Categories: CrimeLatest

ಕೆಎಸ್‌ಆರ್‌ಟಿಸಿ ಬಸ್ ತಡೆದು ಸಿಬ್ಬಂದಿ ಮೇಲೆ ಹಲ್ಲೆ: 24 ಗಂಟೆಯೊಳಗೆ ಮೂವರು ಆರೋಪಿಗಳ ಬಂಧನ

ಸಿದ್ದಾಪುರ: ಕೆಎಸ್‌ಆರ್‌ಟಿಸಿ ಬಸ್‌ಗೆ ದಾರಿ ಬಿಡುವ ವಿಚಾರವಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಕರ್ತವ್ಯ ನಿರತ ಚಾಲಕ ಹಾಗೂ ಕಂಡಕ್ಟರ್ ಮೇಲೆ ಕಬ್ಬಿಣದ ಜಾಕ್‌ನಿಂದ ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮೂವರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶಿರಸಿಯ ಮರಾಠಿಕೊಪ್ಪದ ಸಂದೀಪ ಲಕ್ಷ್ಮಣ ವಾಲ್ಮೀಕಿ, ಸೈಫ್ ಅಲಿ ಸೈಯದ್ ಹಾಗೂ ಶಿರಸಿ ತಾಲೂಕಿನ ಮರಿಗುಡ್ಡೆಯ ಹರ್ಷವರ್ಧನ ಕೃಷ್ಣ ನಾಯ್ಕ ಎಂದು ಗುರುತಿಸಲಾಗಿದೆ.

ಈ ಕುರಿತು ಕೆಎಸ್‌ಆರ್‌ಟಿಸಿ ಚಾಲಕ, ಶಿರಸಿ ತಾಲೂಕಿನ ಕಾನಗೋಡ ನಿವಾಸಿ ಭಾಸ್ಕರ ಮಂಜುನಾಥ ಪಟಗಾರ ಅವರು ನೀಡಿದ ದೂರಿನ ಆಧಾರದ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ–2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.

ದಾರಿ ಬಿಡುವ ವಿಚಾರಕ್ಕೆ ಜಗಳ

ಅಕ್ಟೋಬರ್ 1ರಂದು ಆರೋಪಿಗಳು ಓಮಿನಿ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗೆ ದಾರಿ ಬಿಡುವ ವಿಚಾರವಾಗಿ ಚಾಲಕ ಭಾಸ್ಕರ ಅವರೊಂದಿಗೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಬಳಿಕ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಮತ್ತೆ ಬಸ್ ಬಳಿ ಬಂದು ಗಲಾಟೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವೇಳೆ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಗಣೇಶ ಉಪೇಂದ್ರ ನಾಯ್ಕ ಅವರನ್ನು ಬಸ್ಸಿನಿಂದ ಕೆಳಗೆ ಎಳೆದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಜಗಳ ಬಿಡಿಸಲು ಮುಂದಾದ ಚಾಲಕ ಭಾಸ್ಕರ ಅವರ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ.

ಸಂದೀಪ ಕಬ್ಬಿಣದ ಜಾಕ್‌ನಿಂದ ಭಾಸ್ಕರ ಅವರ ತಲೆಗೆ ಹೊಡೆಯಲು ಯತ್ನಿಸಿದ್ದು, ಅವರು ತಪ್ಪಿಸಿಕೊಂಡ ಪರಿಣಾಮ ಜಾಕ್ ಬಲಗೈ ಬೆರಳಿಗೆ ಬಿದ್ದು ಗಾಯವಾಗಿದೆ ಎನ್ನಲಾಗಿದೆ. ಇದೇ ವೇಳೆ ಕಂಡಕ್ಟರ್ ಗಣೇಶ ಅವರ ಬಲಭುಜಕ್ಕೂ ಕಬ್ಬಿಣದ ಜಾಕ್‌ನಿಂದ ಹೊಡೆದು ಗಾಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಸೈಫ್ ಅಲಿ ಸೈಯದ್ ಚಾಲಕ ಭಾಸ್ಕರ ಅವರ ಮುಖಕ್ಕೆ ಗುದ್ದಿದ್ದಾನೆ ಹಾಗೂ ಆರೋಪಿಗಳು ಇಬ್ಬರಿಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

24 ಗಂಟೆಯೊಳಗೆ ಆರೋಪಿಗಳ ಪತ್ತೆ

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಉಪವಿಭಾಗದ ಡಿವೈಎಸ್‌ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಠಾಣೆಯ ಪಿಐ ಜೆ.ಬಿ. ಸೀತಾರಾಮ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ತನಿಖಾ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ 24 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದೆ. ಬಳಿಕ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ನಾಗಪ್ಪ ಹಾಗೂ ಶಾಂತಿನಾಥ ಕೆ. ಪಾಸಾನೆ ಸೇರಿದಂತೆ ರಮೇಶ ಎಸ್. ಗೌಡ, ಸುಭಾಶ ಬಿ. ನಾಯ್ಕ, ರಮೇಶ ಸಿ. ಕೂಡಲ, ಮಂಜಪ್ಪ ಟಿ., ರಾಘವೇಂದ್ರ, ಚೇತನ ಹಲಗೇರಿ, ರಾಜು ಎಂ., ಗಿರೀಶಯ್ಯ, ಸಂದೀಪ ನಾಯ್ಕ, ಅಭಿಜಿತ್ ಹಾಗೂ ಸಂತೋಷ ಮಲ್ಲೂರು ಪಾಲ್ಗೊಂಡಿದ್ದರು.

