ಬೆಂಗಳೂರು ನಗರದ ವಿಶೇಷ ಸರ್ಕಾರಿ ಅಭಿಯೋಜಕರು 70 ನೇಯ ಅಪರ ಸಿಟಿಸಿವಿಲ್ & ಸತ್ರ ನ್ಯಾಯಾಲಯ ನೀಡಿದ ಆದೇಶವೆಂದರೆ ಪ್ರಕರಣದ ಆರೋಪಿಯಾದ. ರಮೇಶ ಬಿನ್ ಅಂಕಯ್ಯ ಪೋಲಿಸ್ ಕಾನ್ಸ್‌ಟೇಬಲ್ ಆಗಿದ್ದು ಪಿರ್ಯಾದುದಾರರಾದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ದವರು ನೀಡಿದ ದೂರಿನ ಅನ್ವಯ ಆರೋಪಿ ರಮೇಶ ಬಿನ್ ಅಂಕಯ್ಯ ಪೊಲೀಸ್ ಕಾನ್ಸಟೇಬಲ್ ಆಗಿದ್ದು ತಾನು ಪರಿಶಿಷ್ಟ ಜಾತಿಗೆ ಸೇರದೇ ಇದ್ದರೂ ಸಹ ತಾನು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೆಂದು ಜಾತಿ ಪ್ರಮಾಣ ಪತ್ರವನ್ನು ನೀಡಿ ಪೋಲಿಸ್ ಕಾನ್ಸ್‌ಟೇಬಲ್ ಹುದ್ದೆಗೆ ಸೇರಿರುತ್ತಾನೆ.

ಈ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ಆರೋಪಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದು ಸರ್ಕಾರಕ್ಕೆ ಮತ್ತು ಪರಿಶಿಷ್ಟ ಜಾತಿಯವರಿಗೆ ಮೋಸ ಮಾಡಿದ್ದಾನೆಂದು ತೀರ್ಮಾನಿಸಿ ಅರೋಪಿಗೆ ಭಾದಂಸಂ ಕಲಂ. 420, ಅಡಿಯಲ್ಲಿನ ಅಪರಾಧಕ್ಕೆ 2 ವರ್ಷಗಳ ಜೈಲು ಶಿಕ್ಷೆಯನ್ನು ಮತ್ತು 10,000/- ರೂ. ದಂಡವನ್ನು ದಂಡ ಕಟ್ಟಲು ತಪ್ಪಿದಲ್ಲಿ ಮತ್ತೆ 3 ತಿಂಗಳ ಸಾದಾ ಶಿಕ್ಷೆಯನ್ನು ಆರೋಪಿಗೆ ವಿಧಿಸಿ ಆದೇಶ ಮಾಡಿರುತ್ತದೆ.ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರಾಜೇಶ್ ಕರ್ಣಂ ರವರು ತೀರ್ಪು ನೀಡಿದ್ದು, ರಾಜ್ಯದ ಪರವಾಗಿ ಶ್ರೀ. ವಿ.ಶ್ರೀರಾಮ, ವಿಶೇಷ ಸರ್ಕಾರಿ ಅಭಿಯೋಜಕರು, ಪ್ರಕರಣವನ್ನು ನಡೆಸಿ ವಾದ ಮಂಡಿಸಿದ್ದರು.

Related News

error: Content is protected !!