ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್‌, ವೀವ್ಸ್‌ ಹಾಗೂ ಫಾಲೋವರ್ಸ್‌ ಹೆಚ್ಚಿಸಿಕೊಳ್ಳುವ ಹುಚ್ಚು ಕೆಲವರನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತಿದೆ ಎಂಬುದಕ್ಕೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದಿರುವ ಈ ಘಟನೆ ಸಾಕ್ಷಿಯಾಗಿದೆ. ನವವಧುವೊಬ್ಬಳು ತನ್ನ ದಾಂಪತ್ಯ ಜೀವನದ ಅತ್ಯಂತ ಖಾಸಗಿ ಕ್ಷಣಗಳಿಗೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ನವವಧು ತನ್ನ ಮದುವೆಯ ಮೊದಲ ರಾತ್ರಿ ಕುರಿತ ಖಾಸಗಿ ವಿಚಾರಗಳನ್ನು ಕ್ಯಾಮೆರಾ ಮುಂದೆ ಹಂಚಿಕೊಂಡಿದ್ದಾಳೆ ಎನ್ನಲಾಗಿದೆ. ಈ ವಿಡಿಯೋವನ್ನು ಆಕೆಯ ಪತಿಯೇ ಚಿತ್ರೀಕರಿಸಿದ್ದಾನೆ ಎಂಬ ಮಾಹಿತಿ ಹರಿದಾಡುತ್ತಿದೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಆದ ಬಳಿಕ ಕ್ಷಣಾರ್ಧದಲ್ಲೇ ಭಾರೀ ವೈರಲ್ ಆಗಿದ್ದು, ಕೇವಲ 18 ಗಂಟೆಗಳಲ್ಲಿ ಬರೋಬ್ಬರಿ 110 ಮಿಲಿಯನ್‌ಗೂ ಹೆಚ್ಚು, ಅಂದರೆ ಸುಮಾರು 11 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಆದರೆ, ವಿಡಿಯೋ ವೈರಲ್ ಆಗುತ್ತಿದ್ದಂತೆ ಅದರಲ್ಲಿನ ಖಾಸಗಿ ಹಾಗೂ ಆಕ್ಷೇಪಾರ್ಹ ಅಂಶಗಳ ಕುರಿತು ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳು ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಬಳಸುವ ವೇದಿಕೆಗಳಾಗಿರುವುದರಿಂದ ಇಂತಹ ಕಂಟೆಂಟ್‌ಗಳ ಪ್ರಸಾರಕ್ಕೆ ಕಡಿವಾಣ ಹಾಕಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ರಾತ್ರೋರಾತ್ರಿ ಪ್ರಸಿದ್ಧಿ ಪಡೆಯುವ ಉದ್ದೇಶದಿಂದ ಖಾಸಗಿ ಬದುಕಿನ ಮಿತಿಗಳನ್ನು ಮೀರಿ ಕಂಟೆಂಟ್‌ ಹಂಚಿಕೊಳ್ಳುವುದು ಸರಿಯೇ ಎಂಬ ಪ್ರಶ್ನೆಯನ್ನೂ ಹಲವರು ಎತ್ತಿದ್ದಾರೆ. ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೋಗಳು ವೇಗವಾಗಿ ಹರಡುವುದರಿಂದ ಅವುಗಳನ್ನು ನಿಯಂತ್ರಿಸುವ ಜವಾಬ್ದಾರಿ ಪ್ಲಾಟ್‌ಫಾರ್ಮ್‌ಗಳು ಹಾಗೂ ಬಳಕೆದಾರರ ಮೇಲೂ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಒಟ್ಟಿನಲ್ಲಿ, ವ್ಯೂಸ್‌ ಮತ್ತು ಫಾಲೋವರ್ಸ್‌ಗಾಗಿ ಖಾಸಗಿತನದ ಮಿತಿಯನ್ನು ಮೀರುವುದು ಎಷ್ಟು ಸರಿ? ಎಂಬ ಚರ್ಚೆಗೆ ಈ ಘಟನೆ ಕಾರಣವಾಗಿದೆ.

Related News

error: Content is protected !!