ತನಿಖೆಗೆ ಸಂತೋಷ ತಳವಾರ, ಚಂದ್ರಶೇಖರ ನಾಯ್ಕ, ನಾಗರಾಜ ತಿಮ್ಮಾಪುರ, ರವಿ ಕ್ಯಾಲಕೊಂಡ ಹಾಗೂ ವಿನಾಯಕ್ ಮಡಿವಾಳ ಸಹಕರಿಸಿದ್ದಾರೆ. ಪ್ರಕರಣವನ್ನು ತ್ವರಿತವಾಗಿ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ ಸಿದ್ದಾಪುರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಜಾಮೀನು ಪಡೆದ ವ್ಯಕ್ತಿಯ ಹಾಜರಾತಿಗೆ ₹3 ಸಾವಿರ ಲಂಚ: ಲೋಕಾಯುಕ್ತ ಬಲೆಗೆ ಪೊಲೀಸ್ ಕಾನ್‌ಸ್ಟೆಬಲ್

ಕಲಬುರಗಿ: ಜಾಮೀನು ಪಡೆದ ವ್ಯಕ್ತಿಯ ಹಾಜರಾತಿ ದಾಖಲಿಸಲು ₹3 ಸಾವಿರ ಲಂಚ ಸ್ವೀಕರಿಸಿದ ಆರೋಪದ ಮೇಲೆ ಸುಲೇಪೇಟ ಪೊಲೀಸ್ ಠಾಣೆಯ…

8 hours ago

ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್‌ಮಾಲ್‌ಗೆ ಬ್ರೇಕ್: ಯಜಮಾನಿಯ ಹೆಸರಿನಲ್ಲೇ ಸಿಮ್ ಕಡ್ಡಾಯ

ಮದ್ದೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮ ಹಾಗೂ ನಕಲಿ ಫಲಾನುಭವಿಗಳನ್ನು ತಡೆಯುವ ಉದ್ದೇಶದಿಂದ ಸರ್ಕಾರ ಮತ್ತಷ್ಟು ಕಟ್ಟುನಿಟ್ಟಿನ…

9 hours ago

“ಸೀಕ್ರೆಟ್ ಗರ್ಲ್‌ಫ್ರೆಂಡ್ ಆಗು, ಒಳ್ಳೆ ಅವಕಾಶ ಕೊಡ್ತೀನಿ” – 70ರ ಹರೆಯದ ನಿರ್ಮಾಪಕನ ಕರಾಳ ಮುಖ ಬಿಚ್ಚಿಟ್ಟ ನಟಿ ಯುಕ್ತಿ ಕಪೂರ್!

ಮುಂಬೈ: ಚಿತ್ರರಂಗದ ಗ್ಲಾಮರ್ ಜಗತ್ತಿನ ಹಿಂದೆ ಅಡಗಿರುವ ಕಹಿ ಸತ್ಯಗಳನ್ನು ಹಲವು ನಟಿಯರು ಬಹಿರಂಗಪಡಿಸುತ್ತಲೇ ಬಂದಿದ್ದಾರೆ. ಇದೀಗ ಕಿರುತೆರೆ ಹಾಗೂ…

3 days ago

ಗರ್ಭಿಣಿ ಪತ್ನಿಯನ್ನು ಬಿಟ್ಟು ಪ್ರೇಯಸಿ ಜೊತೆ ಎಸ್ಕೇಪ್! 7 ವರ್ಷಗಳ ಬಳಿಕ ಇನ್‌ಸ್ಟಾ ರೀಲ್ಸ್‌ನಿಂದ ಸಿಕ್ಕಿಬಿದ್ದ ಪತಿ!

ಹರ್ದೋಯಿ/ಲೂಧಿಯಾನ: ಗರ್ಭಿಣಿ ಪತ್ನಿಯನ್ನು ಬಿಟ್ಟು ಪ್ರೇಯಸಿ ಜೊತೆ ಓಡಿಹೋಗಿ, ಮತ್ತೊಂದು ಮದುವೆಯಾಗಿ ಹೊಸ ಸಂಸಾರ ಹೂಡಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ ಏಳು…

3 days ago

ಸೆಕ್ಸ್ ಟಿಪ್ಸ್ ನೀಡುತ್ತಿದ್ದ ಮಹಿಳೆಯರೇ ಟಾರ್ಗೆಟ್! ನಕಲಿ ಖಾತೆ ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ; ಆರೋಪಿ ಅರೆಸ್ಟ್

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸೆಕ್ಸ್ ಟಿಪ್ಸ್ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು, ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ…

3 days ago

₹4,000 ಪಡೆದು ಅರ್ಧ ಗಂಟೆಯಲ್ಲೇ ಎಸ್ಕೇಪ್! ಪೇಂಟರ್‌ನ ಕೈಚಳಕ ಕಂಡು ಶಾಕ್ ಆದ ಮುಂಬೈ ಯುವತಿ

ಮುಂಬೈ: ನಂಬಿಕೆಯಿಂದ ಕೋಣೆಗೆ ಬಣ್ಣ ಬಳಿಯಲು ಕರೆಸಿಕೊಂಡ ಪೇಂಟರ್‌ನ ಕಳಪೆ ಕೆಲಸ ಕಂಡು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿಯೊಬ್ಬಳು…

3 days ago