದೆ. ಭಾರತೀಯ ಉಡುಗೆ ತೊಟ್ಟವರಿಗೂ ಸಂಪೂರ್ಣ ಸ್ವಾಗತ” ಎಂದು ಹೇಳಿದ್ದಾರೆ.

ಸಚಿವರ ಮಧ್ಯಸ್ಥಿಕೆ ಮತ್ತು ಜನರ ಒತ್ತಡದ ಬಳಿಕ, ರೆಸ್ಟೋರೆಂಟ್ ಆಡಳಿತ ಕ್ಷಮೆ ಕೇಳಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಉಡುಗೆ ಆಧಾರದ ಮೇಲೆ ಗ್ರಾಹಕರಿಗೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಈ ಘಟನೆ ಡ್ರೆಸ್ ಕೋಡ್‌ಗಳನ್ನು ಹೇಗೆ ಜಾರಿಗೊಳಿಸಬೇಕು ಎಂಬ ಪ್ರಶ್ನೆಯನ್ನು ಮತ್ತೆ ಎಬ್ಬಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು, “ಉಡುಗೆ ವ್ಯಕ್ತಿತ್ವವನ್ನು ಅಳೆಯುವ ಮಾಪಕವಾಗಬಾರದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

nazeer ahamad

Recent Posts

52ರಲ್ಲೂ ಮಲೈಕಾ ಅರೋರಾ ಲವ್ ಲೈಫ್‌ ಸದ್ದು: ನಬೀಲ್ ನದ್ಲವಿ ಜೊತೆ ಫೋಟೋ ವೈರಲ್, ಹೊಸ ಸಂಬಂಧದ ಗುಸುಗುಸು!

ಮುಂಬೈ: ಬಾಲಿವುಡ್‌ನ ಫಿಟ್ನೆಸ್ ಹಾಗೂ ಫ್ಯಾಷನ್ ಐಕಾನ್ ಮಲೈಕಾ ಅರೋರಾ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ…

46 minutes ago

ಬೈಕ್‌ಗೆ ಬೆಂಕಿ ಹಾಕಿದ್ದು ರಾಜಕೀಯ ದ್ವೇಷಕ್ಕಲ್ಲ; ಪತಿಯನ್ನೇ ಕೊಲ್ಲಲು ಪತ್ನಿಯ ಸಂಚು! 6 ಮಂದಿ ಬಂಧನ

ಚಂದ್ರಗಿರಿ (ತಿರುಪತಿ): ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ಭಾವಿಸಲಾಗಿದ್ದ ಪ್ರಕರಣವೊಂದು ತನಿಖೆಯ ಬಳಿಕ ಬೇರೆಯದೇ ತಿರುವು…

48 minutes ago

ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಪಾಲಿಗೆ ಯಮನಾದ: 6 ದಿನದ ಹಸುಗೂಸಿನೊಂದಿಗೆ ಪರಾರಿ!

ದಾವಣಗೆರೆ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಸಾವಿಗೆ ಕಾರಣನಾದ ಆರೋಪ ಕೇಳಿಬಂದಿದ್ದು, ಮೃತದೇಹವನ್ನು ಪೊಲೀಸ್ ಠಾಣೆ ಬಳಿಯ ರಸ್ತೆಯಲ್ಲಿ ಬಿಟ್ಟು…

49 minutes ago

ಹಾಡಹಗಲೇ ಪಡಿತರ ಅಕ್ಕಿ ಸಾಗಾಟ: ಆಹಾರ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ..!

ಬಾಗಲಕೋಟೆ: ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು…

21 hours ago

₹5 ಸಾವಿರಕ್ಕೆ ರೂಮ್‌ಗೆ ಬಂದ ಯುವತಿ; ಬಿಯರ್‌ನಲ್ಲಿ ಅಮಲು ಬೆರೆಸಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್!

ಪ್ರವಾಸಕ್ಕೆಂದು ಹೋಗಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೋಸದ ಜಾಲಕ್ಕೆ ಸಿಲುಕಿ ಹಣ ಹಾಗೂ ಚಿನ್ನ ಕಳೆದುಕೊಂಡಿರುವ ಘಟನೆ…

1 day ago

₹20 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ!

ಹಾವೇರಿ: ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಅಧಿಕಾರಿಯೊಬ್ಬರು ಲೋಕಾಯುಕ್ತ…

1 day ago