Latest

ಬಳ್ಳಾರಿಯಲ್ಲಿ ಪಾಲಿಕೆ ವಾಹನ ದುರಂತ: ಆಟವಾಡುತ್ತಿದ್ದ 3 ವರ್ಷದ ಮಗು ಸಾವಿಗೆ ಶರಣು

ಬಳ್ಳಾರಿ, ಜುಲೈ 29: ಬಳ್ಳಾರಿಯಲ್ಲಿ ಮನಕಲಕುವ ಅಪಘಾತ ಸಂಭವಿಸಿದ್ದು, ಕಸ ಸಂಗ್ರಹ ಮಾಡುವ ಮಹಾನಗರ ಪಾಲಿಕೆ ವಾಹನದ ಹರಿವಿನಿಂದ ಮೂರು ವರ್ಷದ ಮಗು ಪ್ರಾಣ ಕಳೆದುಕೊಂಡಿದೆ. ಈ ದುರ್ಘಟನೆ ನಗರದ ಬಾಪೂಜಿ ನಗರದಲ್ಲಿ ನಡೆದಿದೆ.

ಮೃತ ಬಾಲಕನನ್ನು ಸಮರ್ ಮತ್ತು ಶೈಲಜಾ ದಂಪತಿಯ ಪುತ್ರ ವಿಕ್ಕಿ ಎಂದು ಗುರುತಿಸಲಾಗಿದೆ. ಮಗು ತಮ್ಮ ಮನೆಯ ಮುಂದೇ ಆಟವಾಡುತ್ತಿದ್ದ ವೇಳೆ, ಕಸ ಕಲೆ ಹಾಕುವ ಪಾಲಿಕೆಯ ವಾಹನ ನಿಯಂತ್ರಣ ತಪ್ಪಿ ಬಂದು ಮಗುವಿನ ಮೇಲೆ ಹರಿದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ.

ಘಟನೆ ನಡೆದ ಕೂಡಲೇ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ಸಾಗಿಸಲತ್ನಿಸಿದರೂ, ಆತ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದರು. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬಳ್ಳಾರಿ ನಗರ ಪೊಲೀಸ್ ಇಲಾಖೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು ತಯಾರಿ ನಡೆಸಿದ್ದಾರೆ. ಇತ್ತ ಬಾಲಕನ ಸಾವಿನಿಂದ ಬಾಪೂಜಿ ನಗರದಲ್ಲಿ ದುಃಖದ ಛಾಯೆ ಮಡಿದಿದ್ದು, ಸಾರ್ವಜನಿಕರು ಪಾಲಿಕೆಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಜತೆಗೆ, ಮಹಾನಗರ ಪಾಲಿಕೆಯ ಕಸ ಸಂಗ್ರಹ ವಾಹನಗಳ ನಿರ್ವಹಣೆ, ಚಾಲಕರ ತರಬೇತಿ ಹಾಗೂ ಸುರಕ್ಷತಾ ಕ್ರಮಗಳ ಕೊರತೆ ಕುರಿತು ಪ್ರಶ್ನೆಗಳು ಉದ್ಭವವಾಗಿವೆ.

ಈ ಘಟನೆ ಸಂಬಂಧಿಸಿ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.

nazeer ahamad

Recent Posts

52ರಲ್ಲೂ ಮಲೈಕಾ ಅರೋರಾ ಲವ್ ಲೈಫ್‌ ಸದ್ದು: ನಬೀಲ್ ನದ್ಲವಿ ಜೊತೆ ಫೋಟೋ ವೈರಲ್, ಹೊಸ ಸಂಬಂಧದ ಗುಸುಗುಸು!

ಮುಂಬೈ: ಬಾಲಿವುಡ್‌ನ ಫಿಟ್ನೆಸ್ ಹಾಗೂ ಫ್ಯಾಷನ್ ಐಕಾನ್ ಮಲೈಕಾ ಅರೋರಾ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ…

12 minutes ago

ಬೈಕ್‌ಗೆ ಬೆಂಕಿ ಹಾಕಿದ್ದು ರಾಜಕೀಯ ದ್ವೇಷಕ್ಕಲ್ಲ; ಪತಿಯನ್ನೇ ಕೊಲ್ಲಲು ಪತ್ನಿಯ ಸಂಚು! 6 ಮಂದಿ ಬಂಧನ

ಚಂದ್ರಗಿರಿ (ತಿರುಪತಿ): ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ಭಾವಿಸಲಾಗಿದ್ದ ಪ್ರಕರಣವೊಂದು ತನಿಖೆಯ ಬಳಿಕ ಬೇರೆಯದೇ ತಿರುವು…

14 minutes ago

ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಪಾಲಿಗೆ ಯಮನಾದ: 6 ದಿನದ ಹಸುಗೂಸಿನೊಂದಿಗೆ ಪರಾರಿ!

ದಾವಣಗೆರೆ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಸಾವಿಗೆ ಕಾರಣನಾದ ಆರೋಪ ಕೇಳಿಬಂದಿದ್ದು, ಮೃತದೇಹವನ್ನು ಪೊಲೀಸ್ ಠಾಣೆ ಬಳಿಯ ರಸ್ತೆಯಲ್ಲಿ ಬಿಟ್ಟು…

15 minutes ago

ಹಾಡಹಗಲೇ ಪಡಿತರ ಅಕ್ಕಿ ಸಾಗಾಟ: ಆಹಾರ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ..!

ಬಾಗಲಕೋಟೆ: ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು…

21 hours ago

₹5 ಸಾವಿರಕ್ಕೆ ರೂಮ್‌ಗೆ ಬಂದ ಯುವತಿ; ಬಿಯರ್‌ನಲ್ಲಿ ಅಮಲು ಬೆರೆಸಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್!

ಪ್ರವಾಸಕ್ಕೆಂದು ಹೋಗಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೋಸದ ಜಾಲಕ್ಕೆ ಸಿಲುಕಿ ಹಣ ಹಾಗೂ ಚಿನ್ನ ಕಳೆದುಕೊಂಡಿರುವ ಘಟನೆ…

1 day ago

₹20 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ!

ಹಾವೇರಿ: ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಅಧಿಕಾರಿಯೊಬ್ಬರು ಲೋಕಾಯುಕ್ತ…

1 day ago