ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಅರಶನಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕವಲಗಿ ಗ್ರಾಮದ ಸರ್ಕಾರಿ ಶಾಲೆಯ ಹಿಂದುಗಡೆಯಲ್ಲಿನ ದುಸ್ಥಿತಿ ಇದು. ರಸ್ತೆ ತುಂಬಾ ಹದಗೆಟ್ಟಿದ್ದು, ರಸ್ತೆಯಲ್ಲಿಯೇ ಸಂಪೂರ್ಣ ನೀರು ನಿಂತು ಗಬ್ಬೆದ್ದು ನಾರುತಿದೆ. ಈ ಅವ್ಯವಸ್ಥೆಯಿಂದ ಗ್ರಾಮದ ಜನರಿಗೆ ಹಲವು ರೋಗಗಳ ಭೀತಿ ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಅದೇ ರಸ್ತೆಯಲ್ಲಿಯೇ ದಿನಾಲೂ ಸೈಕಲ್ ಮೋಟಾರ್ ಗಳಿಂದ ಗ್ರಾಮದ ರೈತರು ಮನೆಗೆ ಹಾಗೂ ಹೊಲಗಳಿಗೆ ಹೋಗಬೇಕು. ರಸ್ತೆಯ ಮೇಲೆ ಇರುವ ಈ ಕೊಳಚೆಯ ಪರಿಸ್ಥಿತಿ ನೋಡಿದರೆ ಗ್ರಾಮಕ್ಕೆ ಚರಂಡಿ ವ್ಯವಸ್ಥೆ ಸರಿಯಾಗಿ ಇರದೇ ಇರುವುದು ಕಂಡುಬರುತ್ತದೆ.

ಗ್ರಾಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈರಪ್ಪ ದೇವೇಂದ್ರಪ್ಪ ಬಡಿಗೇರ ಗಮನಹರಿಸದೇ ಇರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ದಿವ್ಯ ನಿರ್ಲಕ್ಷ ವಹಿಸುತ್ತಿದ್ದು ಗ್ರಾಮದ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ವರದಿ ಕಂಡ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ಕೊಟ್ಟು ರಸ್ತೆಗೆ ಕಾಂಕ್ರೀಟ್ ವ್ಯವಸ್ಥೆ ಅಥವಾ ಘರ್ಸು(ಮರಂ) ಹಾಕುವ ಮೂಲಕ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬುವುದು ಭ್ರಷ್ಟರ ಬೇಟೆ ಪತ್ರಿಕೆಯ ಆಶಯವಾಗಿದೆ.

ವರದಿ: ಸಂಗಪ್ಪ ಚಲವಾದಿ

Related News

error: Content is protected !